Bollywood Actress : ಶ್ರೀದೇವಿಗೆ ಸ್ಟಾರ್ ಪಟ್ಟ ಬಂದಿದ್ದು ಈ ನಟಿ ಮಾಡಿದ ಆ ಒಂದು ತಪ್ಪಿನಿಂದ!
Bollywood Actress : ಬಾಲಿವುಡ್ ನಟಿ ರೇಖಾ ಅವರ ಒಂದು ನಿರ್ಧಾರ ಶ್ರೀದೇವಿಯ ಅದೃಷ್ಟವನ್ನು ಬೆಳಗಿಸಿತು. ಬ್ಲಾಕ್ ಬಸ್ಟರ್ ಚಿತ್ರವೊಂದಕ್ಕೆ ಶ್ರೀದೇವಿ ಹೆಸರನ್ನು ತಮಾಷೆಯಾಗಿ ಸೂಚಿಸಿದರು. ಆದರೆ ಅದು ಶ್ರೀದೇವಿ ಅವರ ಲಕ್ನ್ನೇ ಚೇಂಜ್ ಮಾಡಿತು.
Bollywood Actress : ಹಿಂದಿ ಚಿತ್ರರಂಗದ ಲೆಜೆಂಡ್ ನಟಿ ಶ್ರೀದೇವಿ ತಮ್ಮ ವೃತ್ತಿಜೀವನದಲ್ಲಿ ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಶ್ರೀದೇವಿಯನ್ನು ಬಾಲಿವುಡ್ನ ಮೊದಲ ಲೇಡಿ ಸೂಪರ್ಸ್ಟಾರ್ ಎಂದೂ ಕರೆಯುತ್ತಾರೆ. ಅವರು ತಮ್ಮ ಯುಗದ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು. ಆದರೆ ಶ್ರೀದೇವಿ ಮಾತ್ರ ಯಶಸ್ಸಿನ ಗಗನ ಮುಟ್ಟಲಿಲ್ಲ, ನಟಿ ಸಾಕಷ್ಟು ಕಷ್ಟಪಡಬೇಕಾಯಿತು. ಸೌತ್ ಸಿನಿಮಾದಿಂದ ಬಾಲಿವುಡ್ ಗೆ ಬಂದ ಶ್ರೀದೇವಿಗೆ ಹಿಂದಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಆರಂಭಿಕ ದಿನಗಳಲ್ಲಿ ಸಿನಿಮಾಗಳಲ್ಲಿ ಆಫರ್ ಸಿಕ್ಕಿರಲಿಲ್ಲ ಎನ್ನಲಾಗಿದೆ. ನಂತರ ಒಂದು ಕಥೆ ನಟಿಯ ಇಡೀ ಜೀವನವನ್ನು ಬದಲಾಯಿಸಿತು.
ವರದಿಗಳ ಪ್ರಕಾರ, ಶ್ರೀದೇವಿ ಅವರ ಮೊದಲ ಹಿಂದಿ ಚಿತ್ರ 'ಸೋಲ್ವನ್ ಸಾವನ್' (1979) ನಂತರ ಯಾವುದೇ ಚಿತ್ರಕ್ಕೆ ನಾಯಕಿಯಾಗಿ ಅವಕಾಶ ನೀಡಲಿಲ್ಲ. ಆರಂಭದಲ್ಲಿ ನಟಿಯ ಧ್ವನಿಯನ್ನು ಡಬ್ ಮಾಡಲಾಯಿತು ಎಂದು ಹೇಳಲಾಗುತ್ತದೆ. ಆದರೆ ನಟಿ ರೇಖಾ ಅವರ ಆ ಒಂದು ತಪ್ಪು ಶ್ರೀದೇವಿಯನ್ನು ಸೂಪರ್ಸ್ಟಾರ್ ಆಗುವ ಹಾದಿಗೆ ತಂದಿತು.
ಇದನ್ನೂ ಓದಿ: ಅಬ್ಬಬ್ಬಾ.! ನಟಿ ಸಮಂತಾ ಒಂದು ಚಿತ್ರಕ್ಕೆ ಪಡೆವ ಸಂಭಾವನೆ ಇಷ್ಟು ಕೋಟಿನಾ?
‘ಹಿಮ್ಮತ್ವಾಲಾ’ ಸಿನಿಮಾ ತಯಾರಾದಾಗ, ತಯಾರಕರು ರೇಖಾ ಅವರನ್ನು ಮೊದಲು ಜೀತೇಂದ್ರ ಜೊತೆ ನಟಿಸಲು ಸೆಲೆಕ್ಟ್ ಮಾಡಿದ್ದರು. ಆದರೆ ನಂತರ ರೇಖಾ ಬೇರೆ ಯಾವುದೋ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದರು. ‘ಹಿಮ್ಮತ್ವಾಲಾ’ ಚಿತ್ರಕ್ಕೆ ರೇಖಾ ನಿರಾಕರಿಸಿದರು. ರೇಖಾ ಮತ್ತು ಜೀತೇಂದ್ರ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು ಎಂದು ಹೇಳಲಾಗುತ್ತದೆ. ಒಂದು ದಿನ ನಟಿ ಶ್ರೀದೇವಿಯ ಹೆಸರನ್ನು ಜೀತೇಂದ್ರಗೆ ರೇಖಾ ತಮಾಷೆಯಾಗಿ ಸೂಚಿಸಿದರು. ಆದರೆ ಆ ನಂತರ ಸದೇ ನಿಜವಾಯಿತು.
‘ಹಿಮ್ಮತ್ವಾಲಾ’ದಲ್ಲಿ ಶ್ರೀದೇವಿ ನಾಯಕಿಯಾಗಿ ನಟಿಸಿದರು. ಸಿನಿಮಾ ದೊಡ್ಡ ಪರದೆ ಮೇಲೆ ಬಂದಾಗ ಎಲ್ಲರೂ ಬೆಚ್ಚಿಬಿದ್ದಿದ್ದರು. ‘ಹಿಮ್ಮತ್ವಾಲಾ’ ಬಾಕ್ಸ್ಆಫಿಸ್ನಲ್ಲಿ ಸಾಕಷ್ಟು ಹಣ ಕೊಳ್ಳೆ ಹೊಡೆಯಿತು. ಇದರ ನಂತರ, ಶ್ರೀದೇವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ನಟಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಆಗ ಶ್ರೀದೇವಿ ಹಿಂದಿ ಚಿತ್ರರಂಗದ ಮೊದಲ ಲೇಡಿ ಸೂಪರ್ಸ್ಟಾರ್ ಎಂದೂ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ: ಬೆತ್ತಲಾದ ʻಹೆಡ್ ಬುಷ್ʼ ನಟಿ ಪಾಯಲ್ ಫೋಟೋ ಸಿಕ್ಕಾಪಟ್ಟೆ ವೈರಲ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.