Special Birthday Teaser: ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಟೀಸರ್ ರಿಲೀಸ್
ಕೊರೊನಾ ಸಾಂಕ್ರಾಮಿಕದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಶಿವಣ್ಣ ನಿರ್ಧರಿಸಿದ್ದಾರೆ.
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್(Shivarajkumar) ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಸೋಮವಾರ 59ನೇ ವಸಂತಕ್ಕೆ ಕಾಲಿಡಲಿರುವ ಹ್ಯಾಟ್ರಿಕ್ ಹೀರೋ ಶಿವಣ್ಣನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಶಿವಣ್ಣ ನಿರ್ಧರಿಸಿದ್ದಾರೆ. ಕರುನಾಡ ಚಕ್ರವರ್ತಿಯ ಹುಟ್ಟುಕ್ಕೆ ಮತ್ತಷ್ಟು ಮೆರಗು ನೀಡಲು ಜುಲೈ 12ರಂದು ಭಜರಂಗಿ 2 ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಈಗಾಗಲೇ ವಿಶಿಷ್ಟವಾದ ಪೋಸ್ಟರ್ ಮತ್ತು ಪ್ರೋಮೊಗಳಿಂದ ಭಜರಂಗಿ 2(Bhajarangi 2) ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಶಿವಣ್ಣನಿಗೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾ(Cinema) ನಿರ್ದೇಶಿಸಿರುವ ಎ.ಹರ್ಷ ಭಜರಂಗಿ 2 ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ: Shagufta Ali : ಜೀವನ ನಡೆಸಲು ಕಾರು, ಚಿನ್ನಾಭರಣ ಮಾರಿದ ಪ್ರಖ್ಯಾತ ನಟಿ
ಭಜರಂಗಿ 2 ಚಿತ್ರದ ಟೀಸರ್ ಶಿವರಾಜಕುಮಾರ್ ಅವರ ಪಾತ್ರವನ್ನು ಅನಾವರಣಗೊಳಿಸಲಿದೆ. ಈ ಚಿತ್ರದಲ್ಲಿಯೂ ಶಿವಣ್ಣನ ಜೊತೆಯಾಗಿ ನಟಿ ಭಾವನಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ, ಸೌರವ್ ಲೋಕೇಶ್, ಶ್ರುತಿ ಸೇರಿದಂತೆ ಅನೇಕ ಸಹಕಲಾವಿದರ ಬಹುತಾರಾಗಣದಲ್ಲಿ ಸಿನಿಮಾ ಮೂಡಿಬರಲಿದೆ. ಅರ್ಜುನ್ ಜನ್ಯಾ(Arjun Janya) ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ 2 ಹಾಡುಗಳನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.
ಈಗಾಗಲೇ ಶಿವರಾಜಕುಮಾರ್(Shivarajkumar) ಮತ್ತು ಹರ್ಷ ತಮ್ಮ ಮುಂದಿನ ಸಿನಿಮಾ ‘ವೇದ’ ಎಂದು ಘೋಷಿಸಿದ್ದಾರೆ. ಇದು ಶಿವಣ್ಣ ಅವರ 125ನೇ ಸಿನಿಮಾವಾಗಲಿದ್ದು, ಗೀತಾ ಶಿವರಾಜಕುಮಾರ್ ನಿರ್ಮಾಪಕರಾಗಿದ್ದಾರೆ. ಮಾರ್ಚ್ ತಿಂಗಳಿನಲ್ಲಿಯೇ ಬಿಡುಗಡೆಯಾಗಿದ್ದ ಈ ಚಿತ್ರದ ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರವೇ ತಿಳಿಸಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ: Arindam Pramanik: ಕೆಲಸ ಸಿಗದೆ ಮೀನು ಮಾರಾಟ ಮಾಡುತ್ತಿರುವ ನಟ
ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷ ಸಂದೇಶ
ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಟ್ವೀಟರ್ ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಶಿವಣ್ಣ, ‘ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯ. ದೇವರ ದಯೆಯಿಂದ ಕೊರೊನಾ(Corona Virus) ಕಮ್ಮಿಯಾಗಿದೆ. ಆದರೆ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಜುಲೈ 12ರಂದು ನನ್ನ ಹುಟ್ಟುಹಬ್ಬವಿದೆ. ಆದರೆ ಕೆಲವು ಕಾರಣಗಳಿಂದ ನಾನು ಬೆಂಗಳೂರಿನಲ್ಲಿರುವುದಿಲ್ಲ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ’ ಎಂದು ಹೇಳಿದ್ದಾರೆ.
Corona Vaccine)ಯನ್ನು ತಪ್ಪದೆ ತೆಗೆದುಕೊಳ್ಳಿ. ಆದಷ್ಟು ಬೇಗ ಮತ್ತೆ ಎಲ್ಲರೂ ಸಿಗೋಣ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.