Silk Smitha: 1970-80ರ ದಶಕದಲ್ಲಿ ಮೈ ಮರೆಸೋ ಅಂದ, ಸಖತ್ ಲುಕ್, ಬಿಂಕವನ್ನುಟ್ಟ ನಡಿಗೆ, ಅಂಧವೇ ನೋಡಿ ನಾಚುವಂತ ಮೈ ಮಾಟ, ಆಕೆ ಸಿನಿಮಾದಲ್ಲಿ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೆ  ಆಕೆ ಇಡುವ ಒಂದೊಂದು ಹೆಜ್ಜೆಗೂ ಪಡ್ಡೆ ಹುಡುಗರ ಹೃದಯ ಢವ ಢವ ಎನ್ನುತ್ತಿತ್ತು. ಆಕೆಯ ಸೌಂದರ್ಯ ನೋಡಿ ಪಡ್ಡೆ ಹುಡುಗರು ಮನಸ್ಸು ಕಳೆದುಕೊಂಡಿದ್ದರು. ಅಷ್ಟಕ್ಕೂ ಯಾರದು ಅಂತೀರಾ... ಸಿಲ್ಕ್‌ ಸ್ಮಿತಾ...


COMMERCIAL BREAK
SCROLL TO CONTINUE READING

ಸಿಲ್ಕ್ ಸ್ಮಿತಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆಗಿನ ಕಾಲದ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಇದಾರೆ ಅಂದ್ರೇನೆ ಪಕ್ಕಾ ಆ ಸಿನಿಮಾ ಹಿಟ್ ಆಗುತ್ತೆ ಅಂತಾನೆ ಅರ್ಥ. ಸಿಲ್ಕ್ ಸ್ಮಿತಾ ಅವರನ್ನು ನೋಡೋಕೆ ಅಂತಾನೆ ಜನ ಥಿಯೇಟರ್‌ನ ಮುಂದೆ ಮುಗಿ ಬೀಳ್ತಿದ್ದರು. 


ಇದನ್ನೂ ಓದಿ: ಆ ವಿಚಾರದಲ್ಲಿ ಸಿಲ್ಕ್ ಸ್ಮಿತಾಳನ್ನು ಸೋಲಿಸುವ ನಟಿಯರೇ ಇಲ್ಲ.. ಖ್ಯಾತ ನಟ ಸೆನ್ಸೇಷನಲ್‌ ಕಾಮೆಂಟ್!!


ತುಂಡು ಬಟ್ಟೆ ಧರಿಸಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಮಿತಾರನ್ನು ಒಬ್ಬ ಪತ್ರಕರ್ತ  "ನಿನಗೆ ನಾಚಿಕೆ ಆಗಲ್ವಾ ತುಂಡು ಬಟ್ಟೆ ಹಾಕ್ಕೊಂಡು ಸಿನಿಮಾ ದಲ್ಲಿ ನಟಿಸೋಕೆ"" ಅಂತಾ ಪ್ರಶ್ನೆ ಮಾಡಿದ್ದ ಇದಕ್ಕೆ ಸಿಲ್ಕ್ ಸ್ಮಿತಾ ತಮ್ಮದೇ ಆದ ಸ್ಟೈಲಿನಲ್ಲಿ ಉತ್ತರ ಕೊಟ್ಟಿದ್ದರು.


"ಒಳ್ಳೆಯ ಮನಸ್ಸಿನಿಂದ ನೋಡಿದರೆ ಎಲ್ಲವೂ ಸರಿಯಾಗಿಯೇ ಕಾಣುತ್ತೆ ಸ್ವಾಮಿ. ಹಾಗಂತ ಫುಲ್ ಓಪನ್ ಅಪ್ ಆಗ್ಬೇಕು ಅಂತ ಏನಿಲ್ಲ ಎಲ್ಲದಕ್ಕೂ ಇತಿ ಮಿತಿ ಅನ್ನೋದು ಇದೆ. ನನ್ನ ಲಿಮಿಟ್ಸ್ ನನಗೆ ಗೊತ್ತಿದೆ ಅದರಂತೆಯೇ ನಾನು ಕೂಡ ಇದೇನೆ" ಎಂದು ಖಡಕ್  ಆಗಿ ಉತ್ತರ ಕೊಟ್ಟಿದ್ದರು.


ಅಷ್ಟಕ್ಕೂ ಸಿಲ್ಕ್ ಸ್ಮಿತಾ ತುಂಬಾ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿ ಗಂಡನಿಂದ ದೂರ ಆಗಿ ಸಿನಿಮಾಗೆ ಎಂಟ್ರಿ ಕೊಟ್ಟವರು.


ಇದನ್ನೂ ಓದಿ: ಮದುವೆಗೂ ಮುನ್ನ ಗರ್ಭಿಣಿಯಾದ ಈ ಸ್ಟಾರ್‌ ನಟಿ.. ಅಬಾರ್ಷನ್‌ ಮಾಡಿಸಲು ನಿರ್ದೇಶಕನ ಬಳಿ 75 ಲಕ್ಷ ಬೇಡಿಕೆಯಿಟ್ಟಿದ್ದರಂತೆ!


ಗಂಡನನ್ನು ತೊರೆದು ಸಿಲ್ಕ್ ಸ್ಮಿತಾ ಡೈರೆಕ್ಟ್ ಆಗಿ ಸಿನಿಮಾ ಇಂಡಸ್ಟ್ರಿ ಗೆ ಬಂದು ಮೇಕಪ್ ಗರ್ಲ್ ಆಗಿ ಕೆಲಸಕ್ಕೆ ಸೇರ್ತರೆ. ನಂತರ ಅಸಿಸ್ಟೆಂಟ್ ಡೈರೆಕ್ಟ್ ಆಗಿಯೂ ಕೂಡ ಕೆಲ್ಸಾ ಮಾಡ್ತಾರೆ . ಇದೆಲ್ಲ ನೋಡಿದ ನಿರ್ದೇಶಕರು ಸಿಲ್ಕ್ ಸ್ಮಿತಾ ಅವರನ್ನು ಸಿನಿಮಾಗೆ ಪರಿಚಯಿಸುತ್ತಾರೆ. ಸಿನಿಮಾಗಳಲ್ಲಿ ಪರಿಚಯವಾಗುತ್ತಿದಂತೆ ಸಿಲ್ಕ್ ಸ್ಮಿತಾ ಹೀರೋಯಿನ್‌ಗಳನೆಲ್ಲ ಹಿಂದಿಕ್ಕಿ ಫುಲ್ ದೊಡ್ಡ ಮಟ್ಟಿಗೆ ಹೆಸರು ಮಾಡ್ತಾರೆ. ತಮ್ಮ ಮೈ ಮಾಟದಿಂದ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿ ಕೊಳ್ತಾರೆ. ಹೀಗೆ ತಮಗೆ ಬಂದ ನೆಗೆಟಿವ್ ಕಾಮೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ಮಿತಾ ಸಿನಿಮಾ ರಂಗದಲ್ಲಿ ತಮ್ಮ ಛಾಪು ಮೂಡಿಸಿ ಬಹಳ ಚಿಕ್ಕ ವಯಸ್ಸಿಗೇ ದೊಡ್ಡ ಹೆಸರು ಮಾಡಿ ಬಾರದ ಲೋಕ ಸೇರ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.