ಅಂದು ಸುಹಾಸಿನಿಗೂ ಎದುರಾಗಿತ್ತು ಈ ಸಮಸ್ಯೆ.. ನಾಯಕನ ತೊಡೆ ಮೇಲೆ ಕೂರಲು ಹೇಳಿದ್ರಂತೆ ಡೈರೆಕ್ಟರ್!
Suhasini Maniratnam : ನಾಯಕನ ಮಡಿಲಲ್ಲಿ ಕುಳಿತು ಅವನು ತಿನ್ನುತ್ತಿದ್ದ ಅದೇ ಐಸ್ ಕ್ರೀಂ ಅನ್ನು ತಿನ್ನಲು ಡೈರೆಕ್ಟರ್ ಸುಹಾಸಿನಿಗೆ ಹೇಳಿದ್ರಂತೆ ಈ ವಿಚಾರವನ್ನ ಅವರು ನೆನಪಿಸಿಕೊಂಡಿದ್ದಾರೆ.
Actress Suhasini Maniratnam : ತಮಿಳಿನ ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಪತ್ನಿ ನಟಿ ಸುಹಾಸಿನಿ ಮಣಿರತ್ನಂ ಅವರು ಇತ್ತೀಚೆಗೆ ಒಂದು ದೃಶ್ಯವನ್ನು ಮಾಡಲು ನಿರಾಕರಿಸಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಟನಾ ಜೀವನದ ಆರಂಭಿಕ ದಿನಗಳಲ್ಲಿ ಸುಹಾಸಿನಿ ಹಲವು ಸವಾಲುಗಳನ್ನು ಎದುರಿಸಿದರು. ಈ ಬಗ್ಗೆ ಅವರು ಹಂಚಿಕೊಂಡಿದ್ದಾರೆ.
ನಾಯಕನ ಮಡಿಲಲ್ಲಿ ಕುಳಿತು ಅವನು ತಿನ್ನುತ್ತಿದ್ದ ಅದೇ ಐಸ್ ಕ್ರೀಂ ಅನ್ನು ತಿನ್ನಲು ಡೈರೆಕ್ಟರ್ ಸುಹಾಸಿನಿಗೆ ಹೇಳಿದ್ರಂತೆ ಈ ವಿಚಾರವನ್ನ ಅವರು ನೆನಪಿಸಿಕೊಂಡಿದ್ದಾರೆ. ಸುಹಾಸಿನಿ ತಮ್ಮ ಅನುಭವದ ಬಗ್ಗೆ ಹೇಳಿದರು. ನನಗೆ ನಾಯಕನ ಮಡಿಲಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ನಿರಾಕರಿಸಿದೆ. ಒಂದು ಉದ್ಯಾನವನದಲ್ಲಿ ಈ ಚಿತ್ರೀಕರಣ ನಡೆದಿತ್ತು. ಭಾರತದಲ್ಲಿ 1981 ರಲ್ಲಿ ಯಾವುದೇ ಮಹಿಳೆ ಉದ್ಯಾನವನದಲ್ಲಿ ಪುರುಷನ ಮಡಿಲಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಹಾಗಾಗಿ ನಾನು ಕುಳಿತುಕೊಳ್ಳುವುದಿಲ್ಲ ಎಂದೆ ಎಂದು ಹೇಳಿದರು.
ಇದನ್ನೂ ಓದಿ: ʼಟಗರು ಪಲ್ಯʼ ಪ್ರಮೋಷನಲ್ ಸಾಂಗ್ ಔಟ್..! ಡಾಲಿ ಲಿರಿಕ್ಸ್... ಪ್ರೇಮ್ ವಾಯ್ಸ್ ಚಿಂದಿ ಗುರು
ಅಲ್ಲಿ ಅವನು ಐಸ್ ಕ್ರೀಂ ತಿನ್ನುತ್ತಿದ್ದನು ಮತ್ತು ಅವನು ನನಗೆ ತಿನ್ನಿಸಬೇಕಿತ್ತು. ಅದಕ್ಕೆ ನಾನು ಇಲ್ಲ ಎಂದು ಹೇಳಿದೆ. ನಾನು ಅದೇ ಐಸ್ ಕ್ರೀಮ್ ತಿನ್ನುವುದಿಲ್ಲ. ದೃಶ್ಯವನ್ನು ಬದಲಾಯಿಸಿ, ನನಗೆ ಇನ್ನೊಂದು ಐಸ್ ಕ್ರೀಮ್ ಅನ್ನು ತಂದುಕೊಡಿ ಎಂದು ಹೇಳಿದೆ. ಅದಕ್ಕೆ ನನ್ನ ನೃತ್ಯ ನಿರ್ದೇಶಕರು ಆಶ್ಚರ್ಯಚಕಿತರಾದರು ಎಂದು ಸುಹಾಸಿನಿ ಹೇಳಿದರು.
ಇಂತಹ ಯುದ್ಧಗಳಲ್ಲಿ ಏಕಾಂಗಿಯಾಗಿ ಹೋರಾಡುವುದು ಕಷ್ಟಕರವಾದ ಕಾರಣ ನಾನು ಸೆಟ್‌ನಲ್ಲಿ ನನ್ನ ಪರವಾಗಿ ಇರುವವರನ್ನು ಕಂಡುಕೊಳ್ಳುತ್ತಿದ್ದೆ ಎಂದು ಸುಹಾಸಿನಿ ಹೇಳಿದರು.
ತನ್ನ ಸಹೋದ್ಯೋಗಿ ಶೋಭನಾ ಅವರಿಗೂ ಇದೇ ರೀತಿಯ ಅನುಭವವಾಗಿದೆ ಎಂದು ಸುಹಾಸಿನಿ ಹಂಚಿಕೊಂಡಿದ್ದಾರೆ. ಮಲಯಾಳಂ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶೋಭನಾ ಅವರು ಒಂದು ದೃಶ್ಯವನ್ನು ಮಾಡಲು ನಿರಾಕರಿಸಿದಾಗ ಸುಹಾಸಿನಿಯಂತೆ ಏಕೆ ವರ್ತಿಸುತ್ತಿದ್ದೀರಿ ಎಂದು ಕೇಳಲಾಯಿತು. ಅದು ನನಗೆ ಇನ್ನೂ ನೆನಪಿದೆ.
ತಾನು ಶೂಟ್ ಮಾಡಲು ಉದ್ದೇಶಿಸಿರುವ ಹಾಡಿನ ಸಾಹಿತ್ಯವನ್ನು ಕೇಳಿದ ನಂತರ ಒಮ್ಮೆ ಕಾರಿನಿಂದ ಇಳಿಯಲು ನಿರಾಕರಿಸಿದ್ದಾಗಿ ಸುಹಾಸಿನಿ ಹಂಚಿಕೊಂಡಿದ್ದಾರೆ. ಸಿನಿಮಾ ಸೆಟ್‌ನಲ್ಲಿ ಯಾರಿಗೂ ಏನನ್ನೂ ನಿರಾಕರಿಸುವುದು ಆ ದಿನಗಳಲ್ಲಿ ಸುಲಭದ್ದಾಗಿರಲಿಲ್ಲ ಎಂದು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಖ್ಯಾತ ನಟ ಅಜಿತ್ ಮನೆ ಕೆಡವಿದ ಸರ್ಕಾರಿ ಅಧಿಕಾರಿಗಳು..? ಕಾರಣ ಏನ್ ಗೊತ್ತೆ..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.