ʼಮಹೇಶ್-ರಾಜಮೌಳಿʼ ಇಂಡಿಯನ್‌ ಹೈ ಬಜೆಟ್‌ ಸಿನಿಮಾದಲ್ಲಿ ಮೂವರು ನಾಯಕಿಯರು..?

Mahesh babu Rajamouli movie : ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್ ಬಾಬು ಮತ್ತು ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾ ದಿನಕ್ಕೊಂದು ಸುದ್ದಿ ಮಾಡುತ್ತಿದೆ. ಜಕ್ಕಣ್ಣನ ಈ ಪ್ಯಾನ್ ವರ್ಲ್ಡ್ ಚಿತ್ರದಲ್ಲಿ ಬಾಲಿವುಡ್ ನ ಮೂವರು ನಾಯಕಿಯರು ನಟಿಸಲಿದ್ದಾರೆ ಎಂದು ವರದಿಯಾಗಿದೆ.   

Written by - Krishna N K | Last Updated : Jul 14, 2023, 08:29 PM IST
  • ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾ ದಿನಕ್ಕೊಂದು ಸುದ್ದಿ ಮಾಡುತ್ತಿದೆ.
  • ಜಕ್ಕಣ್ಣನ ಈ ಪ್ಯಾನ್ ವರ್ಲ್ಡ್ ಚಿತ್ರದಲ್ಲಿ ಬಾಲಿವುಡ್ ನ ಮೂವರು ನಾಯಕಿಯರು ನಟಿಸಲಿದ್ದಾರೆ ಎಂದು ವರದಿಯಾಗಿದೆ.
  • ಸಧ್ಯ ರಾಜಮೌಳಿ ತಂಡ ನಾಯಕಿಯರನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ʼಮಹೇಶ್-ರಾಜಮೌಳಿʼ ಇಂಡಿಯನ್‌ ಹೈ ಬಜೆಟ್‌ ಸಿನಿಮಾದಲ್ಲಿ ಮೂವರು ನಾಯಕಿಯರು..? title=

Rajamouli upcoming movie : ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಸಿನಿಮಾವೊಂದು ತೆರೆ ಮೇಲೆ ಬರಲು ಸಿದ್ದವಾಗುತ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ 0 ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಸದ್ಯ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. 

ಇದು ಮುಗಿದ ನಂತರ ಪ್ರಿ-ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಈ ಸಿನಿಮಾ ಆರಂಭಕ್ಕೂ ಮುನ್ನ ತಮ್ಮ ಲುಕ್‌ಗಾಗಿ ಮಹೇಶ್ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿವೆ. ಇತ್ತೀಚೆಗಷ್ಟೇ ಈ ಸಿನಿಮಾದ ಬಗ್ಗೆ ಕುತೂಹಲಕಾರಿ ಸುದ್ದಿಯೊಂದು ಹರಿದಾಡುತ್ತಿದೆ. 

ಇದನ್ನೂ ಓದಿ: ʼಯುವರಾಜ್ ಸಿಂಗ್‌ʼ ಕಪಿಲ್‌ ದೇವ್‌ ಸೇರಿದಂತೆ ಸಿನಿಮಾಗಳಲ್ಲಿ ನಟಿಸಿದ ಸ್ಟಾರ್‌ ಕ್ರಿಕೆಟಿಗರು..! ಲಿಸ್ಟ್‌ ಇಲ್ಲಿದೆ

ಈ ಆಕ್ಷನ್‌ ಥ್ರಿಲ್ಲರ್‌ ಚಿತ್ರದಲ್ಲಿ ಮೂವರು ನಾಯಕಿಯರಿಗೆ ಅವಕಾಶವಿದೆ. ಆ ಪಾತ್ರಗಳಿಗೆ ಮೂವರು ಬಾಲಿವುಡ್ ಬೆಡಗಿಯರು ಆಯ್ಕೆಯಾಗಲಿದ್ದಾರೆಯಂತೆ. ಸಧ್ಯ ರಾಜಮೌಳಿ ತಂಡ ನಾಯಕಿಯರನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ, ಜೊತೆಗೆ ತಾರಾಗಣ ಮತ್ತು ಸಿಬ್ಬಂದಿ ಆಯ್ಕೆ ಕೂಡ ನಡೆಸುತ್ತಿದೆ.

ಚಿತ್ರದ ಶೂಟಿಂಗ್ 2024 ರ ಮೊದಲ ತ್ರೈಮಾಸಿಕದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಕೆಲವು ಹಾಲಿವುಡ್ ಸ್ಟುಡಿಯೋಗಳು ಚಿತ್ರಕ್ಕೆ ಬಂಡವಾಳ ಹೂಡಲು ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಕೆಎಲ್ ನಾರಾಯಣ ಈ ಚಿತ್ರದ ನಿರ್ಮಾಪಕರು. ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಅಮೆಜಾನ್ ಅರಣ್ಯದಲ್ಲಿ ಈ ಸಿನಿಮಾ ಚಿತ್ರೀಕರಣ ನಡೆಯಲಿದೆಯಂತೆ.

ಇದನ್ನೂ ಓದಿ: 'ಜವಾನ್'ನಲ್ಲಿ ನಟನೆ ಮಾಡೋಕು ಮುಂಚೆ ಶಾರುಖ್ ಯಶ್ ಸಿನಿಮಾ ನೋಡಿದ್ರಂತೆ...! ಏಕೆ ಗೊತ್ತಾ..?

ಸದ್ಯ ಮಹೇಶ್‌ ಬಾಬು ‘ಗುಂಟೂರು ಕಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ರಾಧಾಕೃಷ್ಣ ನಿರ್ಮಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News