ನವದೆಹಲಿ : ಸ್ಟೈಲ್ ಕಿಂಗ್ ಅಲ್ಲು ಅರ್ಜುನ್ ನಟಿಸಿರುವ ಸೂಪರ್ ಹಿಟ್ ಸಿನಿಮಾ ಚಿತ್ರ 'ಪುಷ್ಪ: ದಿ ರೈಸಿಂಗ್' ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿದೆ, ಭರ್ಜರಿಯಾಗಿ ಮುನ್ನೆಡೆಯುತ್ತಿದೆ. ವಿಶೇಷವೆಂದರೆ ಈ ಚಿತ್ರದ ಹಿಂದಿ ಅವತರಣಿಕೆ ಈಗ 100 ಕೋಟಿ ರೂ. ಕ್ಲಬ್ ಸೇರಿದೆ.
100 ಕೋಟಿ ಕ್ಲಬ್ ಸೇರಿದ 'ಪುಷ್ಪ'
‘ಪುಷ್ಪಾ(Pushpa Movie) ಎಂಬ ಹೆಸರು ಕೇಳಿದಾಗ ನಿನಗೇನು ಅರ್ಥವಾಯಿತು? ನಾನು ಬೆಂಕಿ, ತಲೆಬಾಗುವುದಿಲ್ಲ. ಎಷ್ಟೇ ಕಷ್ಟ ಬಂದರೂ ‘ಪುಷ್ಪ’ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಈಗ ಈ ಸಿನಿಮಾ ಸಾಬೀತು ಮಾಡಿದೆ. ಮೊದಲ ದಿನವೇ ಕೇವಲ 3 ಕೋಟಿ ಬ್ಯುಸಿನೆಸ್ ಮಾಡಿ ಏಳನೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿರುವ ಮೊದಲ ಸೌತ್ ಹಿಂದಿ ಅವತರಣಿಕೆ ಚಿತ್ರ ಇದಾಗಿದೆ.
ಇದನ್ನೂ ಓದಿ : ವೈರಲ್ ಫೋಟೋಗಳಲ್ಲಿರುವುದು ಪ್ರಿಯಾಂಕಾ-ನಿಕ್ ಮಗುವೇ? ಇಲ್ಲಿದೆ ಅಸಲಿ ವಿಚಾರ
ಎಲ್ಲಾ ಕಷ್ಟಗಳ ನಡುವೆಯೂ ಭರ್ಜರಿ ಕಲೆಕ್ಷನ್!
ತಮಾಷೆಯೆಂದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ(Amazon Prime Video)ದಲ್ಲಿ ಪ್ರತಿ ಭಾಷೆಯಲ್ಲೂ ಬಿಡುಗಡೆಯಾಗಿದೆ. ಇದರ ನಡುವೆಯೂ ಜನ ‘ಪುಷ್ಪ’ ನೋಡಲು ಥಿಯೇಟರ್ಗಳತ್ತ ಮುಖ ಮಾಡುತ್ತಿದ್ದಾರೆ.
#Pushpa Hindi -
Day 1 Collection - ₹ 3.30 cr
Lifetime Collection - ₹ 100 cr + nett.
Just like in the movie - The Rise of Pushpa at the box office is UNPRECEDENTED.. It braves every opponent on its way including 3rd wave of Covid.
BONAFIDE BLOCKBUSTER#AlluArjun pic.twitter.com/AxAApaQMeA
— Sumit Kadel (@SumitkadeI) January 31, 2022
ಇದಲ್ಲದೇ ಅಲ್ಲು ಅರ್ಜುನ್ ಅವರ ಈ ಚಿತ್ರದ ನಂತರ ಹಲವು ಚಿತ್ರಗಳು ತೆರೆಕಂಡಿವೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ಕರೋನಾ ವೈರಸ್ನಿಂದಾಗಿ ಅನೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಯಿತು. ಆದರೆ ಇದು ಚಿತ್ರದ ಕಲೆಕ್ಷನ್ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
With #PushpaHindi hitting the ₹ 100 NBOC mark, Icon Star @alluarjun joins an exclusive club of South Stars - #Prabhas and #Superstar @rajinikanth - who have done ₹ 100 Cr NBOC in Hindi..
— Ramesh Bala (@rameshlaus) January 31, 2022
'ಬಾಹುಬಲಿ'ಯನ್ನು ಸೋಲಿಸಬಲ್ಲೆ
ಈ ಹಿಂದೆ ಪ್ರಭಾಸ್ ಅಭಿನಯದ 'ಬಾಹುಬಲಿ: ದಿ ಬಿಗಿನಿಂಗ್'(Baahubali: The Beginning) ಹಿಂದಿ ಆವೃತ್ತಿಯೂ 100 ಕೋಟಿ ರೂ. ಕಲೆಕ್ಷನ್ ಮಾಡಿರುವುದನ್ನ ಗಮನಿಸಬೇಕಾದ ಸಂಗತಿ. ಆದರೆ ಈ ಚಿತ್ರ ಗಳಿಸಿದ್ದು ಬರೋಬ್ಬರಿ 117 ಕೋಟಿ ಮಾತ್ರ. ಇದೀಗ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಕೂಡ ಶೀಘ್ರದಲ್ಲೇ ಈ ದಾಖಲೆಯನ್ನು ಮುರಿಯಲಿದೆಯಂತೆ. ಆದರೆ ಈ ಚಿತ್ರ ಈಗಾಗಲೇ 100 ಕೋಟಿ ಗಳಿಸಿತ್ತು. ಆದರೆ ಈಗ ಅದರ ಹಿಂದಿ ಆವೃತ್ತಿಯೂ ಈ ನೂರು ಕೋಟಿ ಕ್ಲಬ್ಗೆ ಸೇರಿದೆ.
ಇದನ್ನೂ ಓದಿ : Bigg Boss 15 Finale: ತೇಜಸ್ವಿ ಪ್ರಕಾಶ್ ವಿನ್ನರ್, ಟ್ರೋಫಿಯೊಂದಿಗೆ ಸಿಕ್ಕ ನಗದು ಬಹುಮಾನವೆಷ್ಟು ಗೊತ್ತಾ..?
ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ
ಈಗ ಫೆಬ್ರವರಿ 11 ರಂದು ಭೂಮಿ ಪೆಡ್ನೇಕರ್ ಮತ್ತು ರಾಜ್ಕುಮಾರ್ ರಾವ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಬಧಾಯಿ ದೋ'(Badhaai Do) ಬಿಡುಗಡೆಯಾಗಲಿದೆ. ಹೀಗಿರುವಾಗ ‘ಪುಷ್ಪ’ದ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.