Shruti Haasan On Parents Devorce: ತಂದೆ-ತಾಯಿಯ ವಿಚ್ಛೇದನೆಯಿಂದ ಖುಷಿಯಾಗಿದ್ದೆ, ಬೆಚ್ಚಿಬೀಳಿಸುವ ಹೇಳಿಕೆ ನೀಡಿದ Shruti Haasan
Shruti Haasan On Parents Devorce - ಖ್ಯಾತ ಬಹುಭಾಷಾ ತಾರೆ ಶ್ರುತಿ ಹಾಸನ್ ಇತ್ತೀಚೆಗಷ್ಟೇ ಬೆಚ್ಚಿಬೀಳಿಸುವ ಹೇಳಿಕೆಯೊಂದನ್ನು ನೀಡಿದ್ದಾಳೆ. ಹೌದು, ತಂದೆ-ತಾಯಿಯ ವಿಚ್ಛೇದನೆಯಿಂದ ತಾನು ಖುಷಿಯಾಗಿದ್ದೆ ಎಂದು ಶ್ರುತಿ ಹಾಸನ್ ಹೇಳಿದ್ದಾಳೆ . `ನನ್ನ ತಂದೆ-ತಾಯಿ ತುಂಬಾ ಒಲ್ಲೆಯವರಾಗಿದ್ದಾರೆ. ಆದರೆ, ನಾನು ನನ್ನ ತಂದೆಯ ತುಂಬಾ ಹತ್ತಿರವಾಗಿದ್ದೇನೆ. ನನ್ನ ತಾಯಿ ನನ್ನ ಜೀವನದ ಒಂದು ಭಾಗ. ಇದು ನಮ್ಮೆಲ್ಲರ ಜೀವನಕ್ಕೆ ಒಳ್ಳೆಯ ನಿರ್ಣಯವಾಗಿತ್ತು` ಎಂದು ಶ್ರುತಿ ಹೇಳಿದ್ದಾಳೆ,
ನವದೆಹಲಿ: Shruti Haasan On Parents Devorce - ಭಾರತೀಯ ಚಿತ್ರರಂಗದಲ್ಲಿ ಇಂತಹ ಹಲವು ನಟಿಯರಿದ್ದು, ಅವರು ಮದುವೆಯಾಗದೆ ತಾಯಿಯಾಗಿದ್ದಾರೆ. ಇಂತಹ ನಟಿಮಣಿಯರಲ್ಲಿ ಸಾರಿಕಾ ಕೂಡ ಒಬ್ಬರು. ಸಾರಿಕಾ ಮದುವೆಯಾಗುವುದಕ್ಕು ಮುನ್ನ ಶ್ರುತಿ ಹಾಸನ್ (Shruti Haasan) ತಾಯಿಯಾಗಿದ್ದರು. ತಾಯಿಯಾದ ಬಳಿಕ ಸಾರಿಕಾ, ಕಮಲ್ ಹಾಸನ್ (Shruti Haasan Parents) ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, 16 ವರ್ಷಗಳ ಸುದೀರ್ಘ ಅವಧಿಯ ಬಳಿಕ ಅವರು ವಿಚ್ಛೇದನೆಯ ನಿರ್ಣಯ ಕೈಗೊಂಡಿದ್ದರು ಹಾಗೂ ಶ್ರುತಿ ಹಾಸನ್ ಈ ನಿರ್ಣಯದಿಂದ ಖುಷಿಯಾಗಿದ್ದರು.
ವಿವಾಹ ವಿಚ್ಛೇದನೆಯಿಂದ ಖುಷಿಯಾಗಿದ್ದರು ಶ್ರುತಿ
ಬಾಲಿವುಡ್ (Bollywood) ಅದರಲ್ಲೂ ವಿಶೇಷವಾಗಿ ದಕ್ಷಿಣ ಚಿತ್ರರಂಗದ ನಟಿ ಶ್ರುತಿ ಹಾಸನ್ ತಮಿಳು ಚಿತ್ರರಂಗದ ದಿಗ್ಗಜ ನಟ ಕಮಲ್ ಹಾಸನ್ ಹಾಗೂ ಸಾರಿಕಾ ಪುತ್ರಿಯಾಗಿದ್ದಾಳೆ. ಕಮಲ್ ಹಾಸನ್ ಹಾಗೂ ಸಾರಿಕಾ ತಮ್ಮ ವೈವಾಹಿಕ ಜೀವನದ 16 ವರ್ಷಗಳ ಸುದೀರ್ಘ ಅವಧಿಯ ಬಳಿಕ ಬೇರ್ಪಟ್ಟಿದ್ದರು (Shruti Haasan Parents Divorce). ಈ ಸಂದರ್ಭದಲ್ಲಿ ಶ್ರುತಿ ಹಾಸನ್ ಹಾಗೂ ಅವರ ಕಿರಿಯ ಸಹೋದರಿ ಅಕ್ಷರಾ ಹಾಸನ್ ತುಂಬಾ ಚಿಕ್ಕವರಾಗಿದ್ದರು. ಇತ್ತೀಚೆಗಷ್ಟೇ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರುತಿ ಹಾಸನ್, ತಂದೆ-ತಾಯಿಯರ ವಿಚ್ಛೇದನೆ ತಮಗೆ ನೋವು ಅಲ್ಲ ಖುಷಿ ತಂದಿತ್ತು ಎಂದು ಹೇಳಿದ್ದಾರೆ.
'ಜೊತೆಯಾಗಿ ಬಾಳಲು ಆಗದಿದ್ದರೆ, ಬೇರ್ಪಡುವುದು ಉತ್ತಮ '
Zoom ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರುತಿ ಹಾಸನ್, "ನಾನು ಕೇವಲ ಅವರಿಬ್ಬರ ಹೊಸ ಜೀವನ ಆರಂಭಿಸಲು ಉತ್ಸಾಹಿತಳಾಗಿದ್ದೆ. ಅವರಿಬ್ಬರೂ ಬೇರ್ಪಟ್ಟಿದ್ದು ನನಗೆ ಖುಷಿ ನೀಡಿದೆ. ಏಕೆಂದರೆ ಇಬ್ಬರು ವ್ಯಕ್ತಿಗಳು ಜೊತೆಯಾಗಿ ಇರಲು ಇಷ್ಟಪಡುತ್ತಿಲ್ಲ ಎಂದರೆ, ಯಾವುದೇ ಒಂದು ಕಾರಣ ಅವರನ್ನು ಒಟ್ಟಿಗೆ ಇಡಲು ಸಾಧ್ಯವಿಲ್ಲ. ಅವರಿಬ್ಬರೂ ತುಂಬಾ ಒಳ್ಳೆಯ ಪೋಷಕರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ನಾನು ನನ್ನ ತಂದೆಯ (Kamal Haasan) ತುಂಬಾ ಹತ್ತಿರವಾಗಿದ್ದೇನೆ. ನನ್ನ ತಾಯಿ (Sarika) ನನ್ನ ಜೀವನದ ಭಾಗವಾಗಿದ್ದಾಳೆ. ಇದು ನಮ್ಮೆಲ್ಲರ ಪಾಲಿಗೆ ಒಳ್ಳೆಯದಾಗಿತ್ತು" ಎಂದು ಹೇಳಿದ್ದಾಳೆ.
ಇದನ್ನೂ ಓದಿ- Shah Rukh Khan ಇನ್ಸ್ಟಾಗ್ರಾಮ್ನಲ್ಲಿ ಕೇವಲ 6 ಜನರನ್ನಷ್ಟೇ Follow ಮಾಡ್ತಾರೆ, ಅವರು ಯಾರು ಗೊತ್ತೇ!
" ಅವರಿಬ್ಬರೂ ಅತ್ಯುತ್ತಮ ಮನುಷ್ಯರಾಗಿದ್ದಾರೆ. ಆದರೆ, ಪರಸ್ಪರ ಅವರು ಹಾಗಿರಲಿಲ್ಲ. ಅವರು ವೈಯಕ್ತಿಕವಾಗಿ ತುಂಬಾ ಒಳ್ಳೆಯವರಾಗಿದ್ದಾರೆ. ಅವರು ಒಟ್ಟಿಗೆ ಇರುವುದು ಅವರ ಈ ಒಳ್ಳೆಯತನಕ್ಕೆ ಮಾರಕವಾಗಿತ್ತು. ಅವರು ಬೇರ್ಪಟ್ಟಾಗ ನಾನು ತುಂಬಾ ಚಿಕ್ಕವಳಾಗಿದ್ದೆ. ಇದು ತುಂಬಾ ಸುಲಭವಾಗಿತ್ತು ಹಾಗೂ ನಾವೆಲ್ಲರೂ ಖುಷಿಯಾಗಿದ್ದೆವು" ಎಂದು ಶ್ರುತಿ ಹೇಳಿದ್ದಾರೆ.
ಇದನ್ನೂ ಓದಿ-Real Star Upendra : ನಾನು ಕರ್ನಾಟಕದ ಸಿಎಂ ಆಗಬೇಕು : ನಟ ಉಪೇಂದ್ರ
ಚಿತ್ರಗಳಿಗೆ ಸಿಗುತ್ತಿದೆ ಉತ್ತಮ ಪ್ರತಿಕ್ರಿಯೆ
ಇತ್ತೀಚಿಗೆ ಶ್ರುತಿ ಹಾಸನ್ ನಟಿಸಿರುವ 'ಕ್ರ್ಯಾಕ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಕೊರೊನಾ ಕಾಲದಲ್ಲಿಯೂ ಕೂಡ 'ವಕೀಲ್ ಸಾಹಾಬ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರಸ್ತುತ ನಟಿ ತನ್ನ ಮುಂಬರುವ ಚಿತ್ರ 'ಸಾಲಾರ್'ಗೆ ಸಂಬಂಧಿಸಿದಂತೆ ಚರ್ಚೆಯಲ್ಲಿದ್ದಾಳೆ. ಈ ಚಿತ್ರದಲ್ಲಿ ಶ್ರುತಿ ಸೂಪರ್ ಸ್ಟಾರ್ ಪ್ರಭಾಸ್ ಜೊತೆಗೆ ಆನ್ ಸ್ಕ್ರೀನ್ ಕಾಣಿಸಿಕೊಳ್ಳಲಿದ್ದಾಳೆ.
ಇದನ್ನೂ ಓದಿ-Kangana Ranaut: 'ಒಂದು ವೇಳೆ ನೀವು ಧಣಿಗಳಾಗಿದ್ದರೆ, ಬಡವರ ಬಳಿ ಭಿಕ್ಷೆ ಕೇಳಬೇಡಿ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.