ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ಜನರ ಸಹಾಯಕ್ಕೆ ಧಾವಿಸಿದ್ದ ಸೋನು ಸೂದ್ ಅವರು ನಡೆಸಿರುವ ಕಾರ್ಯದ ಕುರಿತು ಎಷ್ಟೇ ಹೇಳಿದರು ಅದು ಕಡಿಮೆ. ಪ್ರತಿಯೊಂದು ವೇದಿಕೆಯಲ್ಲಿ ಅವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ, ಇದೀಗ ನಾರ್ವೆ ಬಾಲಿವುಡ್ ಫಿಲ್ಮ್ ಫೆಸ್ಟಿವಲ್ ನಲ್ಲಿಯೂ ಕೂಡ ಸೋನು ಸೂದ್ ಅವರನ್ನು ಗೌರವಿಸಲಾಗುತ್ತಿದೆ. ಅಲ್ಲಿ ಸೋನು ಅವರಿಗೆ ಮಾನವತಾವಾದಿ ಪುರಸ್ಕಾರ 2020 ನೀಡಿ ಗೌರವಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡವರಿಗೆ ನಟ ಸೋನು ಸೂದ್ ನಿಂದ ಈ ಧಮಾಕಾ...!


ಡಿಸೆಂಬರ್ 30 ರಂದು ವರ್ಚುವಲ್ ಇವೆಂಟ್ ನಡೆಯಲಿದೆ
ವರ್ಚುವಲ್ ಇವೆಂಟ್ ಮಾಧ್ಯಮದ ಮೂಲದ ಅವರಿಗೆ ಈ ಗೌರವ ನೀಡಲಾಗುತ್ತಿದ್ದು, ಡಿಸೆಂಬರ್ 30 ರಂದು ಈ ಸಮಾರಂಭ ನಡೆಯುತ್ತಿದೆ. ಲಾರೆನ್ಸ್ ಕೊಗ್, ಓಸ್ಲೋ ಮೇಯರ್, ಸೋನು ಅವರಿಗೆ ಈ ಗೌರವ ನೀಡುತ್ತಿದ್ದಾರೆ. ಈ ಫೆಸ್ಟಿವಲ್ ನ ನಿರ್ದೇಶಕರಾಗಿರುವ ನಸರುಲ್ಲಾ ಕುರೈಸಿ ಸೋನು ಸೂದ್ ಮಾಡಿರುವ ಕಾರ್ಯವನ್ನು ಕೊಂಡಾಡಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಸೋನು ಸೂದ್ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಜನರ ಸೇವೆ ಮಾಡಿ ಮಾನವತೆಯನ್ನು ಮೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಇತರರಿಗೆ ಪ್ರೇರಣೆ ನೀಡುವ ಅವರ ಈ ಕಾರ್ಯವನ್ನು ನೋಡಿ ಸಮಿತಿ ಅವರಿಗೆ ಈ ಗೌರವ ನೀಡಲು ತೀರ್ಮಾನಿಸಿದೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- ಎಲೆಕ್ಷನ್ ಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಿ ಎಂದ ಬಳಕೆದಾರ, Sonu Sood ಉತ್ತರ ಕೇಳಿ ಫಿದಾ ಆದ ಅಭಿಮಾನಿಗಳು


ಸೋನು ಅಭಿನಯದ 'ದಬಂಗ್' ಚಿತ್ರದ ಪ್ರಿಮಿಯರ್ ಕೂಡ ಇದೇ ಫೆಸ್ಟಿವಲ್ ನಲ್ಲಿ ನಡೆದಿತ್ತು.
ಇಲ್ಲಿ ವಿಶೇಷ ಸಂಗತಿ ಎಂದರೆ, ಸೋನು ಸೂದ್ (Sonu Sood) ಅಭಿನಯದ 'ದಬಂಗ್' ಚಿತ್ರದ ಪ್ರಿಮಿಯರ್ ಕೂಡ ಈ ಚಲನಚಿತ್ರೋತ್ಸವದಲ್ಲಿ ಮಾಡಲಾಗಿತ್ತು.  ಈ ವೇಳೆ ಸಲ್ಮಾನ್ ಖಾನ್ ಕೂಡ ಅಲ್ಲಿ ಉಪಸ್ಥಿತರಿದ್ದರು. ಈ ಚಿತ್ರದಲ್ಲಿ ಸೋನು ಋಣಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಚಿತ್ರದಲ್ಲಿನ ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಏತನ್ಮಧ್ಯೆ ಇದೇ ಚಿತ್ರೋತ್ಸವದ ಸಂದರ್ಭದಲ್ಲಿ ಸೋನು ಸೂದ್ ಅವರಿಗೆ ಈ ಗೌರವ ಸಿಗುತ್ತಿರುವುದು ನಿಜಕ್ಕೂ ಸೋನು ಪಾಲಿಗೆ ಹೆಮ್ಮೆಯ ವಿಷಯವಾಗಿದೆ.


ಇದನ್ನು ಓದಿ-NEET-JEE ಪರೀಕ್ಷೆಗಳ ಮುಂದೂಡುವಿಕೆಯ ಕುರಿತು ಟ್ವೀಟ್ ಮಾಡಿದ Sonu Sood ಮಾಡಿದ ಮನವಿ ಏನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.