ಬೆಂಗಳೂರು: ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’(Head Bush) ಸಿನಿಮಾದ ತಾರಾಗಣ ಹಿರಿದಾಗುತ್ತಿದೆ. ವಸಿಷ್ಠ ಸಿಂಹ ಬಳಿಕ ಇದೀಗ ನಟಿ ಶೃತಿ ಹರಿಹರನ್ ಕೂಡ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಮೊದಲ ಅಂಡರ್ ವರ್ಲ್ಡ್ ಡಾನ್ ಎಂಪಿ ಜಯರಾಜ್ ಜೀವನ ಚರಿತ್ರೆ( MP Jayaraj Biopic) ಆಧಾರಿತ ಸಿನಿಮಾದಲ್ಲಿ ಡಾಲಿ ಧನಂಜಯ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.


COMMERCIAL BREAK
SCROLL TO CONTINUE READING

ಪತ್ರಕರ್ತ ಮತ್ತು ಮಾಜಿ ಡಾನ್ ಅಗ್ನಿ ಶ್ರೀಧರ್(Agni Shridhar) ಈ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಚಂದನವನದ ಹೊಸ ಪ್ರತಿಭೆ, ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಭಾಗವಾಗಿದ್ದ ಶೂನ್ಯ ಅವರು ‘ಹೆಡ್ ಬುಷ್’ ನಿರ್ದೇಶನ ಮಾಡುತ್ತಿದ್ದಾರೆ. ಜಯರಾಜ್ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿರುವ ಡಾಲಿ ಧನಂಜನ್ ಅವರೇ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.


ಇದನ್ನೂ ಓದಿ: ಸಿದಾರ್ಥ್ ಶುಕ್ಲಾ ಕೊನೆಯ ಮಾತುಗಳನ್ನಾಡಿದ್ದು ಅಮ್ಮನ ಜೊತೆಯಲ್ಲಿಯೇ, ಸಾವಿಗೂ ಮುನ್ನ ನಡೆದ ಘಟನೆ ಇದು..


ಈಗಾಗಲೇ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ‘ಹೆಡ್‌ ಬುಷ್‌’ ಸಿನಿಮಾ ಪಾತ್ರವರ್ಗದಿಂದಲೇ ಸಖತ್ ಸದ್ದು ಮಾಡುತ್ತಿದೆ. ಚಿತ್ರತಂಡ ಕಳೆದ ವರ್ಷವೇ ಚಿತ್ರೀಕರಣಕ್ಕೆ ಚಾಲನೆ ನೀಡಿತ್ತು. ಆದರೆ ಸಿನಿಮಾದ ಪ್ರಮುಖ ಚಿತ್ರೀಕರಣವು ಇತ್ತೀಚೆಗಷ್ಟೇ ಆರಂಭವಾಗಿದೆ. ಧನಂಜಯ್(Daali Dhananjay) ಎದುರು ನಾಯಕಿಯಾಗಿ ‘100’  ಖ್ಯಾತಿಯ ಪಾಯಲ್‌ ರಜಪೂತ್ ಆಯ್ಕೆಯಾಗಿದ್ದಾರೆ ಎಂದು ಚಿತ್ರತಂಡ ಮೊದಲು ಘೋಷಿಸಿತ್ತು. ಇದರ ನಂತರ ಲೂಸ್ ಮಾದ ಯೋಗಿ(Loose Maada Yogi) ಮತ್ತು ವಸಿಷ್ಠ ಎನ್.ಸಿಂಹ ಪಾತ್ರವರ್ಗಕ್ಕೆ ಸೇರಿರುವುದು ಸುದ್ದಿಯಾಯಿತು. ಪ್ರಕಾಶ್ ಬೆಳವಾಡಿ ಮತ್ತು ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಕೂಡ ತಾರಾಗಣದ ಭಾಗವಾಗಿದ್ದಾರೆ.


ಚಿತ್ರರಂಗದಿಂದ ಕೆಲಕಾಲ ಬ್ರೇಕ್ ತೆಗೆದುಕೊಂಡಿದ್ದ ನಟಿ ಶೃತಿ ಹರಿಹರನ್(Sruthi Hariharan) ‘ಹೆಡ್ ಬುಷ್’ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ವೈಯಕ್ತಿಕ ಜೀವನದ ಕಡೆ ಗಮನ ಹರಿಸಿದ್ದ ‘ಲೂಸಿಯಾ’ ಖ್ಯಾತಿಯ ನಟಿ ಮತ್ತೆ ನಟನೆಯತ್ತ ಮುಖ ಮಾಡಿದ್ದು, ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಸೆಟ್‌ಗೆ ಶೃತಿ ಸೇರಿಕೊಂಡಿರುವ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. ಡಾಲಿ ಧನಂಜಯ್ ಜೊತೆ ಶೃತಿ ನಟಿಸುತ್ತಿರುವುದು ಇದು 3ನೇ ಚಿತ್ರದಲ್ಲಿ.


ಇದನ್ನೂ ಓದಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯಾಕೆ ರಿಮೇಕ್ ಸಿನಿಮಾ ಮಾಡುವುದಿಲ್ಲ ಗೊತ್ತಾ..?


‘ಹೆಡ್ ಬುಷ್’ ಚಿತ್ರದ ಭಾಗವಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಬಹಳ ಸಮಯದ ಬಳಿಕ ಮತ್ತೆ ಮುಖ್ಯವಾಹಿನಿಯ ಚಿತ್ರಕ್ಕೆ ಮರಳಿರುವುದು ಸಂತೋಷವಾಗಿದೆ. ಇನ್ನಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸುವುದನ್ನು ನಾನು ಎದುರು ನೋಡುತ್ತೇನೆ’ ಅಂತಾ ನಟಿ ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ.    


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.