Meena Sagar life Story: 90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳಲ್ಲಿ ಮೀನಾ ಕೂಡ ಒಬ್ಬರು. ಕಾಲಿವುಡ್, ಮಾಲಿವುಡ್, ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನ ಟಾಪ್ ಹೀರೋಗಳ ಎದುರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೃಶ್ಯ ಚಿತ್ರದ ಮೂಲಕ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಅವರು ಮತ್ತೊಮ್ಮೆ ತಮ್ಮ ಅಭಿನಯದಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ.. 


COMMERCIAL BREAK
SCROLL TO CONTINUE READING

ಆದರೆ ಈ ನಟಿ ತಮ್ಮ ವೃತ್ತಿ ಜೀವನದಲ್ಲಿ ಒಮ್ಮೆಯೂ ಬೋಲ್ಡ್ ದೃಶ್ಯಗಳಲ್ಲಿ ನಟಿಸಿಲ್ಲ. ಈ ವಿಚಾರದಲ್ಲಿ ಅವರು ನಿರ್ದೇಶಕ ಮತ್ತು ನಿರ್ಮಾಪಕರಿಗೆ ಕಂಡೀಷನ್‌ ಹಾಕುತ್ತಿದ್ದರಂತೆ.. ನಟಿ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. 


ಇದನ್ನೂ ಓದಿ-Bigg Boss Kannada 10 Winner: ಈ ಬಾರಿ ಅಸಮರ್ಥರೇ ವಿನ್ನರ್‌.. ರನ್ನರ್‌ ಕೂಡ ಇವರೇ.! ಫಿನಾಲೆಗೂ ಮುನ್ನ ಲೀಕ್‌ ಆಯ್ತಾ ಹೆಸರು?


ಬಾಲ ಕಲಾವಿದೆಯಾಗಿ ಸಿನಿರಂಗಕ್ಕೆ ಪ್ರವೇಶ: 
ಮೀನಾ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು 1982 ರ ತಮಿಳು ಚಲನಚಿತ್ರ ʼNenjangalʼ ನಲ್ಲಿ ನಟಿಸಿದರು. ಚಿಕ್ಕವಯಸ್ಸಿನಲ್ಲೇ ತನ್ನ ಅತ್ಯುತ್ತಮ ನಟನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಇವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳಲ್ಲಿ ನಟಿಸಿದ್ದಾರೆ.


ನಟಿ ಮೀನಾ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೀನಾ ನಾಚಿಕೆ ಮತ್ತು ಭಯದ ಪಾತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಈಕೆ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಗ್ಲಾಮರ್ ಪಾತ್ರಗಳಿಂದ ದೂರ ಉಳಿದಿರುವ ಬಗ್ಗೆ ಉದ್ಯಮದಲ್ಲಿ ನಿರಂತರ ಚರ್ಚೆ ನಡೆಯುತ್ತಿತ್ತು. 


ಇದನ್ನೂ ಓದಿ-ಅಜಯ್ ರಾವ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಘೋಷಣೆ


ವಿವಿಧ ವರದಿಗಳ ಪ್ರಕಾರ, ಪ್ರಭುದೇವ ಮೀನಾಗೆ ಬೋಲ್ಡ್ ಮತ್ತು ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲು ಸಲಹೆ ನೀಡಿದ್ದಾರಂತೆ... ಆದರೆ ಸಂಕೋಚ ಮತ್ತು ಭಯದಿಂದ ಅಂತಹ ಪಾತ್ರಗಳನ್ನು ಮಾಡಲು ಹಿಂದೇಟು ಹಾಕಿದ್ದಾರಂತೆ ಈ ನಟಿ... ಇತ್ತೀಚಿನ ಸಂದರ್ಶನವೊಂದರಲ್ಲಿ, ಸ್ವಿಮ್‌ ಸೂಟ್‌ ಧರಿಸಿ ಮೇಕಪ್ ರೂಮ್‌ನಿಂದ ಹೊರಬರಲು ಧೈರ್ಯ ಮಾಡಲಾಗದ ಘಟನೆಯನ್ನು ಸಹ ಅವರು ಹಂಚಿಕೊಂಡಿದ್ದಾರೆ.. 


ಮೀನಾ ಟಾಲಿವುಡ್‌ನಲ್ಲಿ ಟಾಪ್ ನಟರಾದ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಮತ್ತು ನಾಗಾರ್ಜುನ ಅವರೊಂದಿಗೆ ನಟಿಸಿದ್ದಾರೆ.. ಆದರೆ ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿದ್ದರು. ಇತ್ತೀಚೆಗೆ ಅವರ ಪತಿ ವಿದ್ಯಾಸಾಗರ್ ಆರೋಗ್ಯ ಸಮಸ್ಯೆಗಳಿಂದಾಗಿ ನಿಧನರಾದರು. ಸದ್ಯ ನಟಿ ಮೀನಾಗೆ ಒಬ್ಬ ಮಗಳಿದ್ದಾಳೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.