ಬೆಂಗಳೂರು : ತವರಿಗೆ ಬಾ ತಂಗಿ ಸಿನಿಮಾವನ್ನು ನೋಡಿ ಮೆಚ್ಚದವರಿಲ್ಲ. ಕಣ್ಣೀರು ಹಾಕದವರಿಲ್ಲ. ಇದೊಂದು ಎವರ್ ಗ್ರೀನ್ ಸಿನಿಮಾ ಅಂದರೆ ಖಂಡಿತಾ ತಪ್ಪಲ್ಲ.   ಅದ್ಬುತ ಕಥಾ ಹಂದರ ಹೊಂದಿರುವ ಈ ಚಿತ್ರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಸಿನಿಮಾ. ಈ ಸಿನಿಮಾದ ಒಂದೊಂದು ಪಾತ್ರವೂ ಕಾಡುವಂಥದ್ದೇ  ಈ ಪೈಕಿ ಮನೆ ಕೆಲಸದವನಾಗಿ ನಟಿಸಿದ್ದ ಕೋಮಲ್ ಅವರ ಪಾತ್ರ ಕೂಡಾ ಒಂದು. ಕೋಮಲ್ ಈ ಸಿನಿಮಾದ ಮನೆಕೆಲಸದವನ ಪಾತ್ರಕ್ಕೆ ಆಯ್ಕೆ ಆಗಿರುವ ಹಿಂದೆಯೂ ಒಂದು ಕತೆಯಿದೆ. 


COMMERCIAL BREAK
SCROLL TO CONTINUE READING

ತವರಿಗೆ ಬಾ ತಂಗಿ ಸಿನಿಮಾವನ್ನ ಎಷ್ಟೂ ಬಾರಿ ನೋಡಿದರೂ ಸಾಕು ಅನ್ನಿಸುವುದಿಲ್ಲ. ಅಣ್ಣ ತಂಗಿಯ ನಡುವಿನ ಸಂಬಂಧದ ಈ ಕಥೆ ಎಷ್ಟು ಕಾಲ ಸಂದರೂ ಬೇಸರ ತರಿಸದು. ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ  ಅದ್ಭುತವಾಗಿ ನಟಿಸಿ ತಮ್ಮ ಪಾತ್ರ ಮೂಲಕವೇ ವೀಕ್ಷಕರನ್ನು ಬಹುಕಾಲದವರೆಗೆ ಕಾಡಿ ಬಿಡುತ್ತಾರೆ. 


ಇದನ್ನೂ ಓದಿ : ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ನಟಿ ರಕ್ಷಿತಾ ಹೀಗ್ ಹೇಳಿದ್ದು ಯಾಕ್ ಗೊತ್ತಾ?


ಈ ಸಿನಿಮಾದಲ್ಲಿ ನಟ ಕೋಮಲ್ ಮನೆಕೆಲಸದವನ ಪಾತ್ರದಲ್ಲಿ ಮಿಂಚಿದ್ದಾರೆ.  ಈ ಪಾತ್ರದ ಮೂಲಕ ನಮ್ಮನ್ನ ಬೇರೇ ಲೆವೆಲ್ಲಿಗೆ ಕೊಂಡೊಯ್ದಿದ್ದಾರೆ.ಈ ಪಾತ್ರಕ್ಕಾಗಿ ಹಲವು ಪ್ರಶಸ್ತಿಗಳು ಕೋಮಲ್ ಅವರನ್ನು ಅರಸಿಕೊಂಡು ಬಂದಿದೆ. ಈ ಸಿನಿಮಾಗೆ ಕೋಮಲ್ ಅವರಿಗೆ ಅವಕಾಶ ಸಿಕ್ಕಿದ್ದು ಹೇಗೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. 


ಆ ಸಂದರ್ಭದಲ್ಲಿ ನಟನೆ ಜೊತೆ ವಿತರಕರಾಗಿ ಕೆಲಸ ಮಾಡುತ್ತಿದ್ದವರು ಕೋಮಲ್. ಅವರಿಗೆ ಅವಕಾಶ ಕಡಿಮೆ ಆದಾಗ ನಿರ್ಮಾಪಕರ ಬಳಿ ನನಗೂ ಒಂದು ಪಾತ್ರ ಕೊಡುವಂತೆ ಕೇಳಿದಾಗ ಯಾವುದೇ ಪಾತ್ರ ಇಲ್ಲ ಎಂದಿದ್ದರಂತೆ. ಆದರೆ ಮಾಡಲು ಸಿದ್ದವಿದ್ದರೆ ಮನೆಕೆಲಸದವನ ಪಾತ್ರ ಇದೆ ಅಂದಿದ್ದರಂತೆ. ಆಗ ಸಿಕ್ಕಿದ ಅವಕಾಶ ಬಿಡುವುದು ಹೇಗೆ ಎಂದು ದಿನಕ್ಕೆ 42 ರೂಪಾಯಿ ಸಂಭಾವನೆಗೆ ಈ ಚಿತ್ರಕ್ಕೆ ಒಪ್ಪಿದ್ದರಂತೆ. ಅಂದರೆ ಕೋಮಲ್ ಒಂದು ತಿಂಗಳಿಗೆ ಪಡೆದ ಸಂಭಾವನೆ 5 ಸಾವಿರ ರೂಪಾಯಿ.  


ಇದನ್ನೂ ಓದಿ : ಆ ಸ್ಟಾರ್‌ ಹೀರೋ ನನಗೆ ತಡರಾತ್ರಿ ಕರೆ ಮಾಡಿ... ಚಿತ್ರಹಿಂಸೆ ನೀಡಿದ್ದ..! ಖ್ಯಾತ ನಟನ ಮುಖವಾಡ ಕಳಚಿದ ಕೃತಿ ಶೆಟ್ಟಿ


ತಾನು ಕಲಾವಿದನಾಗಿ ಉಳಿದುಕೊಳ್ಳಲು, ಅಕಲಾವಿದನಾಗಿ ತನ್ನ ಭವಿಷ್ಯ  ಕಂಡುಕೊಳ್ಳಲು ಸಾಕಷ್ಟು ಕಸರತ್ತು ಮಾಡಿರುವುದಾಗಿ ಕೋಮಲ್ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ  ತನ್ನ ಮನದ ಮಾತನ್ನು ಹಂಚಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.