ಬೆಂಗಳೂರು: ವೀಕೆಂಡ್​​ ವಿತ್​ ರಮೇಶ್ ಕಾರ್ಯಕ್ರಮ ಆರಂಭವಾಗಿ ಈಗಾಗಲೇ ಭರ್ಜರಿ ಯಶಸ್ಸು ಕಾಣುತ್ತಿದೆ.  ಈ ವಾರದ ಅಥಿತಿಯಾಗಿ ಸಿಹಿಕಹಿ ಚಂದ್ರು ಸಾಧಕರ ಸೀಟಿನಲ್ಲಿ ಕುಳಿತಿದ್ದರು. ಈ ವಾರದ ಶೋಗೆ ಇನ್ನಷ್ಟು ಕಳೆ ತಂದರು. ನಟ ಚಂದ್ರು ರವರು ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿ ಅಷ್ಟೇ ಹಾಸ್ಯಮಯ ವ್ಯಕ್ತಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ!


ಹಸನ್ಮುಖಿಯಾಗಿರುವ ಚಂದ್ರು ರವರು ಸದಾ ಎಲ್ಲರನ್ನು ನಗಿಸುತ್ತಲೇ ಇರುತ್ತಾರೆ.  ಸಿನಿಮಾ ಹಾಗೂ ಅಡುಗೆ ಎಂದರೆ ಬಲು ಇಷ್ಟ ವಂತೇ!.  ಹಾಗೆಯೇ ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿ ಆಗಿದ್ದರಂತೆ ಈ ವಿಚಾರವನ್ನು ಅವರ ಸ್ನೇಹಿತರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ.


ಇದನ್ನೂ ಓದಿ: Choreographer Chaitanya: ಖ್ಯಾತ ಡ್ಯಾನ್ಸ್  ಕೋರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ!


ಸಿಹಿ ಕಹಿ ಚಂದ್ರು, ಕಾಲೇಜು ದಿನಗಳಲ್ಲಿ ಪ್ರೀತಿಗಾಗಿ  ಭಗ್ನಪ್ರೇಮಿಯಂತೆ ಸಕ್ಕರೆ ಬೈಲಿನ ಕಲ್ಲಿನ ಬಂಡೆಮೇಲೆ ಬಿಯರ್ ಬಾಟಲಿ ಖಾಲಿ ಮಾಡಿದ್ದೆ ಎಂದಿದ್ದಾರೆ. ಹೀಗೆ ಬಹತೇಕ ತಮ್ಮ ಜೀವನದ ಸಿಹಿ ಘಟನೆಗಳನ್ನೇ ಚಂದ್ರು ನೆನಪಿಸಿಕೊಂಡರು, ನಗುತ್ತಲೇ ಘಟನೆಗಳನ್ನು ವಿವರಿಸಿದ್ದಾರೆ.


ಇವರ ಜೀವನ ಕಥೆ ಕೇಳಿ ರಮೇಶ್ ಅರವಿಂದ್‌ ಸಹ ನಸು ನಗುತ್ತಲೇ ನಿರೂಪಣೆ ಮಾಡಿದರು. ಕಾರ್ಯಕ್ರಮಕ್ಕೆ ಬಂದ ಪ್ರೇಕ್ಷರನ್ನು ತಮ್ಮ ಜೀವನ ಕಥೆಗೆ ಹೊಟ್ಟೆ ಹುಣ್ಣುಆಗುವಷ್ಟು ನಗಿಸಿದ್ದಾರೆ. ಸೆಂಟಿಮೆಂಟ್ ಇಲ್ಲದೆ ಸಿಂಪತಿಗಳಿಸಿಕೊಳ್ಳುವ ಪ್ರಯತ್ನಗಳಿಲ್ಲದೆ ನಗು-ನಗುತ್ತಲೇ ಜೀವನದ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಾ, ಜೀವನ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.