Ambareesh Birthday: `ಹ್ಯಾಪಿ ಬರ್ತ್ ಡೇ ಮೈ ಅಂಬಿ..` ಭಾವುಕ ಪೋಸ್ಟ್ ಹಾಕಿದ ಸುಮಲತಾ ಅಂಬರೀಷ್
Sumalatha Post On Ambareesh Birthday: ಅಂಬಿಯನ್ನ ಸುಮಲತಾ ತುಂಬಾ ಮಿಸ್ ಮಾಡಿಕೊಳ್ಳೋದ್ರ ಬಗ್ಗೆ ಸಾಕಷ್ಟು ಬಾರೀ ಹೇಳಿಕೊಂಡಿದ್ದರು. ಅಂಬರೀಷ್ ಹುಟ್ಟುಹಬ್ಬಕ್ಕೆ ಪತ್ನಿ ಸುಮಲತಾ ಭಾವುಕ ಪೋಸ್ಟ್ ಹಾಕಿದ್ದಾರೆ.
Sumalatha Post On Ambareesh Birthday: ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ಈ ವಿಶೇಷ ದಿನದಂದು ಕುಟುಂಬದವರು, ಸೆಲೆಬ್ರಿಟಿಗಳು, ಫ್ಯಾನ್ಸ್ ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಂಬರೀಷ್ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗುತ್ತಿದೆ.
'ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು. ಹಾಗಾಗಿ ನಿಮ್ಮ ಹುಟ್ಟು ಹಬ್ಬ ಅದೊಂದು ಸಡಗರವಾಗಿರುತ್ತಿತ್ತು. ಅದು ನಮಗಷ್ಟೇ ಅಲ್ಲ, ಅಭಿಮಾನಿಗಳ ಪಾಲಿಗೆ ನಿಜವಾದ ಹಬ್ಬ. ಭೌತಿಕವಾಗಿ ನಮ್ಮೊಂದಿಗೆ ನೀವು ಇದ್ದಿದ್ದರೆ, ಇಂದು 71ನೇ ವರ್ಷದ ಹುಟ್ಟು ಹಬ್ಬವನ್ನೂ ಅಭಿಮಾನಿಗಳ ಜೊತೆಯಾಗಿ ಮತ್ತಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದೆವು’ ಎಂದು ಪತ್ರ ಆರಂಭಿಸಿದ್ದಾರೆ ಸುಮಲತಾ.
ಇದನ್ನೂ ಓದಿ: ದೃಶ್ಯಂ 2 ಅತ್ಯುತ್ತಮ ಚಿತ್ರ, ಹೃತಿಕ್ ಅತ್ಯುತ್ತಮ ನಟ.. ಆಲಿಯಾ ಅತ್ಯುತ್ತಮ ನಟಿ.. ಇಲ್ಲಿದೆ ವಿನ್ನರ್ಸ್ ಕಂಪ್ಲೀಟ್ ಲಿಸ್ಟ್!
ಮನೆ ಮುಂದೆ ಜನಸಾಗರ, ನಿಮ್ಮ ಆರ್ಭಟ, ಹಾಸ್ಯ ಪ್ರಜ್ಞೆಯ ಮಾತು, ರಾತ್ರಿ ಇಡೀ ಕಾಯುತ್ತಾ ನಿಂತಿದ್ದ ಅಭಿಮಾನಿಗಳ ಘೋಷಣೆ ಇನ್ನೂ ಹಾಗೆಯೇ ಇದೆ. ಇವತ್ತೂ ಅವೆಲ್ಲವೂ ನಿಮಗೆ ಶುಭಾಶಯ ಹೇಳುತ್ತಿವೆ. ಹ್ಯಾಪಿ ಬರ್ತಡೇ ಮೈ ಅಂಬಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ’ ಎಂದು ಸುಮಲತಾ ಬರೆದುಕೊಂಡಿದ್ದಾರೆ.
ಅಂಬಿಯನ್ನ ಸುಮಲತಾ ತುಂಬಾ ಮಿಸ್ ಮಾಡಿಕೊಳ್ಳೋದ್ರ ಬಗ್ಗೆ ಸಾಕಷ್ಟು ಬಾರೀ ಹೇಳಿಕೊಂಡಿದ್ದರು. ಜೊತೆಗೆ ಆ ನೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಕೂಡ ಮಾಡುತ್ತಿದ್ದರು. ಇಂದು ಅಂಬಿಯ 71ನೇ ಹುಟ್ಟುಹಬ್ಬದ ಪ್ರಯುಕ್ತ ಪತಿಯನ್ನ ಮತ್ತು ಹುಟ್ಟುಹಬ್ಬದ ದಿನದ ಸಂಭ್ರಮ ಹೇಗಿರುತ್ತಿತ್ತು ಅನ್ನೋದನ್ನ ಭಾವುಕವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಟ್ಟೆ ಇಲ್ಲದೆ ಬೆಡ್ ಮೇಲೆ ಮಲಗಿರುವ ಅರ್ಜುನ್ ಕಪೂರ್ ಫೋಟೋ ಶೇರ್ ಮಾಡಿದ ಮಲೈಕಾ ಅರೋರಾ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.