IIFA 2024 ಪ್ರಶಸ್ತಿಗಳನ್ನು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯುತ್ತಮವಾದ ಅಭಿನಯ ಮತ್ತು ಅದ್ಭುತ ಸಿನಿಮಾಗಳಿಗೆ ನೀಡಲಾಗುತ್ತದೆ. IIFA 2024 ಪ್ರಶಸ್ತಿಯ ಡೈನಾಮಿಕ್ ಜೋಡಿ ಎಂದು ಕರೆಯಲ್ಪಡುವ ಸಿದ್ಧಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮವನ್ನು ಹೋಸ್ಟ್‌ ಮಾಡಲಿದ್ದಾರೆ. 


COMMERCIAL BREAK
SCROLL TO CONTINUE READING

ಸಿನಿಮಾಗಳಲ್ಲಿನ ನಟಿಸಿ ತಮ್ಮ ಅಭಿನಯದಿಂದ ಸಿದ್ಧಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ IIFA ಇವೆಂಟ್‌ ಹೋಸ್ಟ್‌ ಮಾಡುವ ಮೂಲಕ ಮತ್ತೊಮ್ಮೆ ಮನರಂಜನೆ ನೀಡಲು ಜನರ ಮುಂದೆ ಬರುತ್ತಿದ್ದಾರೆ.


IIFA 2024 ಅವಾರ್ಡ್ ಕಾರ್ಯಕ್ರಮವು ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 29 ರವರೆಗೆ ಅಬುಧಾಬಿಯ ದ್ವೀಪದಲ್ಲಿ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ನೇತೃತ್ವದಲ್ಲಿ ನಡೆಯಲಿದೆ. ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಈ ಸಮಾರಂಭ ಅಬುಧಾಬಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ಸಿದ್ದಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ ಈ ಕಾರ್ಯಕ್ರಮವನ್ನು ಹೋಸ್ಟ್‌ ಮಾಡಲು ಸಿದ್ಧರಾಗಿದ್ದಾರೆ.


ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗೆ ಬಂದೇ ಬಿಟ್ರು ಹೊಸ ಹೋಸ್ಟ್... ಪ್ರೋಮೋದಲ್ಲಿ ಸಿಕ್ತು ಬಿಗ್‌ ಸರ್‌ಪ್ರೈಸ್‌!


ಗಲ್ಲಿ ಬಾಯ್‌ನಲ್ಲಿ ಎನ್‌ಸಿ ಶೇರ್ ಅವರ ಪಾತ್ರಕ್ಕಾಗಿ IIFA 2020 ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದ ಸಿದ್ಧಾಂತ್ ಚತುರ್ವೇದಿ, IIFA ಅವಾರ್ಡ್ಸ್ 2024 ರ 24 ನೇ ಆವೃತ್ತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಆಸಕ್ತಿಯನ್ನು ಹಂಚಿಕೊಂಡರು. ಇದು ವಿಶ್ವದಲ್ಲೇ ಭಾರತೀಯ ಚಿತ್ರರಂಗದ ಅತಿ ದೊಡ್ಡ ಆಚರಣೆ. ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ನಾನು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದೇನೆ ಎಂದು ನಾನು ತುಂಬಾ ಥ್ರಿಲ್ ಆಗಿದ್ದೇನೆ. 2020 ರಲ್ಲಿ ಇಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಸ್ವೀಕರಿಸುವುದು ನನ್ನ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು. ಈಗ ಅದೇ ಕಾರ್ಯಕ್ರಮ ನಡೆಸಿಕೊಡುತ್ತಿರುವುದರಿಂದ ನನ್ನ ಮಟ್ಟ ಹೆಚ್ಚಿದೆ ಎನಿಸುತ್ತಿದೆ. ಐಐಎಫ್ಎ ಕುಟುಂಬದ ಅದ್ಭುತ ಜಗತ್ತಿನೊಂದಿಗೆ ಮತ್ತೊಮ್ಮೆ ನನ್ನ ಅನುಭವವನ್ನು ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದು ಸಿದ್ಧಾಂತ್ ಚತುರ್ವೇದಿ ಹೇಳಿದ್ದಾರೆ.


ಮತ್ತೊಂದೆಡೆ, ಭಾರತೀಯ ನಟ ಮತ್ತು ಕಾಸ್ಟಿಂಗ್ ನಿರ್ದೇಶಕರಾಗಿ ಪ್ರಸಿದ್ಧರಾಗಿರುವ ಅಭಿಷೇಕ್ ಬ್ಯಾನರ್ಜಿ ನನ್ನ IIFA ಪ್ರಯಾಣವು ಅಸಾಮಾನ್ಯವಾಗಿದೆ ಎಂದು ಹೇಳಿದರು. ಈ ಅದ್ಭುತ ಸ್ಟಾರ್‌ಡಮ್ ಶೋನ ಭಾಗವಾಗಲು ಆತಿಥೇಯರಾಗಿ ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ನಾನು ವಿಶೇಷವಾಗಿ IIFA ಕುಟುಂಬವನ್ನು ಸೇರಲು ಸಂತೋಷಪಡುತ್ತೇನೆ. ಸೆಪ್ಟೆಂಬರ್ 29 ರಂದು ಅಬುಧಾಬಿಯಲ್ಲಿ ಭೇಟಿಯಾಗೋಣ ಎಂದರು.


ಇದನ್ನೂ ಓದಿ: ಈ ಚೆಲುವೆಯ ಅಂದ ಕಂಡು ರಂಭೆಗೂ ಹೊಟ್ಟೆಕಿಚ್ಚು ಬರುತ್ತೆ.. ಪಡ್ಡೆಹೈಕ್ಳ ನಿದ್ದೆಗೆಡಿಸುವ ಈಕೆ ಯಾರು ಬಲ್ಲೀರಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.