Jailer : 'ಜೈಲರ್- 2 ಫಿಕ್ಸ್? ಡ್ರೀಮ್ ಪ್ರಾಜೆಕ್ಟ್ ಬಗ್ಗೆ ನೆಲ್ಸನ್ ಹೇಳಿದ್ದೇನು ಗೊತ್ತಾ..?

Jailer Part 2 : 'ಬೀಸ್ಟ್' ಸಿನಿಮಾದಿಂದ ಸೋಲಿನ ಸುಳಿಯಲ್ಲಿ ಸಿಲುಕಿದ್ದ ನೆಲ್ಸನ್‌ ಸದ್ಯ ಜೈಲರ್‌ನಿಂದ ಆರ್ಭಟ ಶುರುಮಾಡಿದ್ದಾರೆ. ರಾತೋರಾತ್ರಿ ಸ್ಟಾರ್‌ ಡೈರೆಕ್ಟರ್‌ ಪಟ್ಟಕ್ಕೆ ಏರಿದ ನೆಲ್ಸನ್ ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ ಏನಪ್ಪಾ ಅದು ಅಂತೀರಾ ಮುಂದೆ ಓದಿ...  

Written by - Savita M B | Last Updated : Aug 14, 2023, 05:48 PM IST
  • ಸನ್‌ ಪಿಕ್ಚರ್ಸ್ ಸಂಸ್ಥೆಯ ನಿರ್ಮಾಣದಡಿಯಲ್ಲಿ ಮೂಡಿಬಂದ ಮಾಸ್ ಎಂಟರ್‌ಟೈನರ್ 'ಜೈಲರ್‌'
  • ಸಿನಿಮಾ ಬರೀ 4 ದಿನಕ್ಕೆ ಸಿನಿಮಾ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
  • ಸದ್ಯ ನೆಲ್ಸನ್‌ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ್ದಾರೆ
Jailer : 'ಜೈಲರ್- 2 ಫಿಕ್ಸ್? ಡ್ರೀಮ್ ಪ್ರಾಜೆಕ್ಟ್ ಬಗ್ಗೆ ನೆಲ್ಸನ್ ಹೇಳಿದ್ದೇನು ಗೊತ್ತಾ..?  title=

Jailer : ಜೈಲರ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಘರ್ಜಿಸುತ್ತಿರುವುದು ಗೊತ್ತೆಯಿದೆ. ಸನ್‌ ಪಿಕ್ಚರ್ಸ್ ಸಂಸ್ಥೆಯ ನಿರ್ಮಾಣದಡಿಯಲ್ಲಿ ಮೂಡಿಬಂದ ಮಾಸ್ ಎಂಟರ್‌ಟೈನರ್ 'ಜೈಲರ್‌' ರಜನಿಕಾಂತ್‌ ಲೆವೆಲ್‌ಗೆ ಹೇಳಿ ಮಾಡಿಸಿದ ಸಿನಿಮಾ. ಹೌದು ಈ ಸಿನಿಮಾ ಬರೀ 4 ದಿನಕ್ಕೆ ಸಿನಿಮಾ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 

ಇನ್ನು ಈ ಚಿತ್ರದ ಪ್ರತಿ ಪಾತ್ರವನ್ನು ಪ್ರೇಕ್ಷಕರು ಎಂಜಾಯ್‌ ಮಾಡುತ್ತಿದ್ದಾರೆ. ಹೌದು ಜೈಲರ್‌ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅವರು ಕ್ಷಣ ಹೊತ್ತು ತೆರೆಮೇಲೆ  ಬಂದು ಹೋಗುವ ಸೀನ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಹಿಂದೆಂದೂ ಶಿವಣ್ಣನ ಸಿನಿಮಾಗಳನ್ನು ನೋಡಿರದ ತಮಿಳಿಗರು ಇದೀಗ ಅವರ ಸಿನಿಮಾಗಳನ್ನು ಮಿಸ್‌ ಮಾಡದೇ ನೋಡ್ತೀವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ-'ಡಿ 51' ಚಿತ್ರದಲ್ಲಿ ಕಿರಿಕ್‌ ಬೆಡಗಿ...ಧನುಷ್​ ಜತೆ ರೊಮ್ಯಾನ್ಸ್ ಮಾಡಲಿರುವ ರಶ್ಮಿಕಾ ಮಂದಣ್ಣ!

ಇನ್ನು ನಿರ್ದೇಶಕ ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸಿದ ನೆಲ್ಸನ್‌ ಜೈಲರ್‌ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಬಾಕ್ಸಾಫೀಸ್ ವಿಶ್ಲೇಷಕ ಮನೋಬಲ ಟ್ವೀಟ್ ಮಾಡಿದ್ದಾರೆ. "ಜೈಲರ್‌2 ಸಿನಿಮಾ ಮಾಡುವ ಪ್ಲ್ಯಾನ್‌ ಕೂಡಾ ಇದೆ. 

ಅಲ್ಲದೇ ನಯನತಾರಾ ಜೊತೆಗಿನ 'ಕೊಲಮಾವು ಕೋಕಿಲ', ಶಿವ ಕಾರ್ತಿಕೇಯ ಅವರ 'ಡಾಕ್ಟರ್' ಮತ್ತು ವಿಜಯ್ ದಳಪತಿ ಜೊತೆ 'ಬೀಸ್ಟ್' ಚಿತ್ರಗಳ ಮುಂದಿನ ಭಾಗಗಳನ್ನು ಮಾಡುವ ಆಲೋಚನೆಯೂ ಇದೆ. 

ಇನ್ನು ಇದೇ ವೇಳೆ ನೆಲ್ಸನ್‌ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ದಳಪತಿ ವಿಜಯ್ ಇಬ್ಬರನ್ನು ಒಂದೇ ಚಿತ್ರದಲ್ಲಿ ನಿರ್ದೇಶನ ಮಾಡುವ ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಗ್ಗೆಯೂ ಮಾತನಾಡಿದ್ದಾರೆ. ಈ ಇಬ್ಬರು ಸ್ಟಾರ್‌ ನಟರಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕರು ಇದೀಗ ಇಬ್ಬರನ್ನು ಸೇರಿಸಿ ಸಿನಿಮಾ ಮಾಡುವ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ-ಧನ್ವೀರ್ ʼವಾಮನʼ ಚಿತ್ರದ ಆಕ್ಷನ್ ಟೀಸರ್ ರಿಲೀಸ್‌ಗೆ ಡೇಟ್‌ ಆಂಡ್‌ ಪ್ಲೇಸ್‌ ಫಿಕ್ಸ್‌..! ಎಲ್ಲಿ ಗೊತ್ತ...?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News