Kollywood actor on Silk Smitha: ಸಿಲ್ಕ್‌ ಸ್ಮಿತಾ ಸೊಂಟ ಬಳುಕಿಸಿದ್ರೆ ಸಾಕು ಸಿನಿಮಾ ಬೊಂಬಾಟ್‌ ಆಗಿರುತ್ತೆ ಎನ್ನುವ ಕಾಲವೊಂದಿತ್ತು. ಇವರ ನೃತ್ಯ ನೋಡಲೆಂದೇ ಜನ ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಇಷ್ಟರಲ್ಲೆ ಗೊತ್ತಾಗುತ್ತೆ ಸಿಲ್ಕ್ ಸ್ಮಿತಾ ಕ್ರೇಜ್ ಎಷ್ಟರ ಮಟ್ಟಿಗಿತ್ತು ಅನ್ನೋದು. 


COMMERCIAL BREAK
SCROLL TO CONTINUE READING

ಸಿನಿಲೋಕದಲ್ಲಿ ಸುಮಾರು 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಇವರು ಒಂದೆಡೆ ಖ್ಯಾತ ನಟಿಯಾಗಿದ್ದರೆ, ಮತ್ತೊಂದೆಡೆ ನಟಿಯ ವೈಯಕ್ತಿಕ ಜೀವನದಲ್ಲಿ ಎದುರಾದ ಸಮಸ್ಯೆಗಳು ಇನ್ನೊಂದೆಡೆ..ಆಧರೆ ಇದೀಗ ಈ ಖ್ಯಾತ ನಟಿಯ ಬಗ್ಗೆ ಕಾಲಿವುಡ್‌ ನಟ ಸಂಚಲನ ಸೃಷ್ಟಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ..


ಹೌದು ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್‌ ಹಲವು ದಿನಗಳಿಂದ ಸಿಲ್ಕ್‌ ಸಿಲ್ಕ್​ ಸ್ಮಿತಾ ವಿರುದ್ಧ ಗಾಸಿಪ್​ಗಳನ್ನು ಸೃಷ್ಟಿ ಮಾಡಿ ಸುದ್ದಿಯಾಗುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಧ್ವನಿ ಕೂಡ ಎತ್ತಿದ್ದಾರೆ.  


ಆದರೂ ಮತ್ತೆ ರಂಗನಾಥನ್​ ದಿವಂಗತ ನಟಿ ಸಿಲ್ಕ್​ ಸ್ಮಿತಾ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರ ಕುರಿತಾಗಿ ರಂಗನಾಥನ್ ಮಾತನಾಡಿದ್ದು, ಇದು ಕಾಲಿವುಡ್‌ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 


ಇದನ್ನೂ ಓದಿ-ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ-ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್


ಈ ಬಗ್ಗೆ ಮಾತನಾಡಿದ ರಂಗನಾಥನ್ ಅವರು " ಸಾಮಾನ್ಯವಾಗಿ ಶವಾಗಾರದಲ್ಲಿರುವ ನೌಕರರು ಮದ್ಯ ಸೇವಿಸಿ ಕೆಲಸ ಮಾಡುತ್ತಾರೆ. ಹೀಗಾಗಿ ಶವಾಗಾರದಲ್ಲಿ ನಿಲ್ಲಲು ಆಗುವುದಿಲ್ಲ. ಇಂದಿನಂತೆ ಅಂದು ಯಾವ ಶವಾಗಾರಗಳು ಸ್ವಚ್ಛವಾಗಿರಲಿಲ್ಲ. ಆಸ್ಪತ್ರೆಯಲ್ಲಿ ಅದೇ ಹೆಚ್ಚು ದುರ್ವಾಸನೆ ಬೀರುವ ಸ್ಥಳವೂ ಹೌದು. ಇನ್ನು ಅಲ್ಲಿ ಕೆಲಸ ಮಾಡುವವರಿಗೆ ಮೈಮೇಲೆ ಅರಿವೆ ಇರುವುದಿಲ್ಲ.. ಕೆಲಸ ಪ್ರಾರಂಭವಾಗುತ್ತಲೇ ಕುಡಿದ ಅಮಲಿನಲ್ಲಿ ತೆಲಾಡುತ್ತಿರುತ್ತಾರೆ. 


ಹೀಗಿರುವಾಗ ಸಿಲ್ಕ್ ಸ್ಮಿತಾಳ ಕಣ್ಮನ ಸೆಳೆಯುವ ಸೌಂದರ್ಯ ಕಂಡು ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಸುಮ್ಮನಿರುತ್ತಾರೆ? ಅವರು ತಮ್ಮನ್ನೇ ತಾವು ಮರೆತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರಬಹುದು ಅಥವಾ ಆ ಅವಕಾಶಗಳು ಹೆಚ್ಚಿವೆ. 


ಪತ್ರಕರ್ತನಾಗಿ ಕೆಲಸ ಮಾಡುತ್ತಿರುವಾಗ ಸ್ವತಃ ನಾನೇ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ನೋಡಿದ್ದೆ. ಅಲ್ಲಿ ನನಗೆ ಐದು ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ನಿಂತುಕೊಳ್ಳಲಾಗಲಿಲ್ಲ" ಎಂದು  ಹೇಳಿದ್ದಾರೆ. ಆದರೆ ಇದೀಗ ಬೈಲ್ವಾನ್​ ರಂಗನಾಥನ್​ ಆಡಿರುವ ಮಾತುಗಳು ಕಾಲಿವುಡ್‌ನಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. 


ಇದನ್ನೂ ಓದಿ-ʼಘೋಸ್ಟ್ʼ​ ಸಿನಿಮಾದ ಮೊದಲ ಸಾಂಗ್‌ ರಿಲೀಸ್‌..! ಒಂದೇ ಹಾಡಿನಲ್ಲಿ 4 ಭಾಷೆಗಳ ಸಂಗಮ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ