IIFA 2023 Winners: ದೃಶ್ಯಂ 2 ಅತ್ಯುತ್ತಮ ಚಿತ್ರ, ಹೃತಿಕ್ ಅತ್ಯುತ್ತಮ ನಟ.. ಆಲಿಯಾ ಅತ್ಯುತ್ತಮ ನಟಿ.. ಇಲ್ಲಿದೆ ವಿನ್ನರ್ಸ್‌ ಕಂಪ್ಲೀಟ್‌ ಲಿಸ್ಟ್‌!

IIFA 2023 Winners: ಅತ್ಯುತ್ತಮ ನಟ ಪ್ರಶಸ್ತಿಯನ್ನು ಹೃತಿಕ್ ರೋಷನ್ ಗೆದ್ದಿದ್ದು, ದೃಶ್ಯಂ 2 ಅತ್ಯುತ್ತಮ ಚಿತ್ರ ಅವಾರ್ಡ್‌ ಗೆದ್ದು ಬೀಗಿದೆ. ಬ್ರಹ್ಮಾಸ್ತ್ರ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ. ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.  

Written by - Chetana Devarmani | Last Updated : May 28, 2023, 02:12 PM IST
  • ದೃಶ್ಯಂ 2 ಅತ್ಯುತ್ತಮ ಚಿತ್ರ
  • ಹೃತಿಕ್ ಅತ್ಯುತ್ತಮ ನಟ.. ಆಲಿಯಾ ಅತ್ಯುತ್ತಮ ನಟಿ
  • ಇಲ್ಲಿದೆ IIFA 2023 ವಿನ್ನರ್ಸ್‌ ಕಂಪ್ಲೀಟ್‌ ಲಿಸ್ಟ್‌!
IIFA 2023 Winners: ದೃಶ್ಯಂ 2 ಅತ್ಯುತ್ತಮ ಚಿತ್ರ, ಹೃತಿಕ್ ಅತ್ಯುತ್ತಮ ನಟ.. ಆಲಿಯಾ ಅತ್ಯುತ್ತಮ ನಟಿ.. ಇಲ್ಲಿದೆ ವಿನ್ನರ್ಸ್‌ ಕಂಪ್ಲೀಟ್‌ ಲಿಸ್ಟ್‌!  title=
IIFA 2023

IIFA Awards 2023 Winners List: IIFA ಅವಾರ್ಡ್ಸ್ 2023 ಶನಿವಾರ ರಾತ್ರಿ ಅಬುಧಾಬಿಯಲ್ಲಿ ನಡೆಯಿತು ಮತ್ತು ದೃಶ್ಯಂ 2, ಬ್ರಹ್ಮಾಸ್ತ್ರ ಮತ್ತು ಗಂಗೂಬಾಯಿ ಕಥಿಯಾವಾಡಿಯಂತಹ ಚಲನಚಿತ್ರಗಳು ಪ್ರಶಸ್ತಿ ಗೆದ್ದವು. ಅಜಯ್ ದೇವಗನ್ ಅವರ ದೃಶ್ಯಂ 2 ಈ ವರ್ಷ IIFA ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿಕ್ರಮ್ ವೇದಾದಲ್ಲಿನ ಅಭಿನಯಕ್ಕಾಗಿ ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅಲ್ಲದೇ, ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿವಾಡಿ ಚಿತ್ರದಲ್ಲಿನ ಅಭಿನಯಕ್ಕಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. 

ಅತ್ಯುತ್ತಮ ನಟಿ ಪ್ರಶಸ್ತಿಯ ಜೊತೆಗೆ, ಗಂಗೂಬಾಯಿ ಕಥಿಯಾವಾಡಿ ಇನ್ನೂ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. ಬ್ರಹ್ಮಾಸ್ತ್ರ IIFA ನಲ್ಲಿ ಸಂಗೀತ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅತ್ಯುತ್ತಮ ಗಾಯಕ ಪುರುಷ ಮತ್ತು ಮಹಿಳೆ - ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರೀತಮ್. ರಾಕೆಟ್ರಿ ಸಿನಿಮಗಾಗಿ ಆರ್ ಮಾಧವನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.

ಇದನ್ನೂ ಓದಿ: ಕಾನ್ಸ್‌ನಲ್ಲಿ ‘ಅತ್ಯುತ್ತಮ ಭಾರತೀಯ ಚಿತ್ರ’ ಪ್ರಶಸ್ತಿ ಗೆದ್ದ ಸಮಂತಾ ನಟನೆಯ ಶಾಕುಂತಲಂ

 IIFA 2023 ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ : 

ಅತ್ಯುತ್ತಮ ಚಿತ್ರ: ದೃಶ್ಯಂ 2

ಅತ್ಯುತ್ತಮ ನಿರ್ದೇಶಕ: ಆರ್ ಮಾಧವನ್ ರಾಕೆಟ್ರಿ 

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಮಹಿಳೆ): ಗಂಗೂಬಾಯಿ ಕಥಿಯಾವಾಡಿಗಾಗಿ ಆಲಿಯಾ ಭಟ್

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ): ವಿಕ್ರಮ್ ವೇದಕ್ಕಾಗಿ ಹೃತಿಕ್ ರೋಷನ್

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಮಹಿಳೆ): ಬ್ರಹ್ಮಾಸ್ತ್ರಕ್ಕಾಗಿ ಮೌನಿ ರಾಯ್ 

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ): ಜಗ್ ಜಗ್ ಜೀಯೋಗಾಗಿ ಅನಿಲ್ ಕಪೂರ್

ಸಿನಿಮಾದಲ್ಲಿ ಫ್ಯಾಷನ್‌ಗಾಗಿ ಅತ್ಯುತ್ತಮ ಸಾಧನೆ: ಮನೀಶ್ ಮಲ್ಹೋತ್ರಾ

ಇದನ್ನೂ ಓದಿ:  ನೇರಳೆ ಬಣ್ಣದ ಸೀರೆಯಲ್ಲಿ ಚುಟು ಚುಟು ಬ್ಯೂಟಿ

ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ: ಕಮಲ್ ಹಾಸನ್

ಅತ್ಯುತ್ತಮ ಅಳವಡಿಕೆ ಕಥೆ: ದೃಶ್ಯಂ 2 ಗಾಗಿ ಆಮಿಲ್ ಕೀಯಾನ್ ಖಾನ್ ಮತ್ತು ಅಭಿಷೇಕ್ ಪಾಠಕ್ 

ಅತ್ಯುತ್ತಮ ಮೂಲ ಕಥೆ: ಡಾರ್ಲಿಂಗ್ಸ್‌ಗಾಗಿ ಪರ್ವೀಜ್ ಶೇಖ್ ಮತ್ತು ಜಸ್ಮೀತ್ ರೀನ್

ಪ್ರಾದೇಶಿಕ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ: ರಿತೇಶ್ ದೇಶಮುಖ್ ನಿರ್ದೇಶನದ ಮರಾಠಿ ಚಲನಚಿತ್ರ ವೇದ್

ಅತ್ಯುತ್ತಮ ಚೊಚ್ಚಲ (ಪುರುಷ): ಗಂಗೂಬಾಯಿ ಕಥಿವಾಡಿಗಾಗಿ ಶಾಂತನು ಮಹೇಶ್ವರಿ ಮತ್ತು ಕ್ಲಾಗಾಗಿ ಬಾಬಿಲ್ ಖಾನ್

ಅತ್ಯುತ್ತಮ ಚೊಚ್ಚಲ (ಮಹಿಳೆ): ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್

ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ): ಬ್ರಹ್ಮಾಸ್ತ್ರದ ರಾಸಿಯಾ ಹಾಡಿಗೆ ಶ್ರೇಯಾ ಘೋಷಾಲ್

ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ): ಬ್ರಹ್ಮಾಸ್ತ್ರದ ಕೇಸರಿಯಾ ಹಾಡಿಗೆ ಅರಿಜಿತ್ ಸಿಂಗ್ 

ಅತ್ಯುತ್ತಮ ಸಂಗೀತ ನಿರ್ದೇಶನ: ಬ್ರಹ್ಮಾಸ್ತ್ರಕ್ಕಾಗಿ ಪ್ರೀತಮ್ 

ಇದನ್ನೂ ಓದಿ:  ಸಾರಾ ಅಲಿ ಖಾನ್​ ​- ಶುಭ್​ಮನ್ ಗಿಲ್​ ಬ್ರೇಕಪ್‌? ಸಂಬಂಧ ಮುರಿದುಬಿದ್ದಿರುವುದಕ್ಕೆ ಇಲ್ಲಿದೆ ಸಾಕ್ಷಿ!!

ಅತ್ಯುತ್ತಮ ಗೀತರಚನೆಕಾರ: ಬ್ರಹ್ಮಾಸ್ತ್ರದ ಕೇಸರಿಯಾ ಹಾಡಿಗೆ ಅಮಿತಾಭ್ ಭಟ್ಟಾಚಾರ್ಯ 

ಅತ್ಯುತ್ತಮ ಛಾಯಾಗ್ರಹಣ: ಗಂಗೂಬಾಯಿ ಕಥಿಯಾವಾಡಿ

ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಥಿಯಾವಾಡಿ

ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಥಿಯಾವಾಡಿ

ಶೀರ್ಷಿಕೆ ಗೀತೆಗಾಗಿ ಅತ್ಯುತ್ತಮ ನೃತ್ಯ ಸಂಯೋಜನೆ: ಭೂಲ್ ಭುಲೈಯಾ 2

ಅತ್ಯುತ್ತಮ ಧ್ವನಿ ವಿನ್ಯಾಸ: ಭೂಲ್ ಭುಲೈಯಾ 2

ಅತ್ಯುತ್ತಮ ಸಂಕಲನ: ದೃಶ್ಯಂ 2

ಅತ್ಯುತ್ತಮ ಸ್ಪೆಷಲ್‌ ಎಫೆಕ್ಟ್‌ (ದೃಶ್ಯ): ಬ್ರಹ್ಮಾಸ್ತ್ರ: ಭಾಗ ಒಂದು - ಶಿವ

ಅತ್ಯುತ್ತಮ ಹಿನ್ನೆಲೆ ಸಂಗೀತ: ವಿಕ್ರಮ್ ವೇದಾ

ಅತ್ಯುತ್ತಮ ಧ್ವನಿ ಮಿಶ್ರಣ: ಓ ಮೈ ಡಾರ್ಲಿಂಗ್ ಗಾಗಿ ಮೋನಿಕಾ 

ಇದನ್ನೂ ಓದಿ: Cannes 2023: ಆಫ್ ಶೋಲ್ಡರ್ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಅನುಷ್ಕಾ ಶರ್ಮಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News