KKR vs RCB : ಮೈದಾನದಲ್ಲಿ ಶಾರುಖ್ ಖಾನ್ - ವಿರಾಟ್‌ ಕೊಹ್ಲಿ ಡ್ಯಾನ್ಸ್‌.. ಎಲ್ಲೆಲ್ಲೂ ಇವರದ್ದೇ ಹವಾ!

Shah Rukh Hugs Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವೆ ನಡೆದ ಈ ಪಂದ್ಯವನ್ನು ವಿಕ್ಷೀಸಲು ಬಂದ ಕೆಕೆಆರ್ ಮಾಲೀಕರಾದ  ಶಾರುಖ್ ಖಾನ್ ಗ್ರೌಂಡ್ ಲ್ಲಿ ಹೇಗೆ ನಡೆದುಕೊಂಡರು ನೀವೆ ನೋಡಿ... 

Written by - Zee Kannada News Desk | Last Updated : Apr 8, 2023, 05:34 PM IST
  • ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆದ ಜಿದ್ದಾಜಿದ್ದಿ
  • ಪಂದ್ಯ ವೀಕ್ಷಿಸಲು ಬಂದ ಕೆಕೆಆರ್ ಮಾಲೀಕ ಸೂಪರ್‌ಸ್ಟಾರ್ ಶಾರುಖ್ ಖಾನ್
  • ಪಠಾನ್ ಸಿನಿಮಾದ ಜೂಮೇ ಜೋ ಪಠಾನ್ ಹಾಡಿಗೆ ಹೆಜ್ಜೆ
KKR vs RCB : ಮೈದಾನದಲ್ಲಿ ಶಾರುಖ್ ಖಾನ್ - ವಿರಾಟ್‌ ಕೊಹ್ಲಿ ಡ್ಯಾನ್ಸ್‌.. ಎಲ್ಲೆಲ್ಲೂ ಇವರದ್ದೇ ಹವಾ! title=

IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವೆ ನಡೆದ ಈ ಪಂದ್ಯವನ್ನು ವಿಕ್ಷೀಸಲು ಬಂದ ಕೆಕೆಆರ್ ಮಾಲೀಕರಾದ  ಶಾರುಖ್ ಖಾನ್ ಗ್ರೌಂಡ್ ಲ್ಲಿ ವಿರಾಟ್‌ ಜೊತೆಗೆ ಇದ್ದ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. 

ಈ ಪಂದ್ಯವನ್ನು ವಿಕ್ಷೀಸಲು ಬಂದ  ಕೆಕೆಆರ್ ಮಾಲೀಕರಾದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿಮಾನಿಗಳತ್ತ ಕೈ ಬೀಸಿ ಎಲ್ಲರನ್ನು ಮಾತಾನಾಡಿಸುತ್ತಿದ್ದರು. ಹಾಗೆಯೇ ತಮ್ಮ ತಂಡ  ಜಿದ್ದಾ ಜಿದ್ದಿಯಲ್ಲಿ ಇದ್ದಿರಿಂದ  ಆತಂಕದ ನಡುವೆಯೂ ಎಲ್ಲರನ್ನು ಚಿಯರಪ್‌ ಮಾಡುತ್ತಿದ್ದರು. ಪಂದ್ಯ ಬಿಡುವಿನ ಮಧ್ಯದಲ್ಲಿ ಆಗಾಗ ಗ್ರೌಂಡ್‌ ಗೆ ಇಳಿದು ಅಭಿಮಾನಿಗಳತ್ತ ಕೈಬೀಸಿ ಫ್ಯಾನ್ಸ್‌ ಮುಖದಲ್ಲಿ ಮಂದಹಾಸ ಮೂಡಲು ಕಾರಣರಾಗಿದ್ದರು.

ಇದನ್ನೂ ಓದಿ: Pushpa The Rule: ಪುಷ್ಪ 2 ಹೊಸ ಪೋಸ್ಟರ್ ರಿಲೀಸ್‌.. ಅಲ್ಲು ಅರ್ಜುನ್ ಅವತಾರ ಕಂಡು ಹೀಗಂದ್ರು ಕ್ರಿಕೆಟಿಗ ವಾರ್ನರ್!

ಅದರ ನಡುವೆ RCB ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಕಾಲೆಯುತ್ತಿದ್ದರು. ತಮ್ಮ ತಂಡ ಕೆಕೆಆರ್ ಆಗಿದ್ದರೂ ತಮ್ಮ ಆರ್‌ಸಿಬಿ ತಂಡದ ಜೊತೆ ಅಷ್ಟೇ ಒಡನಾಟದಿಂದ ಇದ್ದರು.ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)  ನಡುವೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್  81 ರನ್‌ಗಳಿಂದ ಆರ್‌ಸಿಬಿ ಅನ್ನು ಸೋಲಿಸಿದೆ.

ಇದನ್ನೂ ಓದಿ: Allu Arju: ಅಲ್ಲು ಅರ್ಜುನ್‌ಗೆ ಸಿನಿಮಾ, ಬ್ಯುಸಿನೆಸ್‌ನಿಂದ ಕೋಟಿಗಟ್ಟಲೆ ಆದಾಯ! ಸೌತ್‌ ಸ್ಟಾರ್‌ ಐಷಾರಾಮಿ ಜೀವನ ಹೇಗಿದೆ ಗೊತ್ತಾ?

ಪಂದ್ಯ ಗೆದ್ದ ಖುಷಿಯಲ್ಲಿ  ತಂಡದ ಆಟಗಾರರಿಗೆ ಪ್ರೀತಿಯ ಆಪ್ಪುಗೆ ಸಂತಸ ವ್ಯಕ್ತ ಪಡಿಸಿದ್ದರು. ಅದರ ನಡುವೆ ಪಂದ್ಯದಲ್ಲಿ ಕೆಲವು ಅಂತರಗಳಿಂದ ಹಿನ್ನಡೆ ಕಂಡ ಆರ್‌ಸಿಬಿ ತಂಡದವರಿಗೂ ಪ್ರೀತಿಯ ಅಪ್ಪುಗೆ ನೀಡಿ ಬೆನ್ನುತಟ್ಟಿದರು. ಕೊನೆಯಲ್ಲಿ ವಿರಾಟ್ ಕೊಹ್ಲಿ 'ಪಠಾನ್ ಸಿನಿಮಾದ  ಜೂಮೇ ಜೋ ಪಠಾನ್ ಹಾಡಿಗೆ ಹೆಜ್ಜೆ ಹಾಕುವಂತೆ ಪ್ರೇರೆಪಿಸುತ್ತಿದ್ದರು. ಶಾರುಖ್ ಖಾನ್  ಆಗಾಗ ಕೊಹ್ಲಿಯನ್ನು  ಸ್ನೇಹಿತನಂತೆ ಎಲ್ಲರೆದು ಮುದ್ದಿಸುತ್ತಿದ್ದರು.  ಇವರ ದೃಶ್ಯವು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಶಾರುಖ್ ಹಾಗೂ ವಿರಾಟ್‌ ಅಭಿಮಾನಿಗಳು  ಪಂದ್ಯದ ಹಿನ್ನಡೆ ನಡೆವೆಯೂ ಶಾರುಖ್ ಮೆಚ್ಚುಗೆ ಸೂಚಿಸಿದ್ದಾರೆ. 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News