Khushi Kapoor: ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಶೀಘ್ರದಲ್ಲೇ ಬಾಲಿವುಡ್ ಜಗತ್ತಿಗೆ ಕಾಲಿಡಲಿದ್ದಾರೆ. ಅವರು ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದೊಂದಿಗೆ ಪಾದಾರ್ಪಣೆ ಮಾಡಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ತಂದೆ ಬೋನಿ ಕಪೂರ್ ಖುಷಿ ಅವರ ನಟನಾ ವೃತ್ತಿಜೀವನದ ಬಗ್ಗೆ ಮಾತನಾಡಿದರು. ಜಾನ್ವಿ ಕಪೂರ್ ಜೊತೆಗೆ ಈಗ ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ಬಾಲಿವುಡ್‌ನಲ್ಲಿ ತನ್ನ ವೃತ್ತಿಜೀವನವನ್ನು ಮಾಡಲಿದ್ದಾರೆ ಎಂದು ಬೋನಿ ಹೇಳಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: WATCH: IIFA ನಲ್ಲಿ ವಿಕ್ಕಿ ಕೌಶಲ್‌ನ್ನು ದೂರ ತಳ್ಳಿದ ಸಲ್ಮಾನ್ ಖಾನ್ ಬಾಡಿಗಾರ್ಡ್‌, ವಿಡಿಯೋ ವೈರಲ್‌


ಬೋನಿ ಕಪೂರ್ ಸಂದರ್ಶನವೊಂದರಲ್ಲಿ ತಮ್ಮ ಪತ್ನಿ ತೀರಿಕೊಂಡಾಗ, ಅವರ ಕಿರಿಯ ಮಗಳಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ನಾನು ಮತ್ತು ಶ್ರೀ ಖುಷಿಯ ವೃತ್ತಿಜೀವನದ ಬಗ್ಗೆ ಏನೂ ಯೋಚಿಸಲಿಲ್ಲ ಏಕೆಂದರೆ ಅವಳು ಆಗ ಮಗುವಾಗಿದ್ದಳು. ಆ ಕಾಲದಲ್ಲಿ ನಮಗೆ ಖುಷಿ ಚೆನ್ನಾಗಿ ಓದಬೇಕು ಅನ್ನುವುದೇ ಮುಖ್ಯವಾಗಿತ್ತು, ಖುಷಿಗೆ ಅಕ್ಕನ ಹಾಗೆ ನಟಿಸಬೇಕು ಅಂತ ಗೊತ್ತಾದಾಗ ಅವಳ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿದ್ದೆ ಎಂದರು.


ಖುಷಿ ಕಪೂರ್ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಅವರೊಂದಿಗೆ 'ದಿ ಆರ್ಚೀಸ್' ನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಹಲವು ಸ್ಟಾರ್ ಮಕ್ಕಳು ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗ ಖುಷಿ ಕಪೂರ್ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಆಕೆ ತಾಯಿಯಂತೆ ನಟಿಸುವುದನ್ನು ನೋಡಲು ಜನ ಬಯಸುತ್ತಾರೆ. ಮತ್ತೊಂದೆಡೆ, ಜಾನ್ವಿ ಕಪೂರ್  ಶೀಘ್ರದಲ್ಲೇ ದಕ್ಷಿಣ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಲಿದ್ದಾರೆ. ಇದಲ್ಲದೇ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಮತ್ತು 'ಬಾವಲ್' ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ. 


ಇದನ್ನೂ ಓದಿ: Janhvi Kapoor: ಸಮುದ್ರದ ಮಧ್ಯದಲ್ಲಿ ಮುತ್ತಿನಂತೆ ಕಂಗೊಳಿಸಿದ ಜಾನ್ವಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.