ನವದೆಹಲಿ : ಗಾಯಕ ಶ್ರೇಯಾ ಘೋಶಾಲ್ (Shreya Ghoshal) ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.  ತಾವು ಶೀಘ್ರದಲ್ಲೇ ತಾಯಿಯಾಗಲಿರುವುದಾಗಿ ಟ್ವಿಟರ್ ನಲ್ಲಿ (Twitter) ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಲ್ಲದೆ ತಮ್ಮ ಮಗುವಿನ ಹೆಸರನ್ನು ಕೂಡಾ ಟ್ವಿಟರ್ ನಲ್ಲಿ ಶ್ರೇಯಾ ಬರೆದುಕೊಂಡಿದ್ದಾರೆ. ಶ್ರೇಯಾ ತಾಯಿಯಾಗುತ್ತಿರುವ ಸುದ್ದಿ ತಿಳಿದು ಶ್ರೇಯಾ ಅಭಿಮಾನಿಗಳು ಕೂಡಾ ಸಂತಸಗೊಂಡಿದ್ದಾರೆ. ಶ್ರೇಯಾ ಘೋಷಾಲ್ ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಕರೀನಾ ಕಪೂರ್ (Kareena Kapoor) ತನ್ನ ಎರಡನೇ ಮಗುವಿಗೆ ಜನ್ಮ ನಿಡಿದ್ದರು. ಇದೀಗ ಖ್ಯಾತ ಗಾಯಕಿ ಶ್ರೇಯ ಘೋಷಾಲ್ (Shreya Ghoshal) ತಾನು ತಾಯಿಯಾಗಲಿರುವ ಸುದ್ದಿಯನ್ನು ಪ್ರಕಟಿಸಿದ್ದಾರೆ. 'ಬೇಬಿ ಶ್ರೇಯದಿತ್ಯ ಬರುತ್ತಿದ್ದಾರೆ ಎಂದು ಶ್ರೇಯಾ ಬರೆದುಕೊಂಡಿದ್ದಾರೆ. ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಶೀಲಾದಿತ್ಯ ಮತ್ತು ನಾನು ರೋಮಾಂಚನಗೊಂಡಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದ್ದು, ಎಲ್ಲರ ಪ್ರೀತಿ ಹಾರೈಕೆಯನ್ನು ಬಯಸಿದ್ದಾರೆ. 


ಇದನ್ನೂ ಓದಿ : Viral Video: Kareena Kapoor ಮಗನಿಗಾಗಿ ಭಾರೀ ಉಡುಗೊರೆ ತಂದ Karan Johar


ಶ್ರೇಯಾ ತಾಯಿಯಾಗಲಿರುವ ವಿಷಯ ತಿಳಿಯುತ್ತಿದ್ದಂತೆ ಶ್ರೇಯಾ ಅಭಿಮಾನಿಗಳು, ಬಾಲಿವುಡ್‌ನ (Bollywood)ಎಲ್ಲ ಸೆಲೆಬ್ರಿಟಿಗಳು ಶ್ರೇಯಾ ಮತ್ತು ಶೀಲಾದಿತ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ತಮ್ಮ ಪ್ರೀತಿ ಆಶೀವಾರ್ದಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 
  
2015 ರಲ್ಲಿ ಶ್ರೇಯಾ ಘೋಶಾಲ್ ತನ್ನ ದೀರ್ಘಕಾಲದ ಗೆಳೆಯ ಶಿಲಾದಿತ್ಯ (Sheeladithya) ಅವರನ್ನು ವಿವಾಹವಾದರು. ಈ ಮದುವೆಯಲ್ಲಿ ಕೆಲವೇ ಜನರು ಭಾಗವಹಿಸಿದ್ದರು. ಬಂಗಾಳಿ (Bengali) ಪದ್ಧತಿಯಲ್ಲಿ ಮದುವೆ ನೆರವೇರಿತ್ತು. 


ಇದನ್ನೂ ಓದಿ : ಬೀಚ್‌ನಲ್ಲಿ ಬಾಯ್ ಫ್ರೆಂಡ್ ಜೊತೆ ಕೇಕ್ ಕತ್ತರಿಸಿದ Shraddha Kapoor, ಪಾರ್ಟಿ ವಿಡಿಯೋ ವೈರಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.