ಸುಧಾ ಮೂರ್ತಿ ಅವರಿಗೆ ಪ್ರಭಾಸ್ ಸಿನಿಮಾದ ಈ ಹಾಡು ತುಂಬಾ ಇಷ್ಟವಂತೆ!
Sudha Murthy favorite song : ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ತಮ್ಮ ಸರಳತೆಯಿಂದ ಮನ ಗೆಲ್ಲುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ, ಅವರು ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ.
Sudha Murthy favorite song : ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ತಮ್ಮ ಸರಳತೆಯಿಂದ ಮನ ಗೆಲ್ಲುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ, ಅವರು ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ವಿದೇಶಕ್ಕೆ ತನ್ನ ಆಹಾರವನ್ನು ಕೊಂಡೊಯ್ಯುವ ವಿಚಾರವಾಗಿ ಟ್ರೋಲ್ ಆಗಿದ್ದರು. ಸುಧಾ ಮೂರ್ತಿ ಇಂಟರ್ನೆಟ್ ಬಳಕೆದಾರರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ರಾಷ್ಟ್ರದಾದ್ಯಂತ ಮನೆಮಾತಾಗಿದ್ದಾರೆ.
ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ಹಾಡನ್ನು ಬಹಿರಂಗಪಡಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಸುಧಾ ಮೂರ್ತಿ ಅವರಿಗೆ ಇಷ್ಟವಾದ ಹಾಡಿನ ಬಗ್ಗೆ ಕೇಳಲಾಯಿತು. ತಕ್ಷಣ ಪ್ರತಿಕ್ರಿಯೆಯಾಗಿ, "ಮಿರ್ಚಿಯ ಸಿನಿಮಾದ ಇದೆದೋ ಬಾಗುಂದಿ" ಹಾಡು ತಮ್ಮ ನೆಚ್ಚಿನ ಸಾಂಗ್ ಎಂದು ಹೇಳಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಟನೆಯ ಮಿರ್ಚಿ ಸಿನಿಮಾ ಸಾಕಞ್ಟು ಹಿಟ್ ಆಗಿತ್ತು.
ಇದನ್ನೂ ಓದಿ: 'ಜೈಲರ್- 2 ಫಿಕ್ಸ್? ಡ್ರೀಮ್ ಪ್ರಾಜೆಕ್ಟ್ ಬಗ್ಗೆ ನೆಲ್ಸನ್ ಹೇಳಿದ್ದೇನು ಗೊತ್ತಾ..?
ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿರುವ ಮತ್ತು ರಾಮಜೋಗಯ್ಯ ಶಾಸ್ತ್ರಿ ಬರೆದಿರುವ ಈ ಹಾಡು 2013 ರಲ್ಲಿ ಬಿಡುಗಡೆಯಾದ ಮಿರ್ಚಿ ಚಿತ್ರ ಜನರ ಮನಗೆದ್ದಿತು. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ.
ಕಳೆದ ತಿಂಗಳು ಸುಧಾ ಮೂರ್ತಿ ಅವರು ತಮ್ಮ ಆಹಾರದ ಆದ್ಯತೆಯ ಬಗ್ಗೆ ಚರ್ಚಿಸಿ ವಿವಾದಕ್ಕೆ ಸಿಲುಕಿದ್ದರು. ಖಾನೆ ಮೇ ಕ್ಯಾ ಹೈ ಎಂಬ ಪಾಕಶಾಲೆಯ ಪ್ರದರ್ಶನದಲ್ಲಿ ಕಾಣಿಸಿಕೊಂಡಾಗ, "ನಾನು ಶುದ್ಧ ಸಸ್ಯಾಹಾರಿ. ಮೊಟ್ಟೆ, ಬೆಳ್ಳುಳ್ಳಿ ಕೂಡ ತಿನ್ನುವುದಿಲ್ಲ" ಎಂದು ಅವರು ಹೇಳಿದರು. "ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳು ಇಬ್ಬರೂ ಒಂದೇ ಚಮಚವನ್ನು ಬಳಸುತ್ತಾರೆ ಎಂದು ನನಗೆ ಭಯವಾಗಿದೆ. ಇದು ನನ್ನ ತಲೆಯಲ್ಲಿದೆ. ನಾನು ಹೊರಗೆ ಹೋದಾಗಲೆಲ್ಲ, ನಾನು ಸಸ್ಯಾಹಾರಿ ರೆಸ್ಟೋರೆಂಟ್‌ಗಳನ್ನು ಹುಡುಕುತ್ತೇನೆ ಅಥವಾ ನಾನು ಯಾವಾಗಲೂ ಒಂದು ಚೀಲದಲ್ಲಿ ತಿನ್ನುವ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತೇನೆ" ಎಂದಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು.
ಇದನ್ನೂ ಓದಿ: ಯಶ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಕೆಜಿಎಫ್ 3 ಶೂಟಿಂಗ್ ಬಗ್ಗೆ ಬಿಗ್ ಅಪ್‌ಡೇಟ್ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.