ಮಾರ್ಟಿನ್ ಟೀಸರ್ ಬಿಡುಗಡೆಯಾದ ಬಳಿಕ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಕನ್ನಡದ ಸಿನಿಮಾ ಟೀಸರ್ ಆ ಲೆವೆಲ್ಲಿಗೆ ಸೌಂಡ್ ಮಾಡಿದ್ದು ಎಲ್ಲರಿಗೂ ಖುಷಿ ಕೊಟ್ಟಿತ್ತು. ಜೊತೆಗೆ ಯೂಟ್ಯೂಬ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿದ್ದ 'ಮಾರ್ಟಿನ್’ ಟೀಸರ್ ನ ಕಿಡಿಗೇಡಿಗಳು ಹ್ಯಾಕ್ ಮಾಡೋ ಮೂಲಕ ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇಲ್ಲಿಯವರೆಗೂ 83ಮಿಲಿಯನ್ ವ್ಯೂಸ್ ಪಡೆದುಕೊಂಡಿದ್ದ ‘ಮಾರ್ಟಿನ್’ ಟೀಸರ್ ಇನ್ನೂ ಹೆಚ್ಚು ವ್ಯೂಸ್ ಪಡ್ಕೋಳ್ಳುತ್ತೆ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಆದ್ರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಮಾರ್ಟಿನ್ ಚಿತ್ರದ ಆಫೀಶಿಯಲ್ ಟೀಸರ್ ನೋಡಿದ   ಪ್ರತಿಯೊಬ್ಬರೂ ಈ ಸಿನಿಮಾ ಇತಿಹಾಸ ಸೃಷ್ಟಿಸುತ್ತೆ ಅಂತ ಮಾತನಾಡಿಕೊಳ್ಳುತ್ತಿದ್ದರು.


ಇದನ್ನೂ ಓದಿ- Samyuktha Hegde: ಬಿಕಿನಿ ತೊಟ್ಟ ಕನ್ನಡದ ಈ ನಟಿಯ ನೋಡಿದ್ರೆ.. ಜೀವ ಝಲ್‌ ಅಂತದೆ, ಬಾಡಿ ಝುಮ್‌ ಅಂತದೆ!!


ಈ ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ಜನ ನೋಡುವ ಮೂಲಕ ಕಡಿಮೆ ಸಮಯದಲ್ಲಿ 10 ಲಕ್ಷ ಜನ ನೋಡಿದ ಟೀಸರ್ ಎಂಬ ಹೆಗ್ಗಳಿಗೆ ಮಾರ್ಟಿನ್ ಪಾತ್ರವಾಗಿದೆ.


ಇದೀಗ ಸಿನಿಮಾದ ಟೀಸರ್ ಬರೋಬ್ಬರಿ 83 ಮಿಲಿಯನ್ ಜನರಿಂದ ವೀಕ್ಷಿಸಲ್ಪಡುವ ಮೂಲಕ ಹೊಸ ದಾಖಲೆ ಬರೆದಿದ್ದು, ನಿರ್ದೇಶಕ ಎ ಪಿ ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಮಾರ್ಟಿನ್ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿ ಒಂದು ಕಡೆ ಬ್ಯುಸಿಯಾಗಿದ್ರೆ, ನಿರ್ಮಾಪಕ ಉದಯ್ ಮೆಹ್ತಾ ಮತ್ತು ನಿರ್ದೇಶಕ ಎಪಿ ಅರ್ಜುನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರವನ್ನು ತಲುಪಿಸಲು ಸಾಕಷ್ಟು ಪ್ಲಾನ್​ಗಳನ್ನು ಮಾಡುತ್ತಿದ್ದಾರೆ. 


ಇದನ್ನೂ ಓದಿ- Samantha Viral Video: ಇಂಗ್ಲಿಷ್ ಮಾತನಾಡಿ ಟ್ರೋಲ್ ಆದ ನಟಿ ಸಮಂತಾ


ಈ ಮಧ್ಯೆ ಮಾರ್ಟಿನ್ ಚಿತ್ರತಂಡಕ್ಕೆ ಕಿಡಿಗೇಡಿಗಳು  ಕೊಟ್ಟ ಶಾಕ್​ ಗೆ  ಎಲ್ಲಾರು ನೋವು ಅನುಭವಿಸೋ ರೀತಿ ಆಗಿದೆ. ಈ ಸಿನಿಮಾದ ಟೀಸರ್ ಈ ಮಟ್ಟಕ್ಕೆ ರಿಚ್ ಆಗಿರೋದನ್ನ ಸಹಿಸದ ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡುವ ಮೂಲಕ ಮಾರ್ಟಿನ್ ಚಿತ್ರತಂಡಕ್ಕೆ ಆಘಾತವನ್ನು ನೀಡಿದ್ದಾರೆ. ವಿಷ್ಯ ತಿಳಿದ ನಿರ್ಮಾಪಕ ಉದಯ್ ಕೆ ಮೆಹ್ತಾ ಕೂಡಲೇ ಕ್ರಮಕ್ಕೆ ಮುಂದಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.