'ಸ್ಪೂಕಿ ಕಾಲೇಜು'.. ವಿಭಿನ್ನ ಟೈಟಲ್, ಹಾಡು ಮತ್ತು ಟೀಸರ್ ನಿಂದ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿರೋ ಸಿನಿಮಾ. ಈ ಸಿನಿಮಾ ಇದೇ ನವೆಂಬರ್ ತಿಂಗಳ 25ರಂದು ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗುತ್ತಿದೆ. ಭಯಂಕರ ಮತ್ತು ಭಯಾನಕ ಸ್ಟೋರಿ ಹೊಂದಿರೋ ಈ ಸಿನಿಮಾದ ಮೇಲೆ ನಿರೀಕ್ಷೆಯಂತೂ ಬೆಟ್ಟದಷ್ಟು ಬೆಳೆದಿದೆ.
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಭರತ್ ಅವರೆ ಬರೆದಿದ್ದಾರೆ. ಭರತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಭರತ್ ಅವರಿಗೆ ಸಿನಿಮಾ ಅಂದ್ರೆ ಅಚ್ಚುಮೆಚ್ಚು. ಸಿನಿಮಾಗಾಗಿ ಸರ್ವಸ್ವ ಕೂಡ ತ್ಯಾಗ ಮಾಡಲು ಸಿದ್ಧ ಅನ್ನುತ್ತಾರೆ. 'ಸ್ಪೂಕಿ ಕಾಲೇಜು' ಸಿನಿಮಾ ಡೈರೆಕ್ಟರ್ ಭರತ್ ಅವರ ಕನಸಿನ ಕೂಸು. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಜನ ಗೆಲ್ಲಿಸುತ್ತಾರೆ ಅನ್ನೋ ಹೋಪ್ ಇಡೀ ಚಿತ್ರತಂಡಕ್ಕಿದೆ.
ಇದನ್ನೂ ಓದಿ- ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ "ಸ್ಪೂಕಿ ಕಾಲೇಜಿ"ನಲ್ಲಿ ದೆವ್ವ ಇದ್ಯಾ...?
"ಸ್ಪೂಕಿ ಕಾಲೇಜು" ಈ ಚಿತ್ರ ನೈಜ ಕಥೆಯೇ ಅನ್ನೋ ಪ್ರಶ್ನೆಯನ್ನ ಕೇಳತೊಡಗಿದ್ದಾರೆ ಜನ. ಇದು ರಿಯಲ್ ಸ್ಟೋರಿ ಅನ್ನೋದನ್ನ ಒಂದಷ್ಟು ಸಿನಿಪ್ರೇಮಿಗಳು ಸ್ಪ್ರೆಡ್ ಕೂಡ ಮಾಡುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಸಿನಿಮಾ ರಿಲೀಸ್ ಆದಮೇಲೆ ಸಿಗುತ್ತೆ. ಪ್ರೀಮಿಯರ್ ಪದ್ಮಿನಿ" ಖ್ಯಾತಿಯ ವಿವೇಕ್ ಸಿಂಹ "ಸ್ಪೂಕಿ ಕಾಲೇಜ್" ನ ನಾಯಕ. "ದಿಯಾ" ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ "ಕಾಮಿಡಿ ಕಿಲಾಡಿಗಳು" ಶೋನ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ- SOMTHING ಸ್ಪೆಷಲ್ ಕೊಡಲು ಬರುತ್ತಿದೆ 'ಸ್ಪೂಕಿ ಕಾಲೇಜು'..! ಅತೀ ಶೀಘ್ರದಲ್ಲಿ ಶುರುವಾಗುತ್ತೆ ಅಡ್ಮಿಶನ್
ಹೆಚ್.ಕೆ.ಪ್ರಕಾಶ್ ಅವರು ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ "ಸ್ಪೂಕಿ ಕಾಲೇಜ್" ಚಿತ್ರದ ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ಇರುತ್ತೆ.ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು. ಇದೇ ತಿಂಗಳ 25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು ವೇಟ್ ಮಾಡಿ ಸಿನಿಮಾ ನೋಡಿ ಎಂಜಾಯ್ ಮಾಡಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.