Mrunal Thakur on marriage: ಸಿನಿರಂಗದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡಿದ್ದ ಸಿನಿಮಾಗಳಲ್ಲಿ ‘ಸೀತಾರಾಮಂ’ ಕೂಡ ಒಂದು. ಈ ಸಿನಿಮಾದಲ್ಲಿ ಸೀತಾಮಹಾಲಕ್ಷ್ಮೀಯಾಗಿ ಕಾಣಿಸಿಕೊಂಡಿದ್ದ ನಟಿ ಮೃಣಾಲ್ ಠಾಕೂರ್ ಜನಮೆಚ್ಚುಗೆಗೆ ಪಾತ್ರರಾಗಿದ್ದಲ್ಲದೆ, ಈ ಚಿತ್ರದ ಬಳಿಕ ಮೃಣಾಲ್ ಸಿಕ್ಕಾಪಟ್ಟೆ ಹೆಸರು ಗಳಿಸಿದ್ದರು.


COMMERCIAL BREAK
SCROLL TO CONTINUE READING

ಇನ್ನು ಇತ್ತೀಚಿಗೆ ಮೃಣಾಲ್ ಠಾಕೂರ್ ಅವರ ಕೆಲ ಫೋಟೋಗಳು ವೈರಲ್ ಆಗಿವೆ. ಮೆಲ್ಬರ್ನ್​’ನ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸುವಾಗ ಧರಿಸಿದ್ದ ಉಡುಗೆಯಿಂದ ನಟಿ ಇನ್ನಷ್ಟು ಜನಪ್ರಿಯತೆ ಗಳಿಸಿದ್ದರು. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಮೃಣಾಲ್ ಸುದ್ದಿಯಲ್ಲಿದ್ದಾರೆ.


ಇದನ್ನೂ ಓದಿ: 'ಉಫ್'..! ಮೌನಿ ರಾಯ್ ಗಾರ್ಜಿಯಸ್ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ : ಫೋಟೋಸ್‌ ನೋಡಿ..


ತನ್ನ ನೆಟ್‌’ಫ್ಲಿಕ್ಸ್ ವೆಬ್ ಶೋ 'ಮೇಡ್ ಇನ್ ಹೆವನ್ 2' ಯಶಸ್ಸನ್ನು ಆನಂದಿಸುತ್ತಿರುವ ಬಾಲಿವುಡ್ ನಟಿ ಮೃಣಾಲ್ ಠಾಕೂರ್, ಮದುವೆ ಮತ್ತು ಜೀವನ ಸಂಗಾತಿಯನ್ನು ಹುಡುಕುತ್ತಿದ್ದಾರಂತೆ. ಅಷ್ಟೇ ಅಲ್ಲದೆ ತನ್ನ ‘ರಾಮ’ ಹೇಗಿರಬೇಕೆಂಬ ಕಲ್ಪನೆ ಬಗ್ಗೆಯೂ ಮಾತನಾಡಿದ್ದಾರೆ.  


ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೃಣಾಲ್ ಠಾಕೂರ್, “ನನಗೆ ಮದುವೆಯ ಮೇಲೆ ನಂಬಿಕೆ ಇದೆ. ವೈವಾಹಿಕ ಜೀವನದಲ್ಲಿ ಯಶಸ್ವಿಯಾದವರನ್ನು ನಾನು ನೋಡಿದ್ದೇನೆ” ಎಂದು ಹೇಳಿದ್ದಾರೆ.


"ನಾನು ಮದುವೆ ಕಾನ್ಸೆಪ್ಟ್ ಮೇಲೆ ನಂಬಿಕೆ ಹೊಂದಿದ್ದೇನೆ. ನಾನು ಅನೇಕ ಯಶಸ್ವಿ ಮದುವೆಗಳನ್ನು ನೋಡಿದ್ದೇನೆ. ಏಕೆಂದರೆ ಅವರೆಲ್ಲರೂ ಮೇಡ್ ಫಾರ್ ಈಚ್ ಅದರ್” ಎಂದಿದ್ದಾರೆ


ಆದರ್ಶ ಸಂಗಾತಿಯನ್ನು ಹುಡುಕಲು ವಯಸ್ಸಿನ ಮಿತಿಯಿಲ್ಲ ಎಂದು ಹೇಳಿದ ನಟಿ ಮೃಣಾಲ್, ತಮಗೆ ಸೂಕ್ತವಾದ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಹೇಳಿದ್ದಾರೆ.


“ಸರಿಯಾದ ಸಂಗಾತಿಯನ್ನು ಹುಡುಕಲು ಯಾವುದೇ ವಯಸ್ಸಿಲ್ಲ. ಆದರೆ ಆತನೇ ನಿಮ್ಮ ನಿಜವಾಗ ಸಂಗಾತಿ ಎಂದು ಅರಿತುಕೊಂಡರೆ ಕಾಯಬೇಡಿ, ಆ ವ್ಯಕ್ತಿಯನ್ನು ಮದುವೆಯಾಗಿ” ಎಂದು ಹೇಳಿದ್ದಾರೆ.


ಇನ್ನು ಈ ಸಂದರ್ಶನ ನೋಡಿದ ಅನೇಕರು ಮೃಣಾಲ್ ಠಾಕೂರ್ ಮದುವೆ ಫಿಕ್ಸ್ ಆಗಿದೆ. ಅದೇ ಕಾರಣಕ್ಕೆ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಸೀತಾಮಹಾಲಕ್ಷ್ಮೀ ಕೈಹಿಡಿಯುವ ರಾಮ ಯಾರೆಂದು ಪ್ರಶ್ನಿಸುತ್ತಿದ್ದಾರೆ.


ಸದ್ಯ ನಟಿ ಅಧಿರಾ ಆರ್ಯ ಅವರ 'ಮೇಡ್ ಇನ್ ಹೆವೆನ್' ಎರಡನೇ ಸೀಸನ್‌’ನಲ್ಲಿ ಅಭಿನಯಿಸಿದ್ದಾರೆ. ಮೃಣಾಲ್ ಠಾಕೂರ್ ಅವರು 'ಲವ್ ಸೋನಿಯಾ' ಚಿತ್ರದ ಮೂಲಕ ಬಾಲಿವುಡ್‌’ಗೆ ಪಾದಾರ್ಪಣೆ ಮಾಡಿದ್ದರು. ‘ಸೀತಾರಾಮಂ’, 'ಸೂಪರ್ 30,' 'ಬಾಟ್ಲಾ ಹೌಸ್,' 'ಘೋಸ್ಟ್ ಸ್ಟೋರೀಸ್,' 'ತೂಫಾನ್,' 'ಧಮಾಕಾ,' 'ಜೆರ್ಸಿ' ಮತ್ತು 'ಗುಮ್ರಾಹ್' ಚಿತ್ರಗಳಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ:  ಬ್ಲಾಕ್ ಬಿಕಿನಿಯಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ..! ಫೋಟೋಸ್‌ ವೈರಲ್‌


ಇನ್ನು ಇತ್ತೀಚೆಗೆಯಷ್ಟೇ ನಟ ಅರ್ಜಿತ್ ತನೇಜಾ ಮೃಣಾಲ್ ಠಾಕೂರ್ ಮೇಲೆ ತನಗೆ ಕ್ರಶ್ ಇರುವುದಾಗಿ ಹೇಳಿಕೊಂಡಿದ್ದಾರೆ.  “ಆಕೆ ಜೊತೆ ನಾನು ನಟಿಸಿದ್ದೇನೆ. ನಾವು ಸ್ನೇಹಿತರಾಗಿದ್ದೇವೆ, ಹಳೆಯ ದಿನಗಳ ಬಗ್ಗೆ ಮಾತನಾಡಬೇಡಿ. ಈಗ ನನಗೆ ಆಕೆಯ ಮೇಲೆ ಕ್ರಶ್ ಇದೆ” ಎಂದಿದ್ದಾರೆ. ಕೆಲ ವರುಷಗಳ ಹಿಂದೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದರು ಎಂದು ಮೂಲಗಳು ಹೇಳುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.