Sreeleela upcoming movies : ತೆಲುಗು ಚಿತ್ರರಂಗದಲ್ಲಿ ಸ್ಯಾಂಡಲ್‌ವುಡ್‌ ಸುಂದರಿ ಶ್ರೀಲೀಲಾ ಕ್ರೇಜ್ ಎಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಎರಡು ಕನ್ನಡ ಚಿತ್ರಗಳನ್ನು ಮಾಡಿ 2021 ರಲ್ಲಿ ʼಪೆಳ್ಳಿ ಸಂದಡಿʼ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಶ್ರೀಲೀಲಾ, ಮಾಸ್‌ ಮಹಾರಾಜ ರವಿತೇಜ ಜೊತೆಗಿನ ಧಮಾಕಾ ಚಿತ್ರದ ಮೂಲಕ ಮಿಂಚಿದರು.


COMMERCIAL BREAK
SCROLL TO CONTINUE READING

ಧಮಾಕಾ ಚಿತ್ರದಲ್ಲಿ ಶ್ರೀಲೀಲಾ ಎನರ್ಜಿಟಿಕ್‌ ಡಾನ್ಸ್‌ಗೆ ತೆಲುಗು ಪ್ರೇಕ್ಷಕರು ಮನಸೋತರು ಅಲ್ಲದೆ ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿತ್ತು. ಸದಾ ಹೊಸ ನಾಯಕಿಯ ಹುಡುಕಾಟದಲ್ಲಿರುವ ಸಿನಿ ಪ್ರೇಕ್ಷಕರಿಗೆ ಈ ಬಾರಿ ಶ್ರೀಲೀಲಾ ಸಿಕ್ಕಾಪಟ್ಟೆ ಇಷ್ಟವಾಗಿದ್ದಾರೆ. 


ಇದನ್ನೂ ಓದಿ: ʼಮಹೇಶ್-ರಾಜಮೌಳಿʼ ಇಂಡಿಯನ್‌ ಹೈ ಬಜೆಟ್‌ ಸಿನಿಮಾದಲ್ಲಿ ಮೂವರು ನಾಯಕಿಯರು..?


ಹೌದು.. ಸಧ್ಯ ಸೌತ್‌ ಸಿನಿರಂಗದಲ್ಲಿ ಶ್ರೀಲೀಲಾ ಕ್ರೇಜ್ ಹೆಚ್ಚುತ್ತಿದೆ. ಅವರ ಕಾಲ್ ಶೀಟ್‌ಗಳಿಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ಪೈಪೋಟಿ ನಡೆಸುತ್ತಿದ್ದಾರೆ. ಸದ್ಯ ಏಕಕಾಲಕ್ಕೆ ಏಳು ತೆಲುಗು ಚಿತ್ರಗಳಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಲ್‌ಶೀಟ್‌ ನೀಡಿದ್ದಾರೆ. ಈಗಾಗಲೇ ಆದಿಕೇಶವ ಮತ್ತು ಸ್ಕಂದ ಸಿನಿಮಾಗಳ ಶೂಟಿಂಗ್‌ ಮುಗಿದಿದ್ದು ಜೂನಿಯರ್, ಬಾಲಯ್ಯ ಬಾಬು ಅಭಿನಯದ ಭಗವಂತ್ ಕೇಸರಿ, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಗುಂಟೂರು ಕಾರಂ, ವಿಜಯ್ ದೇವರಕೊಂಡ ಅವರ 12ನೇ ಸಿನಿಮಾ (ವಿಡಿ12), ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಉಸ್ಸಾದ್ ಭಗತ್ ಸಿಂಗ್ ಸಿನಿಮಾ ಜೊತೆಗೆ ನಿತಿನ್ ಅವರ 32ನೇ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. 


ವಾಸ್ತವವಾಗಿ, ಈ ಪಟ್ಟಿಯಲ್ಲಿರುವ ನಿತಿನ್ ತಮ್ಮ 32 ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ಮೊದಲು ಅಂತಿಮಗೊಳಿಸಿದ್ದರು. ಆದ್ರೆ ರಶ್ಮಿಕಾ ಕೈ ಬಿಟ್ಟು ಚಿತ್ರತಂಡ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದೆ. ವೆಂಕಿ ಕುಡುಮುಲ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದನಾ ನಾಯಕಿ ಎಂದು ಭಾವಿಸಲಾಗಿದ್ದು, ಅವರ ಸ್ಥಾನಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದಾಗಿ ವರದಿಯಾಗಿದೆ. ಕಾರಣಗಳೇನೇ ಇರಲಿ.. ಇದು ರಶ್ಮಿಕಾ ಮಂದಣ್ಣ ಅವರಿಗೆ ಒಂದು ರೀತಿಯ ಮುಜುಗರದ ಸಂಗತಿ ಅಂದ್ರೆ ತಪ್ಪಾಗಲಾರದು.. ಒಂದಾನೊಂದು ಕಾಲದಲ್ಲಿ ರಶ್ಮಿಕಾ ಕೂಡ ಪೂಜಾ ಹೆಗ್ಡೆ ಸ್ಥಾನವನ್ನು ಆಕ್ರಮಿಸಿ ತೆಲುಗು ಚಿತ್ರರಂಗವನ್ನು ಆಳಿದ್ದರು. ಇದೀಗ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.


ಇದನ್ನೂ ಓದಿ: ʼಯುವರಾಜ್ ಸಿಂಗ್‌ʼ ಕಪಿಲ್‌ ದೇವ್‌ ಸೇರಿದಂತೆ ಸಿನಿಮಾಗಳಲ್ಲಿ ನಟಿಸಿದ ಸ್ಟಾರ್‌ ಕ್ರಿಕೆಟಿಗರು..! ಲಿಸ್ಟ್‌ ಇಲ್ಲಿದೆ


ಗೀತ ಗೋವಿಂದಂ ಚಿತ್ರವು ಬ್ಲಾಕ್ಬಸ್ಟರ್ ಮ್ಯೂಸಿಕಲ್ ಹಿಟ್ ಆದ ನಂತರ ರಶ್ಮಿಕಾ ಹೆಸರು ಇಂಡಿಯನ್‌ ಸಿನಿಮಾ ಇಂಡ್ರಸ್ಟ್ರಿಯಲ್ಲಿ ಸದ್ದು ಮಾಡಿತ್ತು. ರಶ್ಮಿಕಾ ಪ್ರವೇಶದಿಂದ ಪೂಜಾ ಹೆಗಡೆ ಒಂದೊಂದಾಗಿ ಅವಕಾಶಗಳನ್ನು ಕಳೆದುಕೊಳ್ತಾ ಬಂದರು. ಇದೀಗ ಶ್ರೀಲೀಲಾ ರಶ್ಮಿಕಾ ಸ್ಥಾನವನ್ನು ಕ್ರಮೇಣವಾಗಿ ಆಕ್ರಮಿಸುತ್ತಿದ್ದಾರೆ.


ಸದ್ಯ ಪೂಜಾ ಹೆಗ್ಡೆ ಕೈಯಲ್ಲಿ ಒಂದೇ ಒಂದು ತೆಲುಗು ಚಿತ್ರವೂ ಇಲ್ಲ. ಇದು ಅವರ ವೃತ್ತಿಜೀವನಕ್ಕೆ ದೊಡ್ಡ ಮೈನಸ್ ಪಾಯಿಂಟ್. ಪೂಜಾ ಹೆಗ್ಡೆ ಅವರ ಸೋಲಿಗೆ ರಶ್ಮಿಕಾ ಬೆಳವಣಿಗೆ ಕಾರಣವಾಗಿತ್ತು. ಇದೀಗ ರಶ್ಮಿಕಾ ಮೇಲೆ ಶ್ರೀಲೀಲಾ ಪರಿಣಾಮ ಬೀರುತ್ತಿದ್ದು, ತೆಲುಗು ಸಿನಿಮಾಗಳಿಂದ ನ್ಯಾಷುನಲ್‌ ಕ್ರಷ್‌ ದೂರವಾಗ್ತಾರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.