ನವದೆಹಲಿ: ಮುಂಬರುವ ತೆಲುಗು ಚಿತ್ರ ಆಚಾರ್ಯದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ನಟಿಸಬೇಕಾಗಿದ್ದ ತ್ರಿಶಾ ಈಗ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಈಗ ಅವರು ಈ ಯೋಜನೆಯಿಂದ ಹೊರ ನಡೆದಿರುವುದನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಖಚಿತಪಡಿಸಿದ್ದಾರೆ. ಶುಕ್ರವಾರ ಮಾಡಿದ ಟ್ವೀಟ್‌ನಲ್ಲಿ, 36 ವರ್ಷದ ನಟಿ ತ್ರಿಶಾ, ಚಿತ್ರ ತಯಾರಕರೊಂದಿಗಿನ ಸೃಜನಶೀಲ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ತಾನು ಯೋಜನೆಯನ್ನು ತ್ಯಜಿಸಿದ್ದೇನೆ ಎಂದು ಘೋಷಿಸಿದರು.



ತನ್ನ ಟ್ವೀಟ್‌ನಲ್ಲಿ, ತ್ರಿಶಾ ತನ್ನೊಂದಿಗೆ ಈ ಹಿಂದೆ ಚರ್ಚಿಸಿದ್ದಕ್ಕಿಂತ ಕೆಲವು ಅಂಶಗಳು "ವಿಭಿನ್ನ" ಎಂದು ತಿಳಿದುಬಂದಿದೆ ಎಂದು ಹೇಳಿದರು. "ಕೆಲವೊಮ್ಮೆ ವಿಷಯಗಳು ಮೊದಲಿಗೆ ಹೇಳಿದ್ದ ಮತ್ತು ಚರ್ಚಿಸಿದ್ದಕ್ಕಿಂತ ಭಿನ್ನವಾಗಿರುತ್ತವೆ. ಸೃಜನಶೀಲ ಭಿನ್ನತೆಗಳಿಂದಾಗಿ, ಚಿರಂಜೀವಿ ಸರ್ ಅವರ ಚಿತ್ರದ ಭಾಗವಾಗದಿರಲು ನಾನು ನಿರ್ಧರಿಸಿದ್ದೇನೆ" ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.


ಈ ಹಿಂದೆ ತ್ರಿಶಾ ಚಿರಂಜೀವಿ ಜೊತೆ 2006 ರ ಚಲನಚಿತ್ರ ಸ್ಟಾಲಿನ್ ನಲ್ಲಿ ನಟಿಸಿದ್ದರು.