Shivarjkumar and Bhavana New Movie: ಸ್ಯಾಂಡಲ್‌ವುಡ್‌ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಜಾಕಿ ಭಾವನಾ ಇಬ್ಬರು ಒಟ್ಟಿಗೆ  ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲು 'ಟಗರು' ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ಶಿವನ ಜೋಡಿಯಾಗಿ ಭಾವನ ಪಂಚಮಿಯಾಗಿ ಮಿಂಚಿದ್ದು, ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ತದನಂತರ ಇವರಿಬ್ಬರೂ 'ಭಜರಂಗಿ-2' ಚಿತ್ರದಲ್ಲಿ ಮತ್ತೆ ಒಂದಾಗಿ ಅಭಿನಯಿಸಿದ್ದರು. ಆದರೆ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.


COMMERCIAL BREAK
SCROLL TO CONTINUE READING

ನಟ ಶಿವರಾಜ್‌ಕುಮಾರ್  '45' ಹಾಗೂ 'ಬೈರತಿ ರಣಗಲ್' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ಈ ನಟ ತೆಲುಗಿನಲ್ಲಿ ರಾಮ್‌ಚರಣ್ ಜೊತೆಗೆ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ತಮಿಳು ಕಥೆಗಳನ್ನು ಕೂಡ ಕೇಳುತ್ತಿದ್ದಾರೆ. ಇದೆಲ್ಲದರ ನಡುವೆ ಶಿವಣ್ಣ ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಚಿತ್ರದಲ್ಲಿಯೂ ಬಣ್ಣ ಹಚ್ಚಿತ್ತಿರುವುದು ಪಕ್ಕಾ ಆಗಿದೆ. 'ಉತ್ತರಕಾಂಡ' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 


ಇದನ್ನೂ ಓದಿ: ಎಲ್ಲಿ ಹೋದ್ರು "ಗಾಳಿಪಟ ಬ್ಯೂಟಿ" ಡೈಸಿ..! 2012 ರ ನಂತರ ಸಿನಿಮಾ ರಂಗದಿಂದ ದೂರ ಉಳಿಯಲು ಆ ಘಟನೆ ಕಾರಣ


ಇನ್ನೊಂದು ಕಡೆ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣನ  ಜೋಡಿಯಾಗಿ ನಟಿ ಭಾವನಾ ಮೆನನ್ ತೆರೆ ಹಂಚಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ. ಇತ್ತೀಚೆಗೆ ನಟಿ ಭಾವನ ಓಟಿಟಿ ಪ್ಲೇನಲ್ಲಿ ಜನವರಿಯಲ್ಲೇ ಉತ್ತರಕಾಂಡ' ಸಿನಿಮಾಗಾಗಿ ತಮ್ಮನ್ನು ಸಂಪರ್ಕಿಸಿದ್ದಾರೆಂಬ ಮಾಹಿತಿಯನ್ನು ನೀಡಿದ್ದಾರೆ. ಈ ನಟಿ ಕೊನೆಯದಾಗಿ ಜನವರಿಯಲ್ಲಿ ತೆರೆಕಂಡ ಸಸ್ಪೆನ್ಸ್ ಥ್ರಿಲ್ಲರ್ 'ಕೇಸ್ ಆಫ್ ಕೊಂಡಾಣ' ಚಿತ್ರದಲ್ಲಿ ಎಸಿಪಿ ಲಕ್ಷ್ಮಿ ಆಗಿ ಭಾವನಾ ಅಭಿನಯಿಸಿದ್ದರು.


ಈಗಾಗಲೇ ಉತ್ತರಕಾಂಡ ಸಿನಿಮಾದಲ್ಲಿ ಡಾಲಿ ಧನಂಜಯ್‌ ಗಬ್ರು ಸತ್ಯ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಇತ್ತೀಚೆಗೆ ಈ ಚಿತ್ರದಲ್ಲಿ ನಟಿ ಚೈತ್ರಾ ಆಚಾರ್ 'ಲಚ್ಚಿ' ಎನ್ನುವ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಹಾಗೆಯೇ ದೂದ್ ಪೇಡ ದಿಗಂತ್ ಕೂಡ ಮಲ್ಲಿಗೆ ಎನ್ನುವ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ನಿರ್ದೇಶಕ ಯೋಗರಾಜ್ ಭಟ್ ಸಹ ಪಾಟೀಲ ಆಗಿ  ಬಣ್ಣ ಹಚ್ಚುತ್ತಿದ್ದಾರೆ.ಇವರೆಲ್ಲರ ಫಸ್ಟ್‌ ಲುಕ್‌ ಕೂಡ ರಿವೀಲ್‌ ಆಗಿದ್ದೂ, ಇನ್ನೇನು ನಟ ಶಿವರಾಜ್‌ಕುಮಾರ್‌ ಹಾಗೂ ಭಾವನ ನಿರ್ವಹಿಸಲಿರುವ ಪಾತ್ರದ ಬಗ್ಗೆ ತಿಳಿಯಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.