ಬೆಂಗಳೂರು: ಖ್ಯಾತ ನಿರ್ದೇಶಕ ಯೋಗರಾಜ್ ಭಟ್(Yogaraj Bhat) ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ  ‘ಪದವಿ ಪೂರ್ವ’(Padavi Poorva) ಸಿನಿಮಾದಲ್ಲಿ ‘ರಾಬರ್ಟ್’ ಖ್ಯಾತಿಯ ಸೋನಲ್ ಮೊಂಥೆರೋ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿನೋದ್ ಪ್ರಭಾಕರ್ ಜೊತೆ ‘ರಾಬರ್ಟ್’ ಸಿನಿಮಾದಲ್ಲಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದ ಸೋನಲ್ ಕರುನಾಡಿನ ಹೊಸ ಕ್ರಶ್ ಆಗಿದ್ದಾರೆ. ಸದ್ಯ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಒಂದೊಂದೆ ಆಫರ್ ಗಳು ಹುಡುಕಿಕೊಂಡು ಬರುತ್ತಿವೆ.


COMMERCIAL BREAK
SCROLL TO CONTINUE READING

ಯೋಗರಾಜ್ ಭಟ್ಟರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿರುವ ಅನುಭವ ಹೊಂದಿರುವ ಹರಿಪ್ರಸಾದ್ ಜಯಣ್ಣ(Hariprasad Jayanna) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೃಥ್ವಿ ಶಾಮನೂರ್ ಈ ಸಿನಿಮಾಗೆ ನಾಯಕರಾಗಿದ್ದು, ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡ ಆಗಸ್ಟ್ 2ರಿಂದ 4ನೇ ಹಂತದ ಚಿತ್ರೀಕರಣ ಮುಗಿಸಿದ್ದು, ಮುಂದಿನ ಕೆಲಸಗಳಲ್ಲಿ ಬ್ಯುಸಿಯಾಗಿದೆ. ರಾಬರ್ಟ್ ಸಿನಿಮಾದಲ್ಲಿ ಮುದ್ದುಮುದ್ದಾಗಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಸೋನಲ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತಾ ಚಿತ್ರತಂಡ ತಿಳಿಸಿದೆ.


ಇದನ್ನೂ ಓದಿ: Fighter Vivek Death: ಸಿನಿಮಾ ಮಂದಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ..! 


‘ನನ್ನ ಸಿನಿಮಾವು 90ರ ದಶಕದ ಕಥೆಯನ್ನು ಹೊಂದಿದೆ. ಇದು ಒಂದು ಪ್ರೇಮಕಥೆಯಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಸೋನಲ್ ಈ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇಡೀ ಚಿತ್ರಕಥೆಯು ಅವರ ಪಾತ್ರದೊಂದಿಗೆ ಪ್ರಾರಂಭವಾಗಿ ಕೊನೆಯಾಗುತ್ತದೆ. ಅವರ ಪಾತ್ರವು ಪಸ್ತುತ ಸನ್ನಿವೇಶದಲ್ಲಿ ನಡೆಯುತ್ತದೆ. ಕಣ್ಣಿನ ತಜ್ಞ ವೈದ್ಯ(Eye Specialist)ರಾಗಿ ಅವರು ಅಭಿನಯಿಸಲಿದ್ದಾರೆ’ ಅಂತಾ ಹರಿಪ್ರಸಾದ್ ಹೇಳಿದ್ದಾರೆ.


ಇದನ್ನೂ ಓದಿ: Ashika Ranganath: ತಮಿಳಿನ ಚೊಚ್ಚಲ ಚಿತ್ರದಲ್ಲಿ ಕಬಡ್ಡಿ ಆಡಲಿರುವ ನಟಿ ಆಶಿಕಾ ರಂಗನಾಥ್..!


ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರದ 4ನೇ ಹಂತದ ಶೂಟಿಂಗ್(Shooting) ಅನ್ನು ಚಿತ್ರತಂಡ ಮುಗಿಸಿದೆ. ಸೆಪ್ಟೆಂಬರ್‌ನಲ್ಲಿ ನಾವು ಸೋನಲ್‌ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಅತಿಥಿ ಪಾತ್ರವಾದರೂ ಸೋನಲ್ ಈ ಚಿತ್ರದ ಕಥೆಗೆ ಆರಂಭ ವನ್ನು ಅಂತ್ಯವನ್ನು ಒದಗಿಸಲಿದ್ದಾರೆ. ಅವರು ನಮ್ಮ ಚಿತ್ರದ ಭಾಗವಾಗಿರುವುದಕ್ಕೆ ನಮಗೆ ಅತ್ಯಂತ ಖುಷಿಯಾಗಿದೆ ಅಂತಾ ಹರಿಪ್ರಸಾದ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ