ಬೆಂಗಳೂರು: ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅವರ ಬಯೋಪಿಕ್‌ ತೆರೆ ಮೇಲೆ ಬರಲಿದೆಯೇ? ಅವರ ಸಿನಿಮಾ ಹಾಗೂ ರಾಜಕೀಯ ಪ್ರವೇಶದ ಸುತ್ತ ವೆಬ್‌ ಸರಣಿ ರೂಪಗೊಳ್ಳುತ್ತಿದೆಯೇ? ತೆರೆ ಮೇಲೂ ಸುಮಲತಾ ಹಾಗೂ ನಿಖಿಲ್‌ ಕುಮಾರ್‌ ಮುಖಾಮುಖಿ ಆಗಲಿದ್ದಾರೆಯೇ?


COMMERCIAL BREAK
SCROLL TO CONTINUE READING

ಮೇಲಿನ ಈ ಮೂರು ಪ್ರಶ್ನೆಗಳು ಸದ್ಯ ಗಾಂಧಿನಗರದಲ್ಲಿ ತಣ್ಣಗೆ ಸದ್ದು ಮಾಡಲಾರಂಭಿಸಿವೆ. ಇದಕ್ಕೆ ಕಾರಣ ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ(Guru Deshpande) ಅವರು ಸುಮಲತಾ ಅವರನ್ನು ಭೇಟಿ ಮಾಡಿರುವುದು. ತಮ್ಮ ನಿರ್ದೇಶನದ ತಂಡದ ಜತೆಗೆ ಇತ್ತೀಚೆಗೆ ಗುರು ದೇಶಪಾಂಡೆ ಅವರು ಸುಮಲತಾ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ.


Alia Bhatt : ರಣಥಂಬೋರ್ ನಲ್ಲಿ ರಣಬೀರ್ – ಆಲಿಯಾ ನಿಶ್ಚಿತಾರ್ಥ..? ಹೊರಬಿದ್ದ ಸಂಗತಿ ಇಷ್ಟು..!


ಇದೇ ಸಂದರ್ಭದಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ರೂಡ ಹಾಜರಿದ್ದರು. ಈ ಮಾತುಕತೆ ಸುಮಲತಾ ಅವರ ಜೀವನ ಪುಟಗಳನ್ನು ತೆರೆ ಮೇಲೆ ತರುವುದರ ಸುತ್ತ ಎಂಬುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾಹಿತಿ.


ಜೆಎನ್‌ಯು ಪ್ರತಿಭಟನೆಗೆ ಸಂಬಂಧಿಸಿದ ಚಿತ್ರಕ್ಕೆ ಅನುಮತಿ ನಿರಾಕರಿಸಿದ ಸೆನ್ಸಾರ್ ಬೋರ್ಡ್


ಇದು ಸಿನಿಮಾನಾ ಅಥವಾ ವೆಬ್‌ ಸರಣಿಯಾ ಎಂಬುದು ಕೂಡ ಇನ್ನೂ ರಹಸ್ಯವಾಗಿದೆ. ಆದರೆ, ನಿರ್ದೇಶಕ ಗುರು ದೇಶಪಾಂಡೆ ಅವರು ಸುಮಲತಾ ಅವರ ಜೀವನ ಕತೆಯನ್ನು ತೆರೆ ಮೇಲೆ ತರುವುದು ಪಕ್ಕಾ ಎನ್ನಲಾಗುತ್ತಿದೆ.


15 ವರ್ಷಗಳ ಬಳಿಕ ಸುದೀಪ್ ಈ ಮನೆಗೆ ಭೇಟಿ ಕೊಟ್ಟಿದ್ದು ಯಾಕೆ ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.