South Actress samantha: ಕೆರಿಯರ್ ವಿಚಾರದಲ್ಲಿ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮತ್ತೆ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡಲು ಶುರು ಮಾಡಿದ ಸ್ಯಾಮ್ ಈಗ ಫಾರ್ಮ್ ಗೆ ಮರಳಿದ್ದಾರೆ. ಆದರೆ ಇತ್ತೀಚೆಗೆ, ಇವುಗಳ ಜೊತೆಗೆ, ಅವರ ಮಾಜಿ ಪತಿ ನಾಗ ಚೈತನ್ಯ ಅವರ ಎರಡನೇ ಮದುವೆಯ ಬಗ್ಗೆ ಅನೇಕ ಕಾಮೆಂಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಅವರ ಹೆಸರು ಪ್ರಸ್ತಾಪವಾಗುತ್ತಿದೆ. ಈ ವೇಳೆ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ನಟಿ ತೆಲುಗು ಚಿತ್ರಗಳಿಂದ ದೂರ ಉಳಿಯಲು ಸಮಂತಾ ನಿರ್ಧರಿಸಿದ್ದಾರೆ ಎಂಬ ಗಾಸಿಪ್ ಗಳು ವೈರಲ್ ಆಗುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ನಟಿ ಸೋನಲ್‌ ಮೊಂಥೆರೋ ಅಣ್ಣ ಕೂಡ ಫೇಮಸ್‌ ನಟ! ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸ್ಟಾರ್‌... ಯಾರೆಂದು ಗೆಸ್‌ ಮಾಡಿ ನೋಡೋಣ


 ಪ್ರಸ್ತುತ, ಅವರು ತೆಲುಗು ಚಿತ್ರ "ಮಾ ಇಂತಿ ಬಂಗಾರಮ್" ನಿರ್ಮಾಣದಲ್ಲಿ ಮಾಡುತ್ತಿದ್ದಾರೆ. ಆದರೆ ಈಗ ಈ ಸಿನಿಮಾ ಬಿಟ್ಟರೆ ತೆಲುಗಿನಲ್ಲಿ ಮುಂದೆ ಸಿನಿಮಾ ಮಾಡಬಾರದು ಎಂದು ನಿರ್ಧರಿಸಿದ್ದಾರೆ ಎಂಬ ಶಾಕಿಂಗ್ ಟಾಕ್ ಕೇಳಿ ಬಂದಿದೆ. ಅಲ್ಲದೇ ಇದಕ್ಕೆಲ್ಲ ತನ್ನ ವಿರುದ್ಧ ತೋರುತ್ತಿರುವ ನೆಗೆಟಿವಿಟಿಯೇ ಕಾರಣ ಎಂದು ಗುಸುಗುಸು ಶುರುವಾಗಿದ್ದು, ಇದರಿಂದ ನೋವಾಗಿರುವ ಸ್ಯಾಮ್ ತೆಲುಗು ಸಿನಿಮಾ ಮಾಡುವುದನ್ನು ನಿಲ್ಲಿಸಲಿದ್ದಾರಂತೆ.. ಆದರೆ ಮತ್ತೊಂದೆಡೆ ಆಕೆ ಮಾಡಲಿಲ್ಲವೆಂದಲ್ಲ, ತೆಲುಗಿನಿಂದ ಆಕೆಗೆ ಆಫರ್‌ಗಳು ಬಂದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಆದ್ರೆ, ಸಮಂತಾಗೆ ಸ್ಟಾರ್ ಸ್ಟೇಟಸ್ ಕೊಟ್ಟಿದ್ದು ತೆಲುಗು ಸಿನಿಮಾಗಳೇ ಅಂತಲೇ ಹೇಳಬೇಕು, ಇಲ್ಲಿಂದ ಸಮಂತಾ ಸ್ಟಾರ್ ಆಗಿ ಬೆಳೆದು ಪ್ಯಾನ್ ಇಂಡಿಯಾಕ್ಕೂ ಹೋಗಿದ್ದಾರೆ. ಹೀಗಿರುವಾಗ ಅಲ್ಲಿಂದಲೇ ಸಮಂತಾ ಹೊರ ಹೋಗುತ್ತಿದ್ದಾರೆ ಎನ್ನುವುದೇ ಅಚ್ಚರಿಯ ಸಂಗತಿ.


ಇದನ್ನೂ ಓದಿ-ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!!


ಈ ವದಂತಿಗಳಿಗೆ ನಟಿ ಪ್ರತಿಕ್ರಿಯೆ ನೀಡುತ್ತಾರಾ ನೀಡುತ್ತಾರಾ ಎಂದು ಕಾದು ನೋಡಬೇಕಿದೆ... ಈಗ ಸಮಂತಾ ಅವರ ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸರಣಿ "ಸಿಟಾಡೆಲ್ ಹನಿ ಬನ್ನಿ" ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬರುತ್ತಿದೆ.. ಈ ಸರಣಿಯಲ್ಲಿ ಬಾಲಿವುಡ್ ನಟ ವರುಣ್ ಧವನ್ ನಟಿಸಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ