ಫೇಮಸ್ ಡೈರೆಕ್ಟರ್ ಜೊತೆ ಸಮಂತಾ ಸೆಕೆಂಡ್ ಮ್ಯಾರೇಜ್! ನಾಗಚೈತನ್ಯ ಮದುವೆ ಬೆನ್ನಲ್ಲೇ ಕ್ಲಾರಿಟಿ ಕೊಟ್ಟ ನಟಿ!!
Samantha Second Marriage: ನಟಿ ಸಮಂತಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ತನ್ನ ಸೌಂದರ್ಯ ಮತ್ತು ನಟನೆಯಿಂದ ಟಾಲಿವುಡ್ ಇಂಡಸ್ಟ್ರಿಯನ್ನೇ ಆಳುತ್ತಿರುವ ಈ ಬ್ಯೂಟಿ ಬಾಳಲ್ಲಿ ನಡೆದಿದ್ದೇ ದುರಂತ.. ಇದೀಗ ನಟಿ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಮಾತೊಂದು ಕೇಳಿಬರುತ್ತಿದೆ..
Actress Samantha: ಮೊದಲ ಸಿನಿಮಾದಲ್ಲೇ ಎಲ್ಲರ ಮನಗೆದ್ದ ನಟಿ ಸಮಂತಾ ಇಡೀ ಟಾಲಿವುಡ್ ಇಂಡಸ್ಟ್ರಿಯಲ್ಲಿ ಟಾಪ್ ನಟಿಯಾಗಿ ಬೆಳೆದಿದ್ದಾರೆ.. ಈಮಾಯ ಚೇಸಾವೆ ಸಿನಿಮಾದಿಂದ ಸ್ಯಾಮ್ ಜನಪ್ರಿಯತೆ ಗಳಿಸಿದರು.. ಸಮಂತಾ ಕರಿಯರ್‌ನಲ್ಲಿ ಉತ್ತುಂಗದಲ್ಲಿರುವಾಗಲೇ ಟಾಲಿವುಡ್ ಯಂಗ್ ಹೀರೋ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.. ಈ ಜೋಡಿಯನ್ನು ನೋಡಿ ಟಾಲಿವುಡ್ ಸ್ಟಾರ್ ಕಪಲ್ ಎನ್ನುತ್ತಿದ್ದವರೆಲ್ಲ ಸಿನಿ ಅಭಿಮಾನಿಗಳಿಗೆ ಬೆಚ್ಚಿಬೀಳುವಂತೆ ಮಾಡಿ ವಿಚ್ಛೇದನ ಘೋಷಿಸಿದ್ದರು..
ವಿಚ್ಛೇದನದ ಕೆಲ ದಿನಗಳ ನಂತರ ನಾಗ ಚೈತನ್ಯ ಸೋಭಿತಾ ಧೂಳಿಪಾಲ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಗಾಸಿಪ್ ಗಳು ಕೇಳಿ ಬಂದಿದ್ದವು. ಇತ್ತೀಚೆಗಷ್ಟೇ ಇವರಿಬ್ಬರೂ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡು ಜೊತೆಗೆ ಡಿಸೆಂಬರ್ 4 ರಂದು ಮದುವೆಯಾದರು. ನಾಗ ಚೈತನ್ಯಗೆ ವಿಚ್ಛೇದನ ನೀಡಿದ ಸಮಂತಾ ಅಂದಿನಿಂದ ಒಂಟಿ ಜೀವನ ನಡೆಸುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು ಸಿನಿಮಾಗಳಿಂದಲೂ ಕೊಂಚ ಬ್ರೇಕ್ ತೆಗೆದುಕೊಂಡು ಇತ್ತೀಚೆಗೆ ಕಂಬ್ಯಾಕ್ ಮಾಡಿದ್ದಾರೆ..
ಸಮಂತಾ ಅವರಿಗೆ ಎರಡನೆ ಮದುವೆಯಾಗುತ್ತೀರಾ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದರೂ, ತನಗೆ ಹಾಗೆ ಮಾಡುವ ಉದ್ದೇಶವಿಲ್ಲ.. ಒಂಟಿಯಾಗಿ ಬದುಕುತ್ತೇನೆ ಎಂದು ಕೆಲವು ಬಾರಿ ಹೇಳಿದ್ದಾರೆ ಸ್ಯಾಮ್.. ಇತ್ತೀಚೆಗೆ ಅರ್ಜುನ್ ಕಪೂರ್ ಮಲೈಕಾ ಅರೋರಾ ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಸಮಂತಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.. ಆದರೆ ಅವೆಲ್ಲವೂ ಬರೀ ವದಂತಿಗಳಾಗಿವೆ..
ಇತ್ತೀಚೆಗೆ ಸಮಂತಾಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಟಾಡೆಲ್ ನಿರ್ದೇಶಕ ರಾಜ್ ನಿಡುಮೂರು ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಹಬ್ಬಿದೆ. ಹೌದು ಸಿಟಾಡೆಲ್ ಚಿತ್ರ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಈ ಸಿರೀಸ್ ಶೂಟಿಂಗ್ ವೇಳೆ ಇವರಿಬ್ಬರು ಪ್ರೀತಿಸುತ್ತಿದ್ದರು, ಶೀಘ್ರದಲ್ಲೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.