Viral Video: Kareena Kapoor ಮಗನಿಗಾಗಿ ಭಾರೀ ಉಡುಗೊರೆ ತಂದ Karan Johar

ಕರೀನಾ ಕಪೂರ್ ಅವರ ಎರಡನೇ ಮಗನಿಗಾಗಿ ಮನೀಶ್ ಮಲ್ಹೋತ್ರಾ ಮತ್ತು ಕರಣ್ ಜೋಹರ್ ಅವರು  ಭಾರೀ ಉಡುಗೊರೆ ಹೊತ್ತು ಮನೆಗೆ ಬಂದರು. ಈ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Yashaswini V | Last Updated : Mar 4, 2021, 03:26 PM IST
  • ಕರೀನಾ ಕಪೂರ್ ಖಾನ್ ಫೆ. 21ರಂದು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು
  • ಮುಂಬೈನ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬೆಬೋ
  • ಆಗಸ್ಟ್ 2020 ರಲ್ಲಿ, ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ (Saif Ali Khan) ಜಂಟಿ ಹೇಳಿಕೆಯಲ್ಲಿ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಘೋಷಿಸಿದ್ದರು
Viral Video: Kareena Kapoor ಮಗನಿಗಾಗಿ ಭಾರೀ ಉಡುಗೊರೆ ತಂದ Karan Johar  title=
Kareena Kapoor Khan, Saif Ali Khan Party With Arisma Kapoor, Malika Arora And Others

ಮುಂಬೈ : ಕರೀನಾ ಕಪೂರ್ ಖಾನ್ ಕೆಲವು ದಿನಗಳ ಹಿಂದೆ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು. ಕರೀನಾ-ಕೈಫ್ ಅವರ ಎರಡನೇ (Kareena Kapoor Second Baby) ಮಗುವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಏತನ್ಮಧ್ಯೆ ಬಾಲಿವುಡ್ ತಾರೆಯರು ಕರೀನಾ ಕಪೂರ್ ಖಾನ್ ಅವರ ಮನೆಗೆ ನಿರಂತರವಾಗಿ ಭೇಟಿ ನೀಡುತ್ತಿದೆ.  ಇತ್ತೀಚಿಗೆ ಕರೀನಾ ಕಪೂರ್ ಖಾನ್ ಅವರ ಆಪ್ತ ಸ್ನೇಹಿತ ಕರಣ್ ಜೋಹರ್, ಮನೀಶ್ ಮಲ್ಹೋತ್ರಾ  ಕರೀನಾ ಅವರನ್ನು ಭೇಟಿಯಾಗಲು ಬಂದರು ಮತ್ತು ಮಗುವಿಗಾಗಿ ಅದ್ಭುತ ಉಡುಗೊರೆಯನ್ನು ಸಹ ತಂದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 
 
 
 

 
 
 
 
 
 
 
 
 
 
 

A post shared by Voompla (@voompla)

ಕರಣ್ ಜೋಹರ್ ಮಾತ್ರವಲ್ಲದೆ ಕರೀನಾ ಕಪೂರ್ ಖಾನ್ ಅವರ ದ್ವಿತೀಯ ಪುತ್ರನನ್ನು (Kareena Kapoor Second Baby) ನೋಡಲು ಮಲಿಕಾ ಅರೋರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕ ತಾರೆಯರು ಅವರ ಮನೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ- 'ಕರೀನಾ'ಗೆ ಮದುವೆ ಆಗ್ಬೇಡ ಅಂತ ಕೆಲವರು ಹೇಳಿದ್ರಂತೆ, ಯಾಕ್ ಗೊತ್ತಾ?

ಕರೀನಾ ಕಪೂರ್ ಖಾನ್  (Kareen Kapoor Khan) ಅವರ ಸ್ನೇಹಿತರಾದ ಮಲೈಕಾ ಅರೋರಾ, ಅಮೃತ ಅರೋರಾ, ಮನೀಶ್ ಮಲ್ಹೋತ್ರಾ ಮತ್ತು ಕರಿಷ್ಮಾ ಕಪೂರ್ ಅವರನ್ನು ಭೇಟಿ ಮಾಡಿದರು. ಕರೀನಾ ಅವರೊಂದಿಗೆ ಸ್ನೇಹಿತರ ಒಡನಾಟದ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಹೊಂದಿವೆ. ಅವುಗಳಲ್ಲಿ ಕೆಲವು ವಿಡಿಯೋಗಳು ವೈರಲ್ ಆಗಿವೆ.

ಇದನ್ನೂ ಓದಿ-  COVID-19 ವಿರುದ್ಧದ ಹೋರಾಟಕ್ಕೆ UNICEFಗೆ ದೇಣಿಗೆ ನೀಡಿದ ಕರೀನಾ ದಂಪತಿಗೆ ನೆಟಿಜನ್‌ಗಳ ಪ್ರಶ್ನೆ ಇದು

ಈ ವೈರಲ್ ವಿಡಿಯೋದಲ್ಲಿ ಮನೀಶ್ ಮಲ್ಹೋತ್ರಾ ಅವರು ಕರೀನಾ ಮತ್ತು ಸೈಫ್ ಅವರ ಮಗನಿಗೆ ಉಡುಗೊರೆಗಳನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ. ಕರೀನಾ ಕಪೂರ್ ತನ್ನ ಎರಡನೇ ಮಗುವಿನ ಮುಖವನ್ನು ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ತೋರಿಸಿಲ್ಲ. ಅಲ್ಲದೆ ಮಗುವಿನ ಜನನದ ಮೊದಲು ಕರೀನಾ ದೊಡ್ಡ ಮನೆಗೆ ಸ್ಥಳಾಂತರಗೊಂಡರು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News