ಬೆಂಗಳೂರು: ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ವಿದ್ಯಾರ್ಥಿ ಕಾಂತಾರ ಸಿನಿಮಾದ ವರಾಹರೂಪಂ ಹಾಡಿಗೆ ನೃತ್ಯ ಮೇಲೆ ಪಂಜುರ್ಲಿ ದೈವ  ಆವಾಹನೆಯಾಗಿದೆ ಎನ್ನಲಾಗಿದೆ.ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ  ವಿಶಾಲ್ ಪಂಜುರ್ಲಿ ದೈವದ ವೇಷ ಧರಿಸಿ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪಿಯು ಕಾಲೇಜು ವಾರ್ಷಿಕೋತ್ಸವದ ಈ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ವಿಶಾಲ್ ಕೆಲ ನಿಮಿಷಗಳ ಬಳಿಕ ವೇದಿಕೆಯಿಂದ ಕೆಳಗೆ ಬಂದು ನರ್ತಿಸುತ್ತಿದ್ದಂತೆ ದೈವ ಆವಾಹನೆಯಾಗಿದೆ. ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿದ್ದಾರೆ.


ಇದನ್ನೂ ಓದಿ: Prabhas Kriti engagement : ಡಾರ್ಲಿಂಗ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌.. ಮಾಲ್ಡೀವ್ಸ್‌ನಲ್ಲಿ ಪ್ರಭಾಸ್‌, ಕೃತಿ ನಿಶ್ಚಿತಾರ್ಥ ಫಿಕ್ಸ್‌..!


ಯೋಜಕರು ತಕ್ಷಣವೇ ಹಾಡು ನಿಲ್ಲಿಸಿದ್ದಾರೆ.ವಿದ್ಯಾರ್ಥಿಯ ವರ್ತನೆ ಕಂಡು ಬೇರೆ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ, ಪೋಷಕರು ಶಾಕ್ ಆಗಿದ್ದಾರೆ. ಇನ್ನೂ ಈ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ ವಿದ್ಯಾರ್ಥಿ ವಿಶಾಲ್, ಹಲವು ದಿನಗಳಿಂದ ನಾನು ಈ ನೃತ್ಯಕ್ಕಾಗಿ ತಯಾರಿ ನಡೆದಿದ್ದೆ. ದಿನವು ದೇವರ ಪೂಜೆ ಮಾಡಿ ಪ್ರಾಕ್ಟೀಸ್ ಮಾಡುತ್ತಿದೆ. ಇದಕ್ಕಾಗಿ ಮಾಂಸಹಾರ ಸೇವನೆಯನ್ನು ನಾನೂ ಸಂಪೂರ್ಣವಾಗಿ ಬಿಟ್ಟಿದ್ದೆ. ನಿನ್ನೆ ನೃತ್ಯ ಮಾಡುವಾಗ ಏನಾಯ್ತು ಅಂತಾ ನನಗೆ ಗೊತ್ತಾಗಿಲ್ಲ.. ಎಲ್ಲರೂ ನೀನು ಈ ರೀತಿ ವರ್ತಿಸಿದೆ ಎಂದಾಗಲೇ ನನಗೆ ಅರಿವಾಗಿದೆ‌ ಎಂದು ದೈವ ಆವಾಹನೆಯಾದ ಬಗ್ಗೆ ಹೇಳಿದ್ದಾನೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.