ಮುಂಬೈ: 'ಬಿಗ್ ಬಾಸ್ 13' ವಿಜೇತ ಸಿದ್ಧಾರ್ಥ್ ಶುಕ್ಲಾ (Sidharth Shukla Died) ಸಾವಿನ ಸುದ್ದಿಯಿಂದ ಇಡೀ ಚಿತ್ರರಂಗ ಸೇರಿದಂತೆ ಅವರ ಅಭಿಮಾನಿಗಳು,  ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. 40 ನೇ ವಯಸ್ಸಿನಲ್ಲಿಯೇ ಸಿದ್ಧಾರ್ಥ್ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದಾಗಿ  ಸಿದ್ಧಾರ್ಥ್ ಶುಕ್ಲಾ ಸಾವನ್ನಪ್ಪಿದ್ದಾರೆ. ಎಲ್ಲರ ಮಾತಿನಲ್ಲೂ ಸಿದ್ಧಾರ್ಥ್ ಶುಕ್ಲಾ (Sidharth Shukla) ಹೆಸರೇ ಕೇಳಿ ಬರುತ್ತಿದೆ. ನಿನ್ನೆ ರಾತ್ರಿಯಿಂದ ಸಿದ್ಧಾರ್ಥ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು ಎನ್ನಲಾಗಿದೆ. ತನ್ನ ಸಾವಿಗೂ ಮುನ್ನ ಸಿದ್ದಾರ್ಥ್ ಅವರ ತಾಯಿಯ ಜೊತೆ ಸಮಯ ಕಳೆದಿದ್ದಾರೆ. 


COMMERCIAL BREAK
SCROLL TO CONTINUE READING

ಬಿಲ್ಡಿಂಗ್ ಆವರಣದಲ್ಲಿ ವಾಕ್ :
ನಿನ್ನೆ ಅಂದರೆ ಬುಧವಾರ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ, ಸಿದ್ಧಾರ್ಥ್ ಶುಕ್ಲಾ (Sidharth Shukla) ತನ್ನ ತಾಯಿ ರೀಟಾ ಶುಕ್ಲಾ (Reeta Shukla) ಜೊತೆ  ಓಶಿವಾರದಲ್ಲಿರುವ ತನ್ನ ಕಟ್ಟಡದ ಆವರಣದಲ್ಲಿ ವಾಕ್ ಮಾಡಿದ್ದರು. ವಾಕ್ ನಂತರ ತಮ್ಮ ಫ್ಲಾಟ್ ಗೆ ತೆರಳಿದ್ದಾರೆ.  ಈ ವೇಳೆ ತನ್ನ ಆರೋಗ್ಯ ಸರಿಯಿಲ್ಲ ಎನ್ನುವುದನ್ನು ತಾಯಿಗೆ ತಿಳಿಸಿದ್ದಾರೆ ಇದಾದ ನಂತರ ಔಷಧಿ ತೆಗೆದುಕೊಂಡು ಮಲಗಿದ್ದಾರೆ. 


ಇದನ್ನೂ ಓದಿ : ಹೃದಯಾಘಾತಕ್ಕೆ ಒಳಗಾಗಿದ್ದ ಸೈರಾ ಬಾನು ಆರೋಗ್ಯದಲ್ಲಿ ಚೇತರಿಕೆ


ಬೆಳಿಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿದ್ಧಾರ್ಥ್ ಶುಕ್ಲಾ :
ಇಂದು ಅಂದರೆ ಗುರುವಾರ ಬೆಳಿಗ್ಗೆ 9.30 ರ ಸುಮಾರಿಗೆ, ಸಿದ್ಧಾರ್ಥ್ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಅವರ ಮನೆಯವರು ಗಮನಿಸಿದ್ದಾರೆ. 10.30 ರ ಸುಮಾರಿಗೆ ಅವರನ್ನು ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ECG ಮಾಡಿಸಲಾಗಿದೆ.  ಆದರೆ, ಸಿದ್ದಾರ್ಥ್ ಶುಕ್ಲಾ ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿದ್ದರು (Sidharth Shukla Died)ಎನ್ನಲಾಗಿದೆ. ಅವರ ಸಾವಿನ ಸುದ್ದಿಯನು ವೈದ್ಯರ ತಂಡ 11.30 ಕ್ಕೆ ದೃಢಪಡಿಸಿದೆ.  


 ಕುಟುಂಬ ಹಿನ್ನೆಲೆ : 
ಮುಂಬೈನಲ್ಲಿ ಜನಿಸಿದ ಸಿದ್ಧಾರ್ಥ್ ಶುಕ್ಲಾ ತಂದೆ ಅಶೋಕ್ ಶುಕ್ಲಾ ಸಿವಿಲ್ ಎಂಜಿನಿಯರ್ ಮತ್ತು ತಾಯಿ ರೀಟಾ ಶುಕ್ಲಾ ಗೃಹಿಣಿ. ಅವರ ತಂದೆ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ (RBI) ಕೆಲಸ ಮಾಡಿದ್ದರು. ಅವನಿಗೆ ಇಬ್ಬರು ಹಿರಿಯ ಸಹೋದರಿಯರು ಕೂಡ ಇದ್ದಾರೆ. ಸಹೋದರಿಯರನ್ನು ಸಿದ್ದಾರ್ಥ್ ಬಹಳ ಪ್ರೀತಿಸುತ್ತಿದ್ದರು. ಮೂಲತಃ ಸಿದ್ಧಾರ್ಥ್ ಕುಟುಂಬ ಉತ್ತರ ಪ್ರದೇಶದ ಅಲಹಾಬಾದ್ ನವರು.


ಇದನ್ನೂ ಓದಿ Drugs Case: Arman Kohliಗೆ 14 ನ್ಯಾಯಾಂಗ ಬಂಧನ, ನಿವಾಸದಲ್ಲಿ ಕೊಕೇನ್ ಪತ್ತೆಯಾಗಿತ್ತು


ತಾಯಿಗೆ ಹತ್ತಿರವಾಗಿದ್ದ ಸಿದ್ಧಾರ್ಥ್ ಶುಕ್ಲಾ :
ಬಿಗ್ ಬಾಸ್ 13 ರ ವಿಜೇತರಾಗಿದ್ದ ಸಿದ್ಧಾರ್ಥ್ ಶುಕ್ಲಾ ತಾಯಿಯೊಂದಿಗೆ ಬಿಗ್ ಬಾಸ್ (Bigg Boss) ಮನೆಯಲ್ಲಿ ಕಾಣಿಸಿಕೊಂದಿದ್ದರು.  ಸಿದ್ಧಾರ್ಥ್ ಶುಕ್ಲಾ ತನ್ನ ತಾಯಿಗೆ ತುಂಬಾ ಹತ್ತಿರವಾಗಿದ್ದರು. ತಮ್ಮ ಮಾಡೆಲಿಂಗ್ ದಿನಗಳಲ್ಲೇ  ತಂದೆಯನ್ನು ಕಳೆದುಕೊಂಡಿದ್ದರು. ಸಿದ್ಧಾರ್ಥ್  ತಂದೆ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ವರ್ಷದಲ್ಲಿ, ಸಿದ್ಧಾರ್ಥ್ ತನ್ನ ತಂದೆಯ ಪುಣ್ಯ ತಿಥಿಯಂದು ಟ್ವೀಟ್ ಮಾಡಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ