'ರಾಣಾ' ಈ ಚಿತ್ರ  ಟ್ರೀಲರ್ ಮತ್ತು ಹಾಡುಗಳಿಂದ ಇತ್ತೀಚಿಗೆ ಹವಾ ಕ್ರಿಯೇಟ್ ಮಾಡಿರೋ ಸಿನಿಮಾ. 'ಪಡ್ಡೆಹುಲಿ' ಫಿಲ್ಮ್  ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಕೆ ಮಂಜು ಇದೀಗ 'ರಾಣಾ'ನಾಗಿ ರಣರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರ ಇದೇ ನವೆಂಬರ್ 11ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ರಾಣಾ ಸಿನಿಮಾದ ಗೆಲುವಿಗಾಗಿ ಎಲ್ಲಾ ರೀತಿಯ ಸರ್ಕಸ್ ಮಾಡಿದ್ದಾರೆ. ಈ ಸಿನಿಮಾ ಮೂಲಕ ಕರುನಾಡಿನ ಹೆಮ್ಮೆಯ ಪುತ್ರನಾಗಬೇಕು ಎಂಬ ಹಂಬಲ ಮತ್ತು ಡ್ರೀಮ್ ಶ್ರೇಯಸ್ ಗಿದೆ. ಶ್ರೇಯಸ್ ಕೆ ಮಂಜು ಫೀಲ್ಡ್ ಗೆ ಹೊಸಬರಾದ್ರೂ ನಟನೆಗೂ ಸೈ ,ಡ್ಯಾನ್ಸಿಂಗಿಗೂ ಜೈ.. ಎಲ್ಲವನ್ನೂ ಅಚ್ಚುಕಟ್ಟಾಗಿ ಕಲಿತು ಈ  ಬಾರಿ ಭರ್ಜರಿ ಮನರಂಜನೆ ನೀಡಲು ಸಕಲ ರೀತಿಯಲ್ಲೂ ಸಕಲಕಲಾವಲ್ಲಭನಂತೆ ಸಿದ್ಧರಾಗಿದ್ದಾರೆ ಶ್ರೇಯಸ್ ಕೆ. ಮಂಜು.


ಇದನ್ನೂ ಓದಿ- ಭಾರೀ ಮೊತ್ತಕ್ಕೆ ಮಾರಾಟವಾಯಿತು "ಮಾಂಕ್ ದಿ ಯಂಗ್" ಚಿತ್ರದ ಹಾಡುಗಳು


ನಂದಕಿಶೋರ್ ನಿರ್ದೇಶನದ ಶ್ರೇಯಸ್ ಮಂಜು ನಟನೆಯ ‘ರಾಣಾ’ ಸಿನಿಮಾ ಇದೇ ನವೆಂಬರ್ 11ಕ್ಕೆ ರಿಲೀಸ್ ಆಗುತ್ತಿದ್ದು ನಿಮ್ಮ ಮೈಂಡ್ ನಲ್ಲಿ ಮತ್ತು ಮನದಲ್ಲಿ ಡೇಟ್ ಫಿಕ್ಸ್ ಮಾಡ್ಕೊಂಡು, ಥೀಯೇಟರ್ ಗೆ ಹೋಗಿ ಸಿನಿಮಾ ನೋಡ್ಕೊಂಡ್ ಎಂಜಾಯ್ ಮಾಡಿ.


ಇದನ್ನೂ ಓದಿ- 'ಸ್ಪೂಕಿ ಕಾಲೇಜಿ'ನಲ್ಲಿರೋ ದೆವ್ವದ ಕಥೆ ನೋಡಲು ನವೆಂಬರ್ 25ಕ್ಕೆ ತನಕ ಕಾಯಿರಿ...!


ರಾಣಾ ಸಿನಿಮಾದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ  ಶ್ರೇಯಸ್ ಗೆ ಜೊತೆಯಾಗಿದ್ದಾರೆ . ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದು , ಶೇಖರ್‌ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆದಿದ್ದಾರೆ. ಕನ್ನಡ ಸಿನಿಮಾ ಹೆಚ್ಚೆಚ್ಚು ನೋಡೋಣ..ಚಂದನವನವನ್ನ ಬೆಳೆಸೋಣ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.