ಎಲೆಕ್ಷನ್ ಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಿ ಎಂದ ಬಳಕೆದಾರ, Sonu Sood ಉತ್ತರ ಕೇಳಿ ಫಿದಾ ಆದ ಅಭಿಮಾನಿಗಳು

ಸಾಮಾಜಿಕ ಮಾಧ್ಯಮಗಳಲ್ಲಿ ಸೋನು ಸೂದ್ ಅವರ ಒಂದು ಪೋಸ್ಟ್ ಭಾರಿ ವೈರಲ್ ಆಗುತ್ತಿದೆ.

Last Updated : Sep 17, 2020, 01:45 PM IST
  • ಬಿಹಾರ ಚುನಾವಣೆಗೆ BJP ಟಿಕೆಟ್ ಕೊಡಿಸುವಂತೆ ಸೋನು ಸೂದ್ ಗೆ ಬೇಡಿಕೆ ಇಟ್ಟ ಬಳಕೆದಾರ.
  • ಸೋನು ನೀಡಿರುವ ಉತ್ತರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ.
  • ಈ ಮೊದಲೂ ಕೂಡ ಆಪಲ್ ಐಫೋನ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದ ಓರ್ವ ಅಭಿಮಾನಿ.
ಎಲೆಕ್ಷನ್ ಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಿ ಎಂದ ಬಳಕೆದಾರ, Sonu Sood ಉತ್ತರ ಕೇಳಿ ಫಿದಾ ಆದ ಅಭಿಮಾನಿಗಳು title=

ನವದೆಹಲಿ: ಲಾಕ್ ಡೌನ್ (Lockdown)  ಅವಧಿಯಲ್ಲಿ ಖ್ಯಾತ ನಟ ಸೋನು ಸೂದ್ (Sonu Sood) ಯಾವ ರೀತಿ ಕಾರ್ಮಿಕರನ್ನು ಅವರವರ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರೋ ಅದು ನಿಜಕ್ಕೂ ಮೆಚ್ಚುವಂತದ್ದೆ. ಆದರೆ, ಸೋನು ಇದುವರೆಗೂ ಕೂಡ ಜನರಿಗೆ ಸಹಾಯ ಹಸ್ತ ಚಾಚುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಮಾಧ್ಯಮದಲ್ಲಿ ಸೋನು ಸೂದ್ ಮಾಡಿರುವ ಪೋಸ್ಟ್ ವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಟ್ವೀಟ್ ವೊಂದರಲ್ಲಿ ಬಿಹಾರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸೋನು ಅವರಿಗೆ ಅಭಿಮಾನಿಯೊಬ್ಬ BJP ಟಿಕೆಟ್ ಕೊಡಿಸಿ ಎಂಬ ಬೇಡಿಕೆಯನ್ನಿಟ್ಟಿದ್ದಾನೆ. ಇದಕ್ಕೆ ಸೋನು ಉತ್ತರಿಸಿದ ಪರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಳಕೆದಾರರೊಬ್ಬರು ಸೋನು ಅವರಿಗೆ ಟ್ವೀಟ್ ಮಾಡಿ, 'ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಜನರ ಸೇವೆ ಸಲ್ಲಿಸಬೇಕು. ಕೇವಲ ಸೋನು ಸರ್, ನನಗೆ #ಬಿಜೆಪಿಯಿಂದ # ಟಿಕೆಟ್ ಕೊಡಿಸಿ' ಎಂದು ಬರೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಸೋನು ಮತ್ತೊಮ್ಮೆ ತನ್ನ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಇದಕ್ಕೆ ಉತ್ತರಿಸಿರುವ ಸೋನು, 'ಬಸ್, ಟ್ರೈನ್ ಹಾಗೂ ಪ್ಲೇನ್ ಟಿಕೆಟ್ ಗಳನ್ನು ಹೊರತುಪಡಿಸಿ ಇನ್ನಾವುದೇ ಟಿಕೆಟ್ ಹೇಗೆ ಕೊಡಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ ನನ್ನ ಸಹೋದರ' ಎಂದಿದ್ದಾರೆ. ಸೋನು ನೀಡಿರುವ ಈ ಪ್ರತಿಕ್ರಿಯೆ ಇದೀಗ ಅಭಿಮಾನಿಗಳ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅವರು ಮಾಡಿರುವ ಟ್ವೀಟ್ ಅನ್ನು ಲೈಕ್ ಮಾಡುತ್ತಿರುವ ಅಭಿಮಾನಿಗಳು ಅದಕ್ಕೆ ಮರು ಟ್ವೀಟ್ ಕೂಡ ಮಾಡುತ್ತಿದ್ದಾರೆ.

Also Read- ಪ್ರವಾಸಿ ಕಾರ್ಮಿಕರಿಗಾಗಿ ನೌಕರಿಯ ಸಿದ್ಧತೆ ನಡೆಸಲು ಮುಂದಾದ Sonu Sood

ಈ ಹಿಂದೆಯೂ ಕೂಡ ಬಳಕೆದಾರರೊಬ್ಬರು ಸೋನುಗೆ 'ಸರ್, ನನಗೆ ಆಪಲ್ ಐಫೋನ್ ಬೇಕು, ಇದಕ್ಕಾಗಿ ನಾನು 20 ಬಾರಿ ಟ್ವೀಟ್ ಮಾಡಿದ್ದೇನೆ' ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಉತ್ತರಿಸಿದ್ದ ಸೋನು ಸೂದ್, 'ನನಗೂ ಫೋನ್ ಬೇಕು, ಇದಕ್ಕಾಗಿ ನಾನು ನಿಮಗೆ 21 ಬಾರಿ ಟ್ವೀಟ್ ಮಾಡಬಹುದು' ಎಂದು ಹೇಳಿದ್ದರು.

Trending News