ʼವಿವಾಹಿತ ವ್ಯಕ್ತಿಯೊಂದಿಗೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ತಪ್ಪು ಮಾಡಿದೆ..ʼ ಸ್ಟಾರ್ ಹೀರೋಯಿನ್ ಶಾಕಿಂಗ್ ಕಾಮೆಂಟ್ಸ್!
Star Actress Sensational Comment: ಸ್ಟಾರ್ ಹೀರೋಯಿನ್ ತನ್ನ ಅಫೇರ್ ಬಗ್ಗೆ ಬಹಿರಂಗಪಡಿಸಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ, ತಮಿಳಿನ ಸ್ಟಾರ್ ಹೀರೋಯಿನ್ ಆಂಡ್ರಿಯಾ ಜೆರೆಮಿಯಾ.
Andrea Jeremiah: ಮೊದಲು ತಮಿಳು ಗಾಯಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಆಂಡ್ರಿಯಾ ಜೆರೆಮಿಯಾ ನಂತರ ಗೀತರಚನೆಕಾರರಾದರು. ಅದರ ನಂತರ ನಾಯಕಿ ಅವತಾರವನ್ನು ಕೈಗೆತ್ತಿಕೊಂಡರು.. ಸ್ಟಾರ್ ಹೀರೋಗಳ ಎದುರು ನಟಿಸಿ ಕ್ರೇಜ್ ಹೆಚ್ಚಿಸಿಕೊಂಡರು.
ಆಂಡ್ರಿಯಾ ಹೆಸರು ಹೇಳಿದಾಗ ಮೊದಲು ನೆನಪಾಗುವುದು ಆಕೆಯ ಸೌಂದರ್ಯ. ತೆರೆಯ ಮೇಲೆ ಆಂಡ್ರಿಯಾ ಸಿಜ್ಲಿಂಗ್ ಮತ್ತು ರೋಮ್ಯಾನ್ಸ್ ನೋಡೋಕೆ ಅಂತಾನೇ ಪಡ್ಡೆ ಹೈಕ್ಳು ಕಾಯ್ತಾ ಇರ್ತಾರೆ.. ಇದೇ ವೇಳೆ ನೇರವಾಗಿ ಸೆಕ್ಸ್ ಬಗ್ಗೆ ಮಾತನಾಡಿ ನಟಿ ಸಂಚಲನ ಮೂಡಿಸಿದ್ದಾಳೆ.
ಇದನ್ನೂ ಓದಿ-ʻಭೈರಾದೇವಿʼ ಪ್ರಚಾರಕ್ಕೆ ಚಾಲನೆ..ಆಟೋ ಓಡಿಸಿ ಬೆಂಗಳೂರಿನಲ್ಲಿ ರಾಧಿಕಾ ಕುಮಾರಸ್ವಾಮಿ ಫುಲ್ ರೌಂಡ್ಸ್
ಇತ್ತೀಚಿನ ಸಂದರ್ಶನವೊಂದರಲ್ಲಿ, ಆಂಡ್ರಿಯಾ ಈ ಹಿಂದೆ ಒಬ್ಬ ವ್ಯಕ್ತಿಯಿಂದ ಉಂಟಾದ ತೊಂದರೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. ನಾನು ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದೆ. ಆತ ನನಗೆ ಸಾಕಷ್ಟು ದೈಹಿಕ ಹಿಂಸೆ ನೀಡಿದ್ದಾನೆ.. ಆತನ ಚಿತ್ರಹಿಂಸೆ ತಾಳಲಾರದೆ ಖಿನ್ನತೆಗೆ ಒಳಗಾಗಿದ್ದೆ.. ಈಗ ಅವನಿಂದ ದೂರ ಉಳಿದಿದ್ದೇನೆ ಎಂದು ಆಂಡ್ರಿಯಾ ಹೇಳಿದ್ದಾರೆ.
ಆಂಡ್ರಿಯಾಗೆ ಗಾಯಕ ಅನಿರುದ್ಧ್ ಜೊತೆ ಅಫೇರ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅವರಿಬ್ಬರು ತುಂಬಾ ಕ್ಲೋಸ್ ಆಗಿರುವ ಫೋಟೋಗಳು ಆಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ತಾನು ಎಂದಿಗೂ ಮದುವೆಯಾಗಲು ಬಯಸುವುದಿಲ್ಲ ಎಂದು ನಟಿ ಕ್ಲಾರಿಟಿ ನೀಡಿದ್ದರು. ನಾನು 20-25 ನೇ ವಯಸ್ಸಿನಲ್ಲಿ ಮದುವೆಯಾಗಲು ಬಯಸಿದ್ದೆ. ಆದರೆ ಆ ಸಮಯದಲ್ಲಿ ಅದು ಸಾಧ್ಯವಾಗಲಿಲ್ಲ. ಈಗ ಮದುವೆಯಾದರೆ ಖುಷಿಯಾಗುವುದಿಲ್ಲ, ಮದುವೆ ಆಗದಿದ್ದರೂ ತುಂಬಾ ಖುಷಿಯಾಗುತ್ತೇನೆ ಎನ್ನುತ್ತಾರೆ ಆಂಡ್ರಿಯಾ.. 40 ನೇ ವಯಸ್ಸಿನಲ್ಲಿ, ಅವರು ಸರಣಿ ಚಿತ್ರಗಳೊಂದಿಗೆ ಎರಡನೇ ಇನ್ನಿಂಗ್ಸ್‌ಗೆ ಕಾಲಿಡುತ್ತಿದ್ದಾರೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.