ಸರಿಗಮಪ ವೇದಿಕೆಯಲ್ಲಿ ತಂಗಿಯೊಂದಿಗೆ ಹನುಮಂತಣ್ಣನ ಹಾಡಿನ ಝಲಕ್
ಹನುಮಂತಣ್ಣ ನೀವು ಜಾನಪದದ ಗಾನ ಕೋಗಿಲೆಯಾಗಿ ಕರುನಾಡ ತುOಬೆಲ್ಲ ನಿನ್ನ ರಾರಾಜಿಸಲಿ ಅಂತ ಆ ಭಗವಂತನಲ್ಲಿ ಪ್ರಾರ್ತಿಸುತ್ತೇವೆ. ಸಿ. ಅಶ್ವಥ್ ಸಾರ್ ತರ ನಿನ್ನ ಹೆಸರು ಕರುನಾಡಲ್ಲಿ ಉಳಿಯಲಿ ಎಂದು ಹಾರೈಸಿದ ಅಭಿಮಾನಿಗಳು
ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಎಲ್ಲರ ಮನೆ ಮಾತಾಗಿರುವುದು ಹೊಸತೇನಲ್ಲ. ಪ್ರತಿ ಸೀಸನ್ ನಲ್ಲೂ ಹೊಸ ಹೊಸ ಪ್ರತಿಭೆಗಳನ್ನು ಕರುನಾಡಿಗೆ ಪರಿಚಯಿಸುವ ಈ ಕಾರ್ಯಕ್ರಮದ 15ನೇ ಸೀಸನ್ ನಡೆಯುತ್ತಿದೆ.
ಈ ಸೀಸನ್ ನಲ್ಲಿ ಗಾಯಕ ಹನುಮಂತಣ್ಣ ತಮ್ಮ ಮಧುರವಾದ ಕಂಠ ಮತ್ತು ಮುಗ್ಧತೆಯಿಂದ ಕರುನಾಡ ಜನತೆಯ ಮನಗೆದ್ದಿದ್ದಾರೆ. ಇಂತಹ ಮುಗ್ಧ ಕಂಠಕ್ಕೆ ಇನ್ನೊಂದು ಮುಗ್ಧತೆ ದನಿಯಾದರೆ ಹೇಗಿರುತ್ತೆ... ಆಹಾ...! ಅಂತಹದ್ದೇ ಒಂದು ಅನುಭವಕ್ಕೆ ನಮ್ಮ ಸರಿಗಮಪ ವೇದಿಕೆ ಸಾಕ್ಷಿಯಾಗಿದೆ.
ಸರಿಗಮಪ ವೇದಿಕೆಯಲ್ಲಿ ಎಲ್ಲರ ನೆಚ್ಚಿನ ಹನುಮಂತಣ್ಣ ತಮ್ಮ ತಂಗಿಯೊಂದಿಗೆ ಉತ್ತರ ಕರ್ನಾಟಕದ ಜನಪ್ರಿಯ ಗೀತೆ 'ಬಡತನದ ಮನಿಯೊಳಗ ಹೆಣ್ಣು ಹುಟ್ಟಬಾರದು' ಎಂಬ ಗೀತೆಯಿಂದ ಎಲ್ಲರನ್ನೂ ಮೋಡಿ ಮಾಡಿದ್ದಾರೆ. ಅಣ್ಣ ತಂಗಿಯ ಈ ಗಾಯನಕ್ಕೆ ಮನಸೋತಿರುವ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡದ ಈ ಜನಪ್ರಿಯ ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಕೆಲವರು ಹನುಮಂತಣ್ಣ ನೀವು ಜಾನಪದದ ಗಾನ ಕೋಗಿಲೆಯಾಗಿ ಕರುನಾಡ ತುOಬೆಲ್ಲ ನಿನ್ನ ರಾರಾಜಿಸಲಿ ಅಂತ ಆ ಭಗವಂತನಲ್ಲಿ ಪ್ರಾರ್ತಿಸುತ್ತೇವೆ. ಸಿ. ಅಶ್ವಥ್ ಸಾರ್ ತರ ನಿನ್ನ ಹೆಸರು ಕರುನಾಡಲ್ಲಿ ಉಳಿಯಲಿ ಎಂದು ಹಲವರು ಹನುಮಂತಣ್ಣನನ್ನು ಹಾರೈಸಿದ್ದಾರೆ.