ಖ್ಯಾತ ನಟ ಅಜಿತ್ ಮನೆ ಕೆಡವಿದ ಸರ್ಕಾರಿ ಅಧಿಕಾರಿಗಳು..? ಕಾರಣ ಏನ್‌ ಗೊತ್ತೆ..?

Actor Ajith Kumar : ಚೆನ್ನೈನಲ್ಲಿ ನಟ ಅಜಿತ್ ಅವರ ಮನೆಯ ಒಂದು ಭಾಗವನ್ನು ಸರ್ಕಾರಿ ಅಧಿಕಾರಿಗಳು ಕೆಡವಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ನಿಜವಾಗಿಯೂ ನಡೆದ ಘಟನೆ ಏನು, ಎತಕ್ಕಾಗಿ ಮನೆ ಕೆಡವಲಾಯಿತು ಎಂಬ ವಿವರ ಇಲ್ಲಿದೆ ನೋಡಿ..

1 /7

ಅಜಿತ್‌ ಕುಮಾರ್‌ ಟಾಲಿವುಡ್‌ ಚಿತ್ರರಂಗದ ಖ್ಯಾತ ನಟ, ಯಾವುದೇ ಪ್ಯಾನ್‌ ಇಂಡಿಯಾ ಮೂವಿ ಮಾಡಿಲ್ಲವೆಂದರೂ ನಟ ದೇಶಾದ್ಯಂತ ಚಿರಪರಿಚಿತರಾಗಿದ್ದಾರೆ.

2 /7

ಪ್ರಸ್ತುತ ಅಜಿತ್ ಅಜೆರ್ಬೈಜಾನ್‌ನಲ್ಲಿ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಮತ್ತು ರಾಜೇಶ್ ತಿರುಮೇನಿ ನಿರ್ದೇಶನದ 'ವಿಡಸಾಲಿ' ಚಿತ್ರೀಕರಣದಲ್ಲಿದ್ದಾರೆ.   

3 /7

ಅಜಿತ್ ಕುಮಾರ್, ಅವರ ಪತ್ನಿ ಶಾಲಿನಿ ಮತ್ತು ಮಕ್ಕಳಾದ ಅನುಷ್ಕಾ ಮತ್ತು ಆದ್ವಿಕ್ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಈಂಚಂಬಾಕ್ಕಂನಲ್ಲಿ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ.  

4 /7

ಕಳೆದ ಕೆಲವು ತಿಂಗಳಿಂದ ಈ ಭಾಗದಲ್ಲಿ ರಸ್ತೆ ಅಗಲೀಕರಣ ಹಾಗೂ ಮಳೆ ನೀರು ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿದ್ದ ಖಾಸಗಿ ಒಡೆತನದ ಕಟ್ಟಡಗಳ ಭಾಗಗಳನ್ನು ಕೆಡವಲಾಗುತ್ತಿದೆ.  

5 /7

ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಇಲಾಖೆ ಈ ಕಾಮಗಾರಿಗಳನ್ನು ನಡೆಸುತ್ತಿದ್ದರೆ, ಸದ್ಯ ನಟ ಅಜಿತ್ ಕುಮಾರ್ ವಾಸವಿರುವ ಮನೆಯ ಮುಂಭಾಗದ ಗೇಟ್ ಹಾಗೂ ಸುತ್ತಲಿನ ಗೋಡೆಯನ್ನು ಕೆಡವಲಾಗಿದೆ.  

6 /7

ಅಜಿತ್‌ಕುಮಾರ್ ಅವರ ಮನೆಯ ಒಂದು ಭಾಗ ಮಾತ್ರವಲ್ಲದೆ ಆ ಪ್ರದೇಶದಲ್ಲಿದ್ದ 50 ಮನೆಗಳನ್ನು ಅಧಿಕಾರಿಗಳು ನಾಲ್ಕು ಕಿಲೋಮೀಟರ್ ದೂರದವರೆಗೆ ನೆಲಸಮಗೊಳಿಸಿದ್ದಾರೆ ಎಂದು ವರದಿಯಾಗಿದೆ. 

7 /7

ಕೆಲವೇ ವಾರಗಳಲ್ಲಿ ಅಜಿತ್‌ ಮನೆಯ ಹತ್ತಿರ ನಡೆಯುತ್ತಿರುವ ರಸ್ತೆ ಅಗಲೀಕರಣ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.