Natu Natu Song : ಕೆಲವು ದಿನಗಳ ಹಿಂದೆ ಆಸ್ಕರ್‌ ಗೆದ್ದು, ಮಿಂಚಿದ RRR ಸಿನಿಮಾದ ನಾಟು ನಾಟು ಹಾಡು ಸಖತ್‌ ಹಿಟ್‌ ಆಗಿ, ಎಲ್ಲೆಡೆ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಇದೇ ಸಮಯದಲ್ಲಿ ಬಾಲಿವುಡ್‌ ಟಾಪ್‌ ನಟ ಶಾರುಖ್‌ ಖಾನ್‌ ಈ ಹಾಡಿಗೆ ಸ್ಟೇಪ್‌ ಹಾಕಿರುವುದು ಹಾಡಿಗೆ ಇನ್ನೊಂದು ಪ್ರಶಸ್ತಿ ಲಭಿಸಿರುವಂತಾಗಿದೆ. ಜೂಮ್ ಜೋ ಪಠಾನ್‌ ಸಾಂಗ್‌ ಗೆ ವರುನ್‌ ಧಾವನ್‌ ಹಾಗೂ ರನ್ವೀರ್‌ ಸಿಂಗ್‌ ಜೊತೆ ಭರ್ಜರಿಯಾಗಿ ಸ್ಟೆಪ್ಸ್‌ ಹಾಕಿ ಎಲ್ಲರ ಕಣ್ಮನ ಸೆಳೆದಿದ್ದರು. 


COMMERCIAL BREAK
SCROLL TO CONTINUE READING

ಅದರ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿವೆ. ಇದೀಗ ಆ ಈವೆಂಟ್‌ ನ ಇನ್ನೊಂದು ವಿಡಿಯೋ ವೈರಲ್‌ ಆಗಿದ್ದು, ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್‌ನ ಆಸ್ಕರ್-ವಿಜೇತ ಹಾಡಿನ ನಾಟು ನಾಟು ಹಾಡಿನ ಜನಪ್ರಿಯ ಹುಕ್ ಹೆಜ್ಜೆಯನ್ನು ಎಸ್‌ಆರ್‌ಕೆ ಹಾಕಿದ್ದಾರೆ. 


 



 


ಇದನ್ನೂ ಓದಿ-Watch: ಜಾಕ್ವೆಲಿನ್’ಗೆ ಕಿಸ್ ಕೊಟ್ಟು ಯಾರಿಗೂ ಗೊತ್ತಾಗದಂತೆ ತನ್ನ ಬಟ್ಟೆಯಲ್ಲೇ ತುಟಿ ಒರೆಸಿಕೊಂಡ ಸ್ಟಾರ್ ನಟ! ವಿಡಿಯೋ ನೋಡಿ 


ಈ ಈವೆಂಟ್‌ ನ 2 ನೇ ದಿನವು ಶಾರುಖ್ ಖಾನ್, ವರುಣ್ ಧವನ್, ರಣವೀರ್ ಸಿಂಗ್, ಆಲಿಯಾ ಭಟ್, ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವಾರು ಬಾಲಿವುಡ್ ನಟ ನಟಿಯರ ನೃತ್ಯದಿಂದ ವೇದಿಕೆ ಕಂಗೊಳಿಸಿತ್ತು. ಅಂಬಾನಿ ಕುಟುಂಬದೊಂದಿಗೆ ನಿಕಟ ಬಾಂಧವ್ಯವನ್ನು ಹಂಚಿಕೊಂಡಿರುವ ನಟ ಶಾರುಖ್ ಖಾನ್ ಅವರು ವೇದಿಕೆಯಲ್ಲಿ ವಿಶೇಷ ನೃತ್ಯ ಮಾಡಿದವರಲ್ಲಿ ಒಬ್ಬರಾಗಿದ್ದರು. 


ಇದನ್ನೂ ಓದಿ-ವರುಣ್ ಧವನ್, ರಣವೀರ್ ಸಿಂಗ್ ಶಾರುಖ್ ಖಾನ್ ಜೊತೆ ಜೂಮ್ ಜೋ ಪಠಾನ್ ಡ್ಯಾನ್ಸ್-ವಿಡಿಯೋ ವೈರಲ್‌ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

.



.