WATCH: IIFA ನಲ್ಲಿ ವಿಕ್ಕಿ ಕೌಶಲ್‌ನ್ನು ದೂರ ತಳ್ಳಿದ ಸಲ್ಮಾನ್ ಖಾನ್ ಬಾಡಿಗಾರ್ಡ್‌, ವಿಡಿಯೋ ವೈರಲ್‌

IIFA in Abu Dhabi: ಅಬುಧಾಬಿಯಲ್ಲಿ ನಡೆಯುತ್ತಿರುವ IIFA ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅವರನ್ನು ಭೇಟಿ ಮಾಡಲು ಸಲ್ಮಾನ್ ಖಾನ್ ಅವರ ಭದ್ರತೆಯು ವಿಕ್ಕಿ ಕೌಶಲ್‌ಗೆ ಅವಕಾಶ ನೀಡಲಿಲ್ಲ. ಈ ಆಘಾತಕಾರಿ ವಿಡಿಯೋ ವೈರಲ್‌ ಆಗಿದೆ.  

Written by - Chetana Devarmani | Last Updated : May 26, 2023, 03:02 PM IST
  • ಅಬುಧಾಬಿಯಲ್ಲಿ ನಡೆಯುತ್ತಿರುವ IIFA
  • ವಿಕ್ಕಿ ಕೌಶಲ್‌ನ್ನು ದೂರ ತಳ್ಳಿದ ಸಲ್ಮಾನ್ ಖಾನ್ ಬಾಡಿಗಾರ್ಡ್‌,
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
WATCH: IIFA ನಲ್ಲಿ ವಿಕ್ಕಿ ಕೌಶಲ್‌ನ್ನು ದೂರ ತಳ್ಳಿದ ಸಲ್ಮಾನ್ ಖಾನ್ ಬಾಡಿಗಾರ್ಡ್‌, ವಿಡಿಯೋ ವೈರಲ್‌  title=
Salman Khan

IIFA in Abu Dhabi: ಅಬುಧಾಬಿಯಲ್ಲಿ ನಡೆಯುತ್ತಿರುವ IIFA ಸಮಾರಂಭದಲ್ಲಿ ಭದ್ರತಾ ಕಾರಣಗಳಿಗಾಗಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಅಂಗರಕ್ಷಕರು ವಿಕ್ಕಿ ಕೌಶಲ್ ಅವರನ್ನು ಭೇಟಿಯಾಗಲು ಬಿಡಲಿಲ್ಲ. ವಿಕ್ಕಿ ಕೌಶಲ್ ಸಲ್ಮಾನ್ ಜೊತೆ ಮಾತನಾಡಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಲ್ಮಾನ್ ತನ್ನ ಭದ್ರತೆಯೊಂದಿಗೆ ಹಾದುಹೋಗುವಾಗ ವಿಕ್ಕಿ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಕ್ಕಿ, ಸಲ್ಮಾನ್ ಅವರನ್ನು ಹ್ಯಾಂಡ್‌ಶೇಕ್‌ನೊಂದಿಗೆ ಸ್ವಾಗತಿಸಲು ಹೋಗುತ್ತಾರೆ. ಆದರೆ ಅವರ ಭದ್ರತಾ ಸಿಬ್ಬಂದಿ ಅವನನ್ನು ದೂರ ತಳ್ಳುತ್ತಾರೆ. ರೆಡ್ಡಿಟ್‌ನಲ್ಲಿ ಈ ವಿಡಿಯೋ ಹೆಚ್ಚಾಗಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ: ಪವಿತ್ರಾ ನರೇಶ್‌ ʼಮತ್ತೆ ಮದುವೆʼಗೆ ವಿಘ್ನ : ಕೋರ್ಟ್‌ ಮೆಟ್ಟಿಲೇರಿದ ರಮ್ಯಾ ರಘುಪತಿ

ನೆಟಿಜನ್‌ಗಳ ಒಂದು ವಿಭಾಗವು ಸಲ್ಮಾನ್‌ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇತರರು ಸೂಪರ್‌ಸ್ಟಾರ್ ಅನ್ನು ಸಮರ್ಥಿಸಿಕೊಂಡರು. ವೈರಲ್ ವೀಡಿಯೊ ಕುರಿತು ನೆಟಿಜನ್‌ಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. 

 

 

ಸಲ್ಮಾನ್ ಖಾನ್ ಅವರು ತಮ್ಮ ಬಹು ನಿರೀಕ್ಷಿತ ಚಲನಚಿತ್ರ ಟೈಗರ್ 3 ರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅಬುಧಾಬಿಯಲ್ಲಿ ಗುರುವಾರ ನಡೆದ IIFA ಅವಾರ್ಡ್ಸ್ 2023 ಸುದ್ದಿಗೋಷ್ಠಿಯಲ್ಲಿ ಸೂಪರ್ ಸ್ಟಾರ್ ಮಾತನಾಡಿದ್ದು, ಕಳೆದ ರಾತ್ರಿ, ನಾನು ಟೈಗರ್‌ 3 ಚಿತ್ರೀಕರಣದಲ್ಲಿದ್ದೆ ಮತ್ತು  ಟೈಗರ್ 3 ಶೂಟಿಂಗ್‌ ಅನ್ನು ಪೂರ್ಣಗೊಳಿಸಿದ್ದೇನೆ. ಈಗ ನೀವು ದೀಪಾವಳಿಯಂದು ಟೈಗರ್ 3 ಅನ್ನು ನೋಡುತ್ತೀರಿ" ಎಂದು ಹೇಳಿದರು. 

ಇದನ್ನೂ ಓದಿ: ರೆಡ್‌ ಫ್ಲೋರಲ್‌ ಡ್ರೆಸ್‌ನಲ್ಲಿ ನಟಿ ದಿವ್ಯಾ ಸುರೇಶ್ ಹಾಟ್‌ ಲುಕ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News