Ramya Krishna: ಭಾರತೀಯ ಚಿತ್ರರಂಗದಲ್ಲಿ ಅನೇಕ ನಟಿಯರಿದ್ದಾರೆ. ಅವರ ಪ್ರೇಮ ಜೀವನವು ಸಾಕಷ್ಟು ವಿವಾದಗಳನ್ನು ಹೊಂದಿತ್ತು. ವಿವಾಹಿತ ನಿರ್ದೇಶಕರನ್ನು ಪ್ರೀತಿಸುತ್ತಿದ್ದರೆಂಬ ವದಂತಿಗೆ ಬಲಿಯಾಗಿದ್ದ ಖ್ಯಾತ ನಟಿಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಇಬ್ಬರ ನಡುವೆ ಆತ್ಮೀಯತೆ ಬೆಳೆದು ನಟಿ ಮದುವೆಯಾಗದೆ ಗರ್ಭಿಣಿಯಾದರು ಎನ್ನಲಾಗುತ್ತದೆ.
ಈ ನಟಿ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅವರ ಬ್ಲಾಕ್ ಬಸ್ಟರ್ ಚಿತ್ರದಿಂದ ಅವರು ಹೆಚ್ಚು ಮನ್ನಣೆ ಪಡೆದರು. ಈ ನಟಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ಉದ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 11 ನಿರೂಪಣೆಗೆ ಕಿಚ್ಚ ಸುದೀಪ್ ಈ ಬಾರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ!?
ಬಾಹುಬಲಿಯಲ್ಲಿ ಶಿವಗಾಮಿ ಪಾತ್ರದ ಮೂಲಕ ಹಿಟ್ ಪಡೆದ ರಮ್ಯಾ ಕೃಷ್ಣನ್ ಬಗ್ಗೆ ಇಂದು ಮಾತನಾಡುತ್ತಿದ್ದೇವೆ. ರಮ್ಯಾ ಕೃಷ್ಣನ್ ಅವರ ಜೀವನದಲ್ಲಿ ವಿವಾಹಿತ ನಿರ್ದೇಶಕರನ್ನು ಪ್ರೀತಿಸಿದ್ದರು ಎನ್ನಲಾಗುತ್ತದೆ. ಬಳಿಕ ಈ ನಟಿ ಮದವೆಗೂ ಮುನ್ನವೇ ಗರ್ಭಿಣಿ ಆದರು. ನಂತರ ನಿರ್ದೇಶಕರಿಂದ ಗರ್ಭಪಾತಕ್ಕಾಗಿ 75 ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.
ನಿರ್ದೇಶಕರಾದ ಕೆ ಎಸ್ ರವಿಕುಮಾರ್ ಮತ್ತು ರಮ್ಯಾ ಕೃಷ್ಣನ್ 1999 ರಲ್ಲಿ 'ಪಡೆಯಪ್ಪ' ಮತ್ತು 'ಪಟ್ಟಾಲಿ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ರಮ್ಯಾ ಅವರ ಈ ಎರಡೂ ಚಿತ್ರಗಳು ಹಿಟ್ ಆಗಿದ್ದು ಅವರಿಗೆ ಮನ್ನಣೆ ಸಿಕ್ಕಿತು. ಇದಾದ ನಂತರ 2002ರಲ್ಲಿ ತೆರೆಕಂಡ ‘ಪಂಚಂತ್ರ’ದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಮೂರು ವರ್ಷಗಳಲ್ಲಿ, ಇಬ್ಬರ ನಡುವೆ ಬಹಳ ನಿಕಟ ಸಂಬಂಧವು ಬೆಳೆದಿತ್ತು ಎನ್ನಲಾಗುತ್ತೆ. ಆದರೆ, ರವಿಕುಮಾರ್ ಗೆ ಅದಾಗಲೇ ಮದುವೆಯಾಗಿತ್ತು.
ಇದನ್ನೂ ಓದಿ: ಕೋಟಿ ಕೋಟಿ ಆಸ್ತಿ ಇದ್ರು ಮಕ್ಕಳನ್ನು ಈ ಊರಿನ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ ಕನ್ನಡದ ಡಿವೈನ್ ಸ್ಟಾರ್?
ರಮ್ಯಾ ಕೃಷ್ಣನ್‌ರನ್ನು ರವಿಕುಮಾರ್ ಪ್ರೀತಿಸುತ್ತಿದ್ದರು ಎನ್ನಲಾಗುತ್ತದೆ. ರಮ್ಯಾ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಕೆ.ಎಸ್.ರವಿಕುಮಾರ್ ಪತ್ನಿ ರಮ್ಯಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ. ಈ ವೇಳೆ ರಮ್ಯಾ ಹಾಗೂ ಕೆ.ಎಸ್.ರವಿಕುಮಾರ್ ನಡುವಿನ ಸಂಬಂಧದ ಜೊತೆಗೆ ನಟಿ ಪ್ರೆಗ್ನೆನ್ಸಿಯ ವದಂತಿಯೂ ಹರಡಲು ಆರಂಭಿಸಿತು. ಇದು ನಿರ್ದೇಶಕರ ಕುಟುಂಬದ ಮೇಲೆ ನೇರ ಪರಿಣಾಮ ಬೀರಿತ್ತು ಎನ್ನಲಾಗುತ್ತದೆ. ರವಿಕುಮಾರ್ ಮತ್ತು ಅವರ ಪತ್ನಿ ನಡುವಿನ ಸಂಬಂಧ ಹದಗೆಡುತ್ತಿದೆ ಎಂಬ ವರದಿಗಳು ಬಂದವು, ನಂತರ ನಿರ್ದೇಶಕರು ರಮ್ಯಾ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದರು.
ವರದಿಗಳ ಪ್ರಕಾರ, ಆ ಸಮಯದಲ್ಲಿ ರಮ್ಯಾ ಅವರು ರವಿಕುಮಾರ್ ಅವರಿಂದ ಗರ್ಭಪಾತಕ್ಕೆ 75 ಲಕ್ಷ ರೂ. ಬೇಡಿಕೆ ಇಟ್ಟರು ಎನ್ನಲಾಗುತ್ತದೆ. ರಮ್ಯಾ ಕೃಷ್ಣನ್ ಮತ್ತು ಕೆಎಸ್ ರವಿಕುಮಾರ್ ಇಬ್ಬರೂ ಮಗುವನ್ನು ಹೊಂದಲು ಸಿದ್ಧರಿರಲಿಲ್ಲ. ಇಡೀ ವಿಷಯ ಬೆಳೆಯುತ್ತಿರುವುದನ್ನು ನೋಡಿದ ಇಬ್ಬರೂ ತಮ್ಮ ಸಂಬಂಧ, ಗರ್ಭಧಾರಣೆ ಮತ್ತು ಗರ್ಭಪಾತದ ಸುದ್ದಿ ಕೇವಲ ವದಂತಿಗಳು ಮತ್ತು ಸುಳ್ಳು ಎಂದು ಹೇಳಿದರು. ಬಳಿಕ 2003 ರಲ್ಲಿ ರಮ್ಯಾ ಅವರು ಚಲನಚಿತ್ರ ನಿರ್ಮಾಪಕ ಕೃಷ್ಣ ವಂಶಿ ಅವರನ್ನು ವಿವಾಹವಾದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.