Snake vs Lizard viral video : ಜೀವನವೇ ಒಂದು ಹೋರಾಟ, ಇಲ್ಲಿ ಎದುರಾಳಿಯ ಜೊತೆ ಎದೆಗೊಟ್ಟು ನಿಂತು ಹೋರಾಡಿದವರು ಗೆಲ್ಲುತ್ತಾರೆ. ಅಲ್ಲದೆ, ಬಲಶಾಲಿಗಳು ದುರ್ಬಲರನ್ನು ಬೇಟೆಯಾಡುತ್ತಾರೆ, ಪರಾಕ್ರಮಿಗಳು ಬದುಕುತ್ತಾರೆ ಎಂಬುದು ಸಾಬೀತಾಗಿದೆ. ಇದು ಪ್ರಕೃತಿಯ ನಿಯಮಗಳನ್ನು ಅವಲಂಬಿಸಿರುತ್ತದೆ. ಪ್ರಾಣಿಗಳಿಗೂ ಇದು ಕೂಡ ಅನ್ವಯಿಸುತ್ತದೆ. 


COMMERCIAL BREAK
SCROLL TO CONTINUE READING

ನಾವು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ವೈರಲ್ ವೀಡಿಯೋದಲ್ಲಿ, ಹಲ್ಲಿಯು ತನ್ನ ಮರಿಯ ರಕ್ಷಣೆಗಾಗಿ ಹಾವಿನ ಜೊತೆ ಹೋರಾಡುವ ದೃಶ್ಯವನ್ನು ನೀವು ಕಾಣಬಹುದು. ವೀಡಿಯೊದಲ್ಲಿ, ಹಾವು ಮರಿ ಹಲ್ಲಿಯನ್ನು ಹಿಡಿದು ಅದನ್ನು ಬೇಟೆಯಾಡಲು ಬಿಗಿಯಾಗಿ ಸುತ್ತುತ್ತದೆ. ಈ ಮಧ್ಯೆ, ಗೋಡೆಯಲ್ಲಿ ಸಿಕ್ಕಿಬಿದ್ದ ತಾಯಿ ಹಲ್ಲಿ ತನ್ನ ಮರಿಯನ್ನು ರಕ್ಷಿಸಲು ಹಾವಿನ ವಿರುದ್ಧ ಹೋರಾಡುತ್ತದೆ.



ಇದನ್ನೂ ಓದಿ: Shocking: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 10ರೂ. ನೀಡಿದ 60 ವರ್ಷದ ಅಜ್ಜ!


ಹಲ್ಲಿ ಯಾವುದೇ ಭಯವಿಲ್ಲದೆ ಹಾವನ್ನು ಕಚ್ಚುತ್ತದೆ. ಆದರೆ ದುರದೃಷ್ಟವಶಾತ್ ಕೊನೆಗೆ ಎಳೆಯ ಹಲ್ಲಿ ಹಾವಿಗೆ ಬಲಿಯಾದಂತಿದೆ. ವೀಡಿಯೊ ನೋಡಲು ತುಂಬಾ ಭಯಾನಕ ಮತ್ತು ನೋವಿನಿಂದ ಕೂಡಿದೆ. ಇದೆ ಆದರೆ ಪ್ರಕೃತಿಯ ನಿಯಮ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಹಸಿವಿಗೆ ಯಾವುದೇ ಭಾವನೆಗಳಿಲ್ಲದೆ ಎಂದು ವಿಡಿಯೋ ನೋಡಿದ್ರೆ ಅರ್ಥವಾಗುತ್ತದೆ. ಅಲ್ಲದೆ, ತಾಯಿಯ ದೈರ್ಯ ಎಂತಹುದು ಅಂತ ತಿಳಿಸುತ್ತದೆ.


ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಲೆಕ್ಕವಿಲ್ಲದಷ್ಟು ವೀಡಿಯೋಗಳು ಕೆಲವೊಮ್ಮೆ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ, ಕೆಲವೊಮ್ಮೆ ನಮ್ಮನ್ನು ಬೆರಗುಗೊಳಿಸುತ್ತವೆ, ಕೆಲವೊಮ್ಮೆ ದುಃಖವನ್ನು ಕೂಡಿಸುತ್ತವೆ. ಪ್ರತಿದಿನ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ವೀಡಿಯೋಗಳು ಶೇರ್ ಆಗುತ್ತಿದ್ದರೂ ಕೆಲವು ವಿಡಿಯೋಗಳು ಮಾತ್ರ ನಮ್ಮ ಗಮನ ಸೆಳೆಯುತ್ತವೆ. ಅಂತಹ ವಿಡಿಯೋಗಳಲ್ಲಿ ಇದೂ ಕೂಡ ಒಂದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.