ಬೆಂಗಳೂರು: ನಟ ಕಿಚ್ಚ ಸುದೀಪ್‌ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾದ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಈ ವಿಚಾರ ಕುರಿತಂತೆ ಸ್ವಲ್ಪ ಮಂದಿ  ನಟ ಸುದೀಪ್‌ ಪರ ನಿಂತರೇ ಕೆಲವರು ನಿರ್ಮಾಪಕ ಪರ ಧ್ವನಿ ಎತ್ತಿದ್ದಾರೆ. ಈ ವಿಚಾರ  ಬೇರೆ ಹಂತಕ್ಕೆ ಹೋಗಿದೆ.


COMMERCIAL BREAK
SCROLL TO CONTINUE READING

ಸುದೀಪ್​ ಅವರು ಕೋರ್ಟ್​ ಮೋರೆ ಹೋಗಿದ್ಧಾರೆ. ಇದೀಗ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿದೆ. ಈ ವಿಚಾರ ಕುರಿತು ಶಿವಣ್ಣ  ಹಾಗೂ ನಟ ರವಿಚಂದ್ರನ್‌ ತಿರ್ಮಾನ ತೆಗೆದುಕೊಳ್ಳುವ ಸಲುವಾಗಿ ಚಿತ್ರರಂಗದ ಕೆಲ ನಿರ್ಮಾಪಕರು  ಇವರಿಬ್ಬರನ್ನು ಆಹ್ವಾನಿಸಿದ್ದಾರೆ.


ಇದನ್ನೂ ಓದಿ: ಸದ್ಯದಲೇ ತೆರೆಯ ಮೇಲೆ ವಶಿಷ್ಠ ಸಿಂಹ ನಟನೆಯ 'ಲವ್‌ಲಿ'...!


ಆ ವೇಳೆ ಮಾತನಾಡಿದ ರವಿಚಂದ್ರನ್‌, ಇದೊಂದು ಸಣ್ಣ ವಿಚಾರ ಸ್ನೇಹಿತರ ನಡುವೆ ನಡೆದಿದೆ. ಹೀಗಾಗಿ ಇದನ್ನು ದೊಡ್ಡ ವಿಷಯ ಮಾಡುವುದು ಬೇಡ ಎಂದರು. ಸಂಧಾನ ಕುರಿತು ಮಾತಾನಾಡಿರುವ ಕ್ರೇಜಿಸ್ಟಾರ್‌, ‘ಶಿವರಾಜ್​ಕುಮಾರ್​ ಅವರ ಬಳಿಯೇ ಮೊದಲು ಹೋಗಬೇಕು.


ಅವರೇ ಫಸ್ಟ್​. ನಾನು ಯಾವತ್ತಿದ್ದರೂ ನೆಕ್ಸ್ಟ್. ಕಾರಣ, ಡಾ. ರಾಜ್‌ ಕುಮಾರ್‌  ಫ್ಯಾಮಿಲಿ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಕಲಾವಿದರ ಮಧ್ಯೆ ಸಮಸ್ಯೆಯಾದಾಗ ಅಂದಿನಿಂದಲೂ ಇಂದಿನವರೆಗೂ ಮೊದಲು ರಾಜ್​ಕುಮಾರ್ ಕುಟುಂಬದವರ ಬಳಿ ಸಂಧಾನ ಮಾಡುವುದು ವಾಡಿಕೆ.


ಇದನ್ನೂ ಓದಿ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸ್ಯಾಂಡಲ್ವುಡ್‌ ಪ್ರೇಮ್ & ಬಾಲಿವುಡ್ ಸಂಜಯ್ ದತ್..!


ಹೀಗಾಗಿ ಈ ವಿಚಾರವನ್ನು ಶಿವರಾಜ್​ಕುಮಾರ್ ತಿರ್ಮಾನಿಸಬೇಕು ರಾಜ್​ಕುಮಾರ್​ ಅವರ ಫ್ಯಾಮಿಲಿಯೇ ಹೆಡ್​ ಆಫೀಸ್​. ಅವರ ಹೆಸರು ಹೇಳಿದರೆ ಅರ್ಧ ಸಮಸ್ಯೆ ಪರಿಹಾರ ಆಗುತ್ತದೆ’ ಎಂದು ರವಿಚಂದ್ರನ್ ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.