Pushpa The Rule: ಪುಷ್ಪ-2 ನಲ್ಲಿ ಶ್ರೀವಲ್ಲಿ ಸಾಯುತ್ತಾಳಾ? ಮೌನ ಮುರಿದ ನಿರ್ಮಾಪಕರು!
Pushpa The Rule: `ಪುಷ್ಪ: ದಿ ರೈಸ್` ಚಿತ್ರದ ಮುಂದಿನ ಭಾಗ `ಪುಷ್ಪ: ದಿ ರೂಲ್` ಚಿತ್ರೀಕರಣ ಆಗಸ್ಟ್‌ನಲ್ಲಿ ಪ್ರಾರಂಭವಾಗಲಿದೆ. ರಶ್ಮಿಕಾ ಮಂದಣ್ಣ ಅವರ ‘ಶ್ರೀವಲ್ಲಿ’ ಪಾತ್ರದ ಸಾವಿನ ಘಟನೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆಯೇ ಎಂಬ ಬಗ್ಗೆ ನಿರ್ಮಾಪಕರು ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
Pushpa The Rule: ಸೌತ್ ಚಿತ್ರ 'ಪುಷ್ಪ: ದಿ ರೈಸ್' ಭಾರೀ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿದ್ದ ನಟಿಸಿದ್ದಾರೆ. ಇದೀಗ ಈ ಚಿತ್ರದ ಎರಡನೇ ಭಾಗ 'ಪುಷ್ಪ: ದಿ ರೂಲ್' ತೆರೆಗೆ ಬರಲಿದೆ. ಇದಕ್ಕಾಗಿ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಆರಂಭವಾಗಬಹುದು. ಮೊದಲಿನಂತೆ ಈ ಚಿತ್ರದಲ್ಲೂ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ.. ಮಗನ ಆರೋಗ್ಯ ಸ್ಥಿತಿಯ ಬಗ್ಗೆ ತಂದೆ ಹೇಳಿದ್ದೇನು?
ಪಿಂಕ್‌ವಿಲ್ಲಾ ಜೊತೆಗಿನ ಸಂದರ್ಶನದಲ್ಲಿ ಚಿತ್ರದ ನಿರ್ಮಾಪಕ ವೈ.ರವಿಶಂಕರ್, 'ಪುಷ್ಪ-1' ಚಿತ್ರವನ್ನು ಸುಮಾರು 195 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ 400 ಕೋಟಿ ರೂ.ಗೆ ‘ಪುಷ್ಪ: ದಿ ರೂಲ್’ ಮಾಡುವ ಯೋಜನೆ ಇದೆ. ಚಿತ್ರದ ಸ್ಪೆಷಲ್ ಎಫೆಕ್ಟ್, ಪ್ರಚಾರ, ಸೆಟ್ ವಿನ್ಯಾಸಕ್ಕೆ ಈ ಬಜೆಟ್ ನಲ್ಲಿ ವಿಶೇಷ ಗಮನ ನೀಡಲಾಗುವುದು. ಚಿತ್ರದ ಶೂಟಿಂಗ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಆಗಸ್ಟ್‌ನಲ್ಲಿ ಸಿನಿಮಾ ನಿರ್ಮಾಣ ಆರಂಭವಾಗಬಹುದು ಎಂದಿದ್ದಾರೆ.
'ಪುಷ್ಪಾ-2' ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ‘ಶ್ರೀವಲ್ಲಿ’ ಪಾತ್ರ ಸಾಯುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಸತ್ಯಕ್ಕೆ ದೂರಾ ಎಂದಿದ್ದಾರೆ. ಈ ಬಗ್ಗೆ ಹಲವೆಡೆ ವದಂತಿಗಳು ಹರಿದಾಡುತ್ತಿವೆ. ಆದರೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಚಿತ್ರದಲ್ಲೂ 'ಶ್ರೀವಲ್ಲಿ' ಉಳಿದುಕೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ರವಿಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: Naga Chaitanya: ವಿಚ್ಛೇದನದ ಬಳಿಕ ಈ ನಟಿಯ ಜತೆ ನಾಗ ಚೈತನ್ಯ ಡೇಟಿಂಗ್!?
ಕಳೆದ ವರ್ಷ ಡಿಸೆಂಬರ್ 17 ರಂದು 'ಪುಷ್ಪ: ದಿ ರೈಸ್' ಚಿತ್ರ ಬಿಡುಗಡೆಯಾಯಿತು. ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ 'ಪುಷ್ಪರಾಜ್' ಮತ್ತು ರಶ್ಮಿಕಾ ಮಂದಣ್ಣ 'ಶ್ರೀವಲ್ಲಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಿದೆ. ಚಿತ್ರದ ಹಿಂದಿ ಅವತರಣಿಕೆ ಬರೋಬ್ಬರಿ 110 ಕೋಟಿ ಗಳಿಸಿದೆ. ಅಂದಿನಿಂದ ಪ್ರೇಕ್ಷಕರು ಅದರ ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.