Watch: ಜಾಕ್ವೆಲಿನ್’ಗೆ ಕಿಸ್ ಕೊಟ್ಟು ಯಾರಿಗೂ ಗೊತ್ತಾಗದಂತೆ ತನ್ನ ಬಟ್ಟೆಯಲ್ಲೇ ತುಟಿ ಒರೆಸಿಕೊಂಡ ಸ್ಟಾರ್ ನಟ! ವಿಡಿಯೋ ನೋಡಿ

Salman Khan and Jacqueline Fernandez Kissing Scene: ಬಾಲಿವುಡ್‌’ನಲ್ಲಿ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಇಂದಿಗೂ ನೋ ಕಿಸ್ ಪಾಲಿಸಿಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಸಖತ್ ಫನ್ನಿಯಾಗಿದೆ. ಅದರಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್‌ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ

Written by - Bhavishya Shetty | Last Updated : Apr 2, 2023, 03:31 PM IST
    • ಬಾಲಿವುಡ್ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಅನೇಕ ನಾಯಕಿಯರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ.
    • ಅಷ್ಟೇ ಅಲ್ಲ ಆಗಾಗ್ಗೆ ಡೇಟಿಂಗ್ ಕೂಡ ಹೋಗುತ್ತಾರೆ ಎಂದು ಹೇಳಲಾಗುತ್ತದೆ.
    • ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಲ್ಮಾನ್ ಖಾನ್ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿದೆ.
Watch: ಜಾಕ್ವೆಲಿನ್’ಗೆ ಕಿಸ್ ಕೊಟ್ಟು ಯಾರಿಗೂ ಗೊತ್ತಾಗದಂತೆ ತನ್ನ ಬಟ್ಟೆಯಲ್ಲೇ ತುಟಿ ಒರೆಸಿಕೊಂಡ ಸ್ಟಾರ್ ನಟ! ವಿಡಿಯೋ ನೋಡಿ title=
Salman Khan

Salman Khan and Jacqueline Fernandez Kissing Scene: ಬಾಲಿವುಡ್‌’ನ ಪ್ರಸಿದ್ಧ ಹೆಸರುಗಳಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ‘ನೋ ಕಿಸ್’ ಪಾಲಿಸಿಯನ್ನು ಬಾಲಿವುಡ್’ನಲ್ಲಿ ಇಂದಿಗೂ ಪಾಲಿಸಿಕೊಂಡು ಬಂದಿರುವ ನಟ ಇವರು. ಆದರೆ ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದ್ದು, ಸಖತ್ ಫನ್ನಿಯಾಗಿ ಕಾಣಿಸಿಕೊಳ್ಳುತ್ತಿದೆ.

ಸಲ್ಮಾನ್ ಖಾನ್ ಎಂದರೆ ಬಾಲಿವುಡ್ ಮಂದಿಯ ಫೇವರೇಟ್ ನಟರಲ್ಲಿ ಒಬ್ಬರು. ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಸಲ್ಮಾನ್ ಖಾನ್’ಗೆ ಇತ್ತೀಚೆಗೆ ಕೊಲೆ ಬೆದರಿಕೆ ಕರೆ ಕೂಡ ನೀಡಲಾಗಿತ್ತು. ಇದೀಗ ಸಲ್ಮಾನ್ ಖಾನ್ ಅವರ ಒಂದು ವಿಡಿಯೋ ವೈರಲ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ: IPL 2023: ಟೀಂ ಇಂಡಿಯಾದಿಂದ ಹೊರಗಿಟ್ಟ ಈ ಆಟಗಾರನಿಗೆ ಪಾಂಡ್ಯ ಕೂಡ ಕೊಡುತ್ತಿಲ್ಲ ಅವಕಾಶ! ಅಂತ್ಯವಾಯ್ತ ವೃತ್ತಿ ಜೀವನ?

ಬಾಲಿವುಡ್ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಅನೇಕ ನಾಯಕಿಯರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಅಷ್ಟೇ ಅಲ್ಲ ಆಗಾಗ್ಗೆ ಡೇಟಿಂಗ್ ಕೂಡ ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಬಾಲಿವುಡ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶ್ರೀಲಂಕಾ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಲ್ಮಾನ್ ಖಾನ್ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿದೆ.

ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಇಬ್ಬರೂ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇವರಿಬ್ಬರು ಜೊತೆಯಾಗಿ ಮೊದಲು ನಟಿಸಿದ ಸಿನಿಮಾ ‘ಕಿಕ್’. 2014ರಲ್ಲಿ ರಿಲೀಸ್ ಆದ ಈ ಸಿನಿಮಾ ಜಾಕ್ವೆಲಿನ್ ಅವರೊಗೆ ಯಶಸ್ಸನ್ನು ತಂದುಕೊಟ್ಟಿತು. ಈ ಸಿನಿಮಾ ಬಳಿಕ ರೇಸ್-3, ರಾಧೆ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು.  

ವೈರಲ್ ವಿಡಿಯೋದಲ್ಲಿ ಏನಿದೆ?

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್‌ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ. ಆದರೆ ಸ್ವಲ್ಪ ಸಮಯದ ಬಳಿಕ ತನ್ನದೇ ಟೀ ಶರ್ಟ್‌ನಿಂದ ತುಟಿಗಳನ್ನು ಒರೆಸೆಕೊಂಡಿದ್ದಾರೆ. ಇದು ಶೂಟಿಂಗ್ ಸೆಟ್‌ ವಿಡಿಯೋ ಎಂದು ಅನಿಸುತ್ತಿದೆ. ತುಟಿಯಲ್ಲಿ ಮೇಕಪ್ ಹಿಡಿದಿದ್ದು ಅದನ್ನು ಒರೆಸುವಂತೆ ತೋರುತ್ತದೆ..

ಈ ವಿಡಿಯೋ ವೈರಲ್ ಆಗಿದ್ದೇ ತಡ ಚಿತ್ರ ವಿಚಿತ್ರ ಕಮೆಂಟ್’ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಓರ್ವ “ಒಂದು ಕೆಜಿ ಮೇಕಪ್ ಇತ್ತಾ?” ಎಂದು ಪ್ರಶ್ನಿಸಿದರೆ, ಮತ್ತೊಬ್ಬ “ಸಲ್ಮಾನ್ ಅವರಿಗೆ ಸುಖೇಶ್ ಬಗ್ಗೆ ತಿಳಿದಿದೆ” ಎಂದು ಜಾಕ್ ಕಾಲೆಳೆದಿದ್ದಾರೆ.

 

ಇದನ್ನೂ ಓದಿ: IPL 2023: ಇಂದು RCB V/s MI ಹಣಾಹಣಿ; ‘ಈ ಸಲ ಕಪ್ ನಮ್ದೆ’ ಅಂತಿದ್ದಾರೆ ಫ್ಯಾನ್ಸ್..!

ಒಂದು ಸಮಯದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹರಿದಾಡಿತ್ತು. ಅಷ್ಟೇ ಅಲ್ಲದೆ, ಕೊರೊನಾ ಪ್ರಚೋದಿತ ಲಾಕ್‌ ಡೌನ್ ಸಮಯದಲ್ಲಿ ಜಾಕ್ವೆಲಿನ್ ಮತ್ತು ಸಲ್ಮಾನ್ ಒಟ್ಟಿಗೆ ಫಾರ್ಮ್‌ ಹೌಸ್ ನಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News