SK Bhagavan life history : ನಟನಾಗಲು ಬಂದು ನಿರ್ದೇಶಕರಾಗಿ ಕನ್ನಡ ಸಿನಿರಸಿಕರಿಗೆ ಅದ್ಭುತ ಸಿನಿಮಾಗಳನ್ನು ನೀಡಿದ ಚಂದನವನದ ಖ್ಯಾತ ಹಿರಿಯ ನಿರ್ದೇಶಕ ಎಸ್‌. ಕೆ. ಭಗವಾನ್‌ ಅವರ ಜೀವನವೇ ಒಂದು ಪಾಠದಂತಿದೆ. ಒಂದೊತ್ತಿನ ಊಟಕ್ಕೂ ಭಗವಾನ್‌ ಅವರು ಪರದಾಡುತ್ತಿದ್ದರು. ಅದೇಷ್ಟೊ ಸಲ ಹೊಟ್ಟೆಗೆ ಹಿಟ್ಟಿಲ್ಲದೆ ಮಲಗಿದ್ದರೇನೊ. ಅಂತಹುದೆ ಪ್ರಸಂಗವೊಂದರಲ್ಲಿ ಎರಡು ದಿನದಿಂದ ಊಟವಿಲ್ಲದೆ ಪರದಾಡುತ್ತಿದ್ದ ಭಗವಾನ್‌ ಅವರಿಗೆ ನಿಜ ಸ್ನೇಹದ ಪರಿಚಯವಾಗಿತ್ತು ಅಂದ್ರೆ ನಿವು ನಂಬಲೇಬೇಕು. 


COMMERCIAL BREAK
SCROLL TO CONTINUE READING

ಯಸ್‌.. ಈ ಘಟನೆ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಅಂದ್ರೆ ಹಿಂದಿನ ಕಾಲದ ಮದ್ರಾಸ್‌ಗೆ ನಾವು ಪಯಣಮಾಡ್ಬೇಕು. ಏಕೆಂದ್ರೆ ಈ ಸಂಗತಿ ನಡೆದಿದ್ದು ಅಲ್ಲಿಯೇ. ಹೆಚ್ಚಾಗಿ ಅಂದಿನ ಕಾಲದ ಸಿನಿಮಾಗಳ ಚಿತ್ರೀಕರಣ ಮದ್ರಾಸ್‌ನಲ್ಲಿ ನಡೆಯುತ್ತಿದ್ದವು. ಅದಕ್ಕಾಗಿ ಕನ್ನಡದ ಸಿನಿ ನಟರು, ನಿರ್ದೇಶಕರು, ಛಾಯಾಗ್ರಾಹಕರು ಅಲ್ಲಿಯೇ ವಾಸ ಮಾಡಬೇಕಾದ ಪ್ರಸಂಗ ಎದುರಾಗಿತ್ತು. ಸಾಧನೆ ಮಾಡ್ಬೇಕು ಅಂದವರಿಗೆ ಊರು ಯಾವುದು ಕೇರಿಯಾವುದಾದರೇನು ಅಲ್ಲವೆ.


ಇದನ್ನೂ ಓದಿ: SK Bhagavan : ಡಾ. ರಾಜ್‌ ಮೇಲೆ ಹಲ್ಲೆ ಬಳಿಕ 8 ವರ್ಷ ದೂರವಾಗಿದ್ದ ಭಗವಾನ್‌..!


ಮದ್ರಾಸ್‌ನಲ್ಲಿ ಸಿನಿಮಾ ಪ್ರೊಡಕ್ಷನ್‌ ಯುನಿಟ್‌ನಲ್ಲಿ ಕೆಲಸಗಾರನಾಗಿ ಭಗವಾನ್‌ ಅವರು ಕೆಲಸಮಾಡುತ್ತಿದ್ದರು. ಆಗ ಡಾ. ರಾಜ್‌ಕುಮಾರ್‌ ಅವರು ಸಹ ಪಾರ್ವತಮ್ಮ ಅವರನ್ನು ಮದುವೆಯಾಗಿ ಮದ್ರಾಸ್‌ನಲ್ಲಿ ವಾಸವಿದ್ದರು. ಮದ್ರಾಸ್‌ನ ಪಾಂಡಿ ಬಜಾರ್‌ ಎನ್ನುವ ಸ್ಥಳದಲ್ಲಿ ಹೆಚ್ಚಾಗಿ ಕನ್ನಡ ಸಿನಿಮಾ ರಂಗದವರು ಕೆಲಸಮಾಡುತ್ತಿದ್ದರು. ಭಗವಾನ್‌ ಅವರು ಅಲ್ಲಿ ಕೆಲಸ ಮಾಡುತ್ತಿರುವಾಗ ಒಮ್ಮೊಮ್ಮೆ ಸರಿಯಾಗಿ ಕೆಲಸ ಸಿಗದೆ, ಸಂಬಳ ವಿಲ್ಲದೆ ಒತ್ತು ಊಟಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದರು.


ಒಂದು ದಿನ ಭಗವಾನ್‌ ಅವರು ಊಟ ಮಾಡದೇ ಎರಡು ದಿನಗಳ ಕಾಲ ಹಸಿವಿನಿಂದ ತತ್ತರಿಸಿದ್ದರು. ಕೊನೆಗೆ ಯಾರ ಹತ್ತಿರವಾದ್ರೂ ಸಾಲ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ನಿರ್ದಾರಕ್ಕೆ ಬಂದ್ರು. ಅಗ ಅಲ್ಲಿಗೆ ಛಾಯಾಗ್ರಾಹಕ ದೊರೆ ಅವರು ಬರುತ್ತಾರೆ. ಅವರ ಬಳಿ ಭಗವಾನ್‌ ಅವರು ಒಂದು ರೂ. ಇದ್ರೆ ಕೊಡುವಂತೆ ಕೇಳುತ್ತಾರೆ. ಅಲ್ಲದೆ, ಊಟ ಮಾಡಿ ಎರಡು ದಿನವಾಗಿದೆ, ಸಂಬಳ ಬಂದ್ಮೇಲೆ ಕೊಡುವುದಾಗಿ ಹೇಳಿ ಅಳಲು ತೋಡಿಕೊಳ್ಳುತ್ತಾರೆ. 


ಇದನ್ನೂ ಓದಿ: SK Bhagavan : ಕನ್ನಡದ ಖ್ಯಾತ ನಿರ್ದೇಶಕ ಎಸ್‌.ಕೆ ಭಗವಾನ್‌ ವಿಧಿವಶ


ಭಗವಾನ್‌ ಅವರನ್ನು ಕಂಡ ದೊರೆ ಅವರು ತಮ್ಮ ಹತ್ತಿರವಿದ್ದ ಎಂಟಾಣೆ ಕೊಡುತ್ತಾರೆ. ನಂತರ ಭಗವಾನ್‌ ಹೋಟೆಲ್‌ಗೆ ಹೋಗಿ ತಿಂಡಿ ತಿಂದು ಬಂದು, ಜಿವಿ ಅಯ್ಯರ್‌ ಅವರ ಕಚೇರಿಗೆ ಬಂದು ಕುಳಿತಿರುತ್ತಾರೆ. ಆಗ ಅಲ್ಲಗೆ ಬರುವ ಅಯ್ಯರ್‌, ʼ ಯಾಕೋ... ನಾವೆಲ್ಲ ಸತ್ತುಹೋಗಿದೀವಾ ನಿನ್ನ ಪಾಲಿಗೆ, ಎರಡು ದಿನ ಊಟವಿಲ್ಲದೆ ಇದ್ದೀಯಾʼ ಅಂತ ಕೂಗಾಡುತ್ತಾರೆ. ಅಯ್ಯರ್‌ ಅವರಿಗೆ ದೊರೆ ಈ ವಿಚಾರವನ್ನು ಅವರಿಗೆ ಹೇಳಿದ್ದರು. ಅಲ್ಲದೆ, ಭಗವಾನ್‌ಗೆ ದೊರೆ ನೀಡಿದ್ದ ಹಣ, ಅಯ್ಯರ್‌ ಅವರ ಬಳಿ ದೊರೆ ಪಡೆದಿದ್ದ ಸಾಲವಾಗಿತ್ತು.. ಸ್ವತಃ ಹಸಿದುಕೊಂಡು ಇದ್ದ ದೊರೆಯವರು ತಮ್ಮ ಬಳಿ ಇದ್ದ ಹಣವನ್ನೇ ಭಗವಾನ್‌ಗೆ ನೀಡಿದ್ದರು. ಅಂದಿನಿಂದಿ ಇಬ್ಬರೂ ಜೊತೆಯಾಗಿಯೇ ಇದ್ದರು. ಸ್ನೇಹ ಅಂದ್ರೆ ಇದೆ ಅಲ್ವಾ ಗೆಳೆಯರೆ..


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.