Sudeep's Threat Letter:  ಕೆಲ ದಿನಗಳ ಹಿಂದೆ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರ ಬರೆದಿರುವ ಅನಾಮಿಕರು 2 ಪತ್ರಗಳ ಮೂಲ ಬೆದರಿಕೆ ಹಾಕಿದ್ದರು. ಈ ಕುರಿತಂತೆ ಸುದೀಪ್ ಅವರ ಆಪ್ತ ಜಾಕ್ ಮಂಜು ದೂರು ನೀಡಿದ್ದಾರೆ. ಜಾಕ್ ಮಂಜು ನೀಡಿದ ದೂರಿನನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿತ್ತು. ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಬಂದ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಚುರುಕಾಗಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ. ರಾಜಕೀಯ ಹಾಗೂ ಸಿನಿಮಾರಂಗ ಎರಡೂ ಆಯಾಮದಲ್ಲೂ ತನಿಖೆ ಬಿಗಿ ಗೊಳಿಸಿದ್ದಾರೆ. ಈ ನಡುವೆ ಸಿನಿಮಾರಂಗದ ಕೆಲ ವಿರೋಧಿಗಳ‌ ಜೊತೆ ಸೇರಿ ವ್ಯಕ್ತಿಯೋರ್ವ ಈ  ಕೃತ್ಯ ನಡೆಸಿರಬಹುದು ಎನ್ನುವ ಸಂದೇಹ ವ್ಯಕ್ತವಾಗಿದೆ. ಇದರ ಬೆನ್ನಲೇ  ಕಿಚ್ಚನಿಗೆ ಬೆದರಿಕೆ ಪತ್ರ ಪ್ರಕರಣದ ಹಿನ್ನಲೆ ಲೆಟರ್‌ ದೊಮ್ಮಲೂರಿನ ಪೋಸ್ಟ್‌ ಆಫೀಸ್​ನಿಂದ ಮಾಡಲಾದ ಬೆದರಿಕೆ ಪತ್ರಗಳು ಎಂದು ತಿಳಿದು  ಬಂದಿದೆ.  


ಇದನ್ನೂ ಓದಿ: KKR vs RCB : ಮೈದಾನದಲ್ಲಿ ಶಾರುಖ್ ಖಾನ್ - ವಿರಾಟ್‌ ಕೊಹ್ಲಿ ಡ್ಯಾನ್ಸ್‌.. ಎಲ್ಲೆಲ್ಲೂ ಇವರದ್ದೇ ಹವಾ!


ಲೆಟರ್ ಹಾಕಿದ ಪೋಸ್ಟ್ ಬಾಕ್ಸ್ ಬಳಿ ಇರೋ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗಿದೆ. ಪತ್ರ ಬರೆದ ವ್ಯಕ್ತಿಗಾಗಿ ಸಿಸಿಬಿ ಜಾಲಾಟ ನಡೆಸಲಾಗುತಿತ್ತು. ಬೆದರಿಕೆ ಪತ್ರದ ಒಂದೊಂದೆ ಸುಳಿವು ತನಿಖೆಗೆ ಸುಲಭ ಮಾರ್ಗಪಾಯ ಮಾಡಿಕೊಡುತ್ತಿದೆ.


ಇದನ್ನೂ ಓದಿ: Raveena Tandon: ಕೆ.ಜಿ.ಎಫ್ ಸಿನಿಮಾದ ಪ್ರಧಾನ ಮಂತ್ರಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ  


ಇದೀಗ ಅದರ ಬೆನ್ನಲೇ ಮತ್ತೊಂದು ಸುಳಿವು ಸಿಕ್ಕಿದೆ. ಸ್ವಿಫ್ಟ್ ಕಾರಿನಲ್ಲಿ ಬಂದು ಲೆಟರ್ ಪೋಸ್ಟ್‌ ಮಾಡಿರೋದು ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಸಿಕ್ಕ ನಂಬರ್ ಪ್ಲೇಟ್ ಕೆಂಗೇರಿ ಭಾಗದ ವ್ಯಕ್ತಿಗೆ ಸೇರಿದ್ದಾಗಿದೆ.  ತ‌ನಿಖೆಯಲ್ಲಿ ಕೇಸ್ ಗೂ ವ್ಯಕ್ತಿಗೂ ಸಂಬಂಧ ಇಲ್ಲ ಎಂಬುವುದು ತಳಿದೆ ಬಂದಿದೆ. ಸಿಸಿಬಿ ಸದ್ಯ ಆರೋಪಿಗಳ ಪತ್ತೆಗೆ ನಾನಾ ಕಸರತ್ತು ನಡೆಸುತ್ತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.