Singer Suchitra statements against actor Vishal: ಗಾಯಕಿ ಸುಚಿತ್ರಾ, ನಟ ವಿಶಾಲ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ. 'ಮದಗಜ ರಾಜ' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತೀರಾ ಅನಾರೋಗ್ಯಕ್ಕೀಡಾದಂತೆ ಕಂಡುಬಂದಿದ್ದ ತಮಿಳು ನಟ ವಿಶಾಲ್ ಬಗ್ಗೆ ಇಂತಹ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

'ಮದಗಜ ರಾಜ' ಸಿನಿಮಾ ನಿರ್ಮಾಣವಾಗಿ 12 ವರ್ಷಗಳು ಕಳೆದರೂ, ಬಿಡುಗಡೆಯಾಗಿರಲಿಲ್ಲ. ಇದೀಗ ಅದೇ ಚಿತ್ರದ ಬಿಡುಗಡೆಯ ಪ್ರಚಾರ ಕಾರ್ಯಕ್ರಮದಲ್ಲಿ ವಿಶಾಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ವಿಶಾಲ್ ಕೈಗಳು ನಡುಗುತ್ತಿದ್ದವು. ಅಷ್ಟೇ ಅಲ್ಲದೆ, ಮೈಕ್ ಹಿಡಿಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ನಡುಗುವ ಕೈಕಾಲುಗಳನ್ನು ಕಂಡಾಗ, ಜನರು ಅವರಿಗೆ ಏನೋ ಕಾಯಿಲೆ ಇದೆ ಎಂದು ಭಾವಿಸಿದ್ದರು.


ಇದನ್ನೂ ಓದಿ: ಈ ಹಣ್ಣಿನ ರಸ ಕುಡಿಯಿರಿ.. ಕಣ್ಣಿನ ದೃಷ್ಟಿ ಮಂಕಾಗೋದೇ ಇಲ್ಲ! ವಯಸ್ಸು 60 ದಾಟಿದ್ರೂ ಕನ್ನಡಕವೂ ಬೇಕಿಲ್ಲ, ಪೊರೆಯೂ ಬರೋದಿಲ್ಲ


ಇದೀಗ ಇಂತಹ ಸಂದರ್ಭದಲ್ಲಿ ನಟ ವಿಶಾಲ್‌ ಕುರಿತಾಗಿ ಗಾಯಕಿ ಸುಚಿತ್ರಾ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಹಂಚಿಕೊಂಡಿದ್ದು. "ಕರ್ಮಾ ಅನ್ನೋದು ಒಂದು b**ch, ಆಕೆ ನನ್ನ ಪರ ಇದ್ದಾಳೆ, ಆದ್ರೆ ನೀವು ತುಂಬಾ ಕೆಳಗೆ ಇಳಿಯುತ್ತಿದ್ದೀರಿ" ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.


ವಿಡಿಯೋದಲ್ಲಿ ಸುಚಿತ್ರಾ ಹೇಳುವಂತೆ, "ಫ್ಯಾನ್ಸ್‌ ತುಂಬಾ ಚೀಪ್‌ ಆಗಿದ್ದಾರೆ. ನೀವೆಲ್ಲರೂ ವಿಶಾಲ್ ಬಗ್ಗೆ ವಿಷಾದಿಸುತ್ತಿದ್ದೀರಿ. ಹಲವು ವರ್ಷಗಳ ಹಿಂದೆ ನಡೆದ ಒಂದು ವಿಷಯವನ್ನು ನಾನು ನಿಮಗೆ ಹೇಳುತ್ತೇನೆ. ಒಂದು ದಿನ, ನನ್ನ ಪತಿ ಕಾರ್ತಿಕ್ ಮನೆಯಲ್ಲಿ ಇಲ್ಲದಿದ್ದಾಗ, ಮನೆಯ ಮೇಲೆ ಯಾರೋ ಬಡಿದಂತಾಯಿತು. ನಾನು ಹೋಗಿ ಬಾಗಿಲು ತೆರೆದಾಗ, ವಿಶಾಲ್ ಕೈಯಲ್ಲಿ ಬಾಟಲಿ ಹಿಡಿದು ನಿಂತಿದ್ದ. ಕಾರ್ತಿಕ್ ಕುಮಾರ್ ಮನೆಯಲ್ಲಿದ್ದಾರಾ ಎಂದು ಕೇಳಿದ. ನಾನು ಇಲ್ಲ ಎಂದೆ.. ಅದಕ್ಕಾಗಿಯೇ ಅವನು ಬಂದಿದ್ದ. ನಂತರ, ತನ್ನನ್ನು ಒಳಗೆ ಬಿಡುವಂತೆ ಕೇಳಿದನು. ಆದರೆ ನಾನು ನಿರಾಕರಿಸಿದೆ. ಬಾಟಲಿಯನ್ನು ಗೌತಮ್ ಮೆನನ್ ಅವರ ಕಚೇರಿಗೆ ತೆಗೆದುಕೊಂಡು ಹೋಗುವಂತೆ ನಾನು ಸೂಚಿಸಿದೆ. ಆ ನಂತರ ನಾನು ಡೋರ್‌ ಬಂದ್‌ ಮಾಡಿ ಸಂಭಾಷಣೆಯನ್ನು ಮುಗಿಸಿದೆ. ಈಗ ಆತನನ್ನು ಈ ರೀತಿ ನೋಡಿ ನನಗೆ ಸಂತೋಷವಾಯಿತು" ಎಂದು ಹೇಳಿದ್ದಾರೆ.


ಅಭಿಮಾನಿಗಳು ಮತ್ತು ಸಹ ನಟರು ವಿಶಾಲ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸುಚಿತ್ರಾ ಅವರ ಹೇಳಿಕೆಗಳು ಆಧಾರರಹಿತ ಎಂದು ಟೀಕಿಸಿದ್ದಾರೆ.


ವಿಶಾಲ್ ಗೆ ಏನಾಯಿತು?
ತಮಿಳು ಚಿತ್ರರಂಗದಲ್ಲಿ ದೀರ್ಘಕಾಲದಿಂದ ಪ್ರಭಾವಿ ನಟನಾಗಿರುವ ವಿಶಾಲ್‌, ಕಾರ್ಯಕ್ರಮದಲ್ಲಿ ದುರ್ಬಲ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಈ ಮಧ್ಯೆ ಚೆನ್ನೈನ ಅಪೋಲೋ ಆಸ್ಪತ್ರೆ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದು, ವಿಶಾಲ್‌ಗೆ ವೈರಲ್ ಜ್ವರ ತಗುಲಿದ್ದು, ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ ಎಂದು ದೃಢಪಡಿಸಿದೆ.


ಇದನ್ನೂ ಓದಿ: ಈ ರಾಶಿಯವರಿಗೆ ಶುಕ್ರ ದೆಸೆ ಆರಂಭ :ಕಷ್ಟ ಕಳೆದು ಸಿರಿ ಸಂಪತ್ತು ಒಲಿದು ಬರುವ ಪರ್ವ ಕಾಲ ! ಸ್ವಂತ ಮನೆ, ವಾಹನ ಖರೀದಿ ನನಸಾಗುವ ಸಮಯ


ಅಂದಹಾಗೆ, ಸುಚಿತ್ರಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಹಾಗೂ ಹಲವಾರು ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಆಘಾತಕಾರಿ ಆರೋಪಗಳನ್ನು ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.