Prabhas Kriti engagement : ಡಾರ್ಲಿಂಗ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌.. ಮಾಲ್ಡೀವ್ಸ್‌ನಲ್ಲಿ ಪ್ರಭಾಸ್‌, ಕೃತಿ ನಿಶ್ಚಿತಾರ್ಥ ಫಿಕ್ಸ್‌..!

ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್ 'ಡಾರ್ಲಿಂಗ್' ಪ್ರಭಾಸ್ ಮದುವೆ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್‌ ಮಾಡುತ್ತಿದೆ. ಪ್ರಭಾಸ್ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ರೆಬಲ್‌ ಮದುವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೆಲವು ವರ್ಷಗಳಿಂದ ಪ್ರಭಾಸ್ ಅನುಷ್ಕಾ ಮದುವೆ ಆಗ್ತಾರೆ ಅಂತ ಹೇಳಲಾಗುತ್ತಿದ್ದು, ಇದೀಗ, ಪ್ರಭಾಸ್ ಬಿಟೌನ್‌ ಬೆಡರಿ ಕೃತಿ ಸನನ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಅಂತ ಹೇಳಲಾಗುತ್ತಿದೆ.

Written by - Krishna N K | Last Updated : Feb 8, 2023, 01:50 PM IST
  • ಮುಂದಿನ ವಾರ ಮಾಲ್ಡೀವ್ಸ್ ನಲ್ಲಿ ಕೃತಿ ಸನನ್, ಪ್ರಭಾಸ್ ನಿಶ್ಚಿತಾರ್ಥ.
  • 'ಡಾರ್ಲಿಂಗ್' ಪ್ರಭಾಸ್ ಮದುವೆ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್‌ ಮಾಡುತ್ತಿದೆ.
  • ಪ್ರಭಾಸ್ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ರೆಬಲ್‌ ಮದುವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
Prabhas Kriti engagement : ಡಾರ್ಲಿಂಗ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌.. ಮಾಲ್ಡೀವ್ಸ್‌ನಲ್ಲಿ ಪ್ರಭಾಸ್‌, ಕೃತಿ ನಿಶ್ಚಿತಾರ್ಥ ಫಿಕ್ಸ್‌..! title=

Prabhas Kriti sanon engagement : ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್ 'ಡಾರ್ಲಿಂಗ್' ಪ್ರಭಾಸ್ ಮದುವೆ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್‌ ಮಾಡುತ್ತಿದೆ. ಪ್ರಭಾಸ್ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ರೆಬಲ್‌ ಮದುವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೆಲವು ವರ್ಷಗಳಿಂದ ಪ್ರಭಾಸ್ ಅನುಷ್ಕಾ ಮದುವೆ ಆಗ್ತಾರೆ ಅಂತ ಹೇಳಲಾಗುತ್ತಿದ್ದು, ಇದೀಗ, ಪ್ರಭಾಸ್ ಬಿಟೌನ್‌ ಬೆಡರಿ ಕೃತಿ ಸನನ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಅಂತ ಹೇಳಲಾಗುತ್ತಿದೆ.

ಹಲವಾರು ಗಾಸಿಫ್‌ಗಳ ನಂತರ ಇದೀಗ ಮತ್ತೊಂದು ವಿಚಾರ ಬಯಲಾಗಿದೆ. ಕೃತಿ ಪ್ರಭಾಸ್‌ ಮದುವೆ ಆಗ್ತಾರೆ ಎನ್ನುವ ಟ್ಟೀಟ್‌ ಒಂದು ಸಖತ್‌ ವೈರಲ್‌ ಆಗುತ್ತಿದೆ. ಬಾಲಿವುಡ್ ವಿಮರ್ಶಕ ಉಮೈರ್ ಸಂಧು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ʼಬ್ರೇಕಿಂಗ್ ನ್ಯೂಸ್: ಮುಂದಿನ ವಾರ ಮಾಲ್ಡೀವ್ಸ್ ನಲ್ಲಿ ಕೃತಿ ಸನನ್, ಪ್ರಭಾಸ್  ನಿಶ್ಚಿತಾರ್ಥ.' ಎಂದು ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಇಂತಹ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ’ ಎಂದು ಕೆಲವರು ಹೇಳುತ್ತಾರೆ.

ಇದನ್ನೂ ಓದಿ: Urfi Javed : ಮನೆಯಿಂದ ಓಡಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಉರ್ಫಿ ಜಾವೇದ್.!

ಕಾಗಾ ಉಮೈರ್ ಸಂಧು ಬಾಲಿವುಡ್ ಸೆಲೆಬ್ರಿಟಿಗಳ ವೈಯಕ್ತಿಕ ವಿಷಯಗಳ ಕುರಿತು ಸಂವೇದನಾಶೀಲ ಟ್ವೀಟ್‌ಗಳನ್ನು ಮಾಡುವ ಮೂಲಕ ಆಗಾಗ್ಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಇದಲ್ಲದೆ, ಅವರ ವಿರುದ್ಧ ಹಲವಾರು ಪೊಲೀಸ್ ಪ್ರಕರಣಗಳು ಸಹ ದಾಖಲಾಗಿವೆ. ಎಂದಿನಂತೆ, ಉಮೈರ್ ಸಂಧು ಅವರ ಕಾಮೆಂಟ್‌ಗಳನ್ನು ಅನೇಕರು ರವಾನಿಸುತ್ತಿದ್ದಾರೆ. ಇದು ಸುಳ್ಳು ಸುದ್ದ ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಪ್ರಸಾರವಾದ ಪ್ರಭಾಸ್-ಬಾಲಯ್ಯ ಅನ್‌ಸ್ಟಾಪಬಲ್ ಸೀಸನ್‌ 2 ಶೋನಲ್ಲಿ ಪ್ರಭಾಸ್, ಚರಣ್ ಮದುವೆಯ ಬಗ್ಗೆ ಸುಳಿವು ನೀಡಿದರು. ಶೀಘ್ರದಲ್ಲೇ ಪ್ರಭಾಸ್ ಅವರಿಂದ ಒಳ್ಳೆಯ ಸುದ್ದಿ ಬರಲಿದೆ ಅಂತ ತಿಳಿಸಿದ್ದರು. ಡಾರ್ಲಿಂಗ್‌ ಬೆಸ್ಟ್‌ ಫ್ರಂಡ್ಸ್‌ ಹೇಳಿದ ಈ ಮಾತಿನಿಂದ ರೆಬಲ್‌ ಅಭಿಮಾನಿಗಳಿಗೆ ಭಾರಿ ಖುಷಿಯಾಗಿತ್ತು. ಆದ್ರೆ, ಈ ಸುದ್ದಿಗಳ ಸತ್ಯಾಸತ್ಯತೆ ತಿಳಿಯಬೇಕಾದರೆ ಸ್ವತಃ ಪ್ರಭಾಸ್‌ ಕೃತಿ ಕ್ಲಾರೀಟಿ ನೀಡಬೇಕು. ಸದ್ಯ ಪ್ರಭಾಸ್-ಕೃತಿ ಜೋಡಿ ಅಭಿನಯದ ಆದಿಪುರಷ ಸಿನಿಮಾ ಈ ವರ್ಷದ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News